Film News

ಇಲಿಯಾನಾ ಬಯಕೆ ತೀರಿಸಿದ ಸಹೋದರಿ, ಗರ್ಭಿಣಿಯ ಬಯಕೆ ತೀರಿಸಿದ್ರಾ ಸಹೋದರಿ, ವೈರಲ್ ಆದ ಪೊಟೋ….!

ಗೋವಾ ಬ್ಯೂಟಿ ಇಲಿಯಾನಾ ಸಿನೆಮಾಗಳಲ್ಲಿ ಕಾಣಿಸಿಕೊಳ್ಳದೇ ಇದ್ದರೂ ಸಹ ತನ್ನ ಸೋಷಿಯಲ್ ಮಿಡಿಯಾ ಮೂಲಕ ಅಭಿಮಾನಿಗಳೊಂದಿಗೆ ಟಚ್ ನಲ್ಲೇ ಇರುತ್ತಾರೆ. ಸದಾ ಬಿಕಿನಿಯಲ್ಲೇ ಹಾಟ್ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ಬಿಕಿನಿ ಪೋಸ್ ಗಳ ಮೂಲಕ ಬಿಸಿಯನ್ನೇರಿಸುತ್ತಿದ್ದ ಇಲಿಯಾನಾ ಇದೀಗ ತಾನು ಗರ್ಭಿಣಿ ಎಂದು ಪೋಸ್ಟ್ ಮಾಡುವ ಮೂಲಕ ಹಾಟ್ ಟಾಪಿಕ್ ಆಗಿದ್ದಾರೆ. ಇದೀಗ ಆಕೆ ಮತ್ತೊಂದು ಪೊಟೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಆಕೆಯ ಕೋರಿಕೆಯನ್ನು ಸಹೋದರಿ ತೀರಿಸಿದ್ದು, ಆ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಹಾಟ್ ಬ್ಯೂಟಿ ಇಲಿಯಾನಾ ಕೆಲವು ದಿನಗಳ ಹಿಂದೆಯಷ್ಟೆ ತಾನು ಗರ್ಭಿಣಿಯಾಗಿದ್ದಾಗಿ ಹೇಳುವಂತಹ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಮದುವೆಯಾಗದೇ ಆಕೆ ಗರ್ಭಿಣಿಯಾಗಿದ್ದಾಗಿ ಸೋಷಿಯಲ್ ಮಿಡಿಯಾ ಮೂಲಕ ವಿಚಾರ ತಿಳಿಸಿದ್ದು, ಸದ್ಯ ಈ ಸುದ್ದಿ ಹಾಟ್ ಟಾಪಿಕ್ ಆಗಿದೆ. ನಟಿ ಇಲಿಯಾನಾ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಮಗುವಿನ ಟೀ ಷರ್ಟ್ ಹಾಗೂ ಕತ್ತಿನಲ್ಲಿ ಮಾಮಾ (ಅಮ್ಮಾ) ಎಂಬ ಚೈನ್ ಒಂದನ್ನು ಶೇರ್‍ ಮಾಡಿದ್ದು. ಟೀ ಶರ್ಟ್ ಮೇಲೆ ಅಂಡ್ ಸೋ ದಿ ಅಡ್ವೆಂಚರ್‍ ಬಿಗಿನ್ಸ್ ಎಂದು ಬರೆದಿದೆ. ಇದಕ್ಕೆ ಆಕೆ ಕಮ್ಮಿಂಗ್ ಸೂನ್, ನನ್ನ ಚಿನ್ನಾರಿ ಡಾರ್ಲಿಂಗ್ ನನ್ನು ಭೇಟಿಯಾಗಲು ಅತ್ಯಂತ ಆತುರದಲ್ಲಿದ್ದೇನೆ ಎಂದು ಕ್ಯಾಪ್ಷನ್ ಹಾಕಿದ್ದರು. ಈ ಪೋಸ್ಟ್ ಕಂಡ ಕೂಡಲೇ ಅಭಿಮಾನಿಗಳು ಸೇರಿದಂತೆ ಅನೇಕರು ಶಾಕ್ ಆಗಿದ್ದರು. ಇದೀಗ ಮತ್ತೊಂದು ಪೊಟೋ ಮೂಲಕ ಅಭಿಮಾನಿಗಳಲ್ಲಿ ಮತಷ್ಟು ಅನುಮಾನ ಮೂಡುವಂತೆ ಮಾಡಿದ್ದಾರೆ.

ಇನ್ನೂ ಸಾಮಾನ್ಯವಾಗಿ ಗರ್ಭಿಣಿಯಾದರೆ ಅವರಲ್ಲಿ ಕೆಲವೊಂದು ಬಯಕೆಗಳು ಮೂಡುವುದು ಸಹಜ. ಅದರಂತೆ ಇಲಿಯಾನಗಿರುವಂತಹ ಕೆಲವೊಂದು ಬಯಕೆಗಳನ್ನು ಆಕೆಯ ಕುಟುಂಬದವರು ತೀರಿಸುತ್ತಿದ್ದಾರೆ. ಇನ್ನೂ ಇಲಿಯಾನಗೆ ಫಾರೆಸ್ಟ್ ಕೇಕ್ ಎಂದರೇ ತುಂಬಾ ಇಷ್ಟವಂತೆ. ಆದ್ದರಿಂದ ಇಲಿಯಾನಾ ಸಹೋದರಿ ಬ್ಲಾಕ್ ಫಾರೆಸ್ಟ್ ಕೇಕ್ ಮಾಡಿ ಕೊಟ್ಟಿದ್ದು, ಈ ಪೊಟೋವನ್ನು ಇಲಿಯಾನಾ ತನ್ನ ಸೊಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನನ್ನ ಸಹೋದರಿ ತುಂಬಾ ಚೆನ್ನಾಗಿ ಕೇಕ್ ತಯಾರಿಸುತ್ತಾಳೆ ಎಂದು ಬರೆದುಕೊಂಡಿದ್ದಾರೆ. ಇನ್ನೂ ಕೇಕ್ ಕಟ್ ಮಾಡಿ ಅಮ್ಮಾ ಬೇಗಾ ಬಾ ಎಂದು ಸಹ ಬರೆದಿದ್ದಾರೆ ಇದೀಗ ಇಲಿಯಾನ ತನ್ನ ಬಯಕೆಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ಕುಟುಂಬದವರೂ ಸಹ ಆಕೆಗೆ ಇಷ್ಟವಾದಂತಹವನ್ನು ಮಾಡಿಕೊಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನೂ ಇಲಿಯಾನಾ ಮದುವೆಗೂ ಮುಂಚೆ ಗರ್ಭಿಣಿಯಾಗಿದ್ದಾರೆ. ಆ ಮಗುವಿನ ತಂದೆ ಯಾರು ಎಂಬುದುನ್ನು ಶೀಘ್ರವಾಗಿ ಬಹಿರಂಗ ಪಡಿಸಬೇಕೆಂದು ಅನೇಕರು ಕಾಮೆಂಟ್ ಮೂಲಕ ತಿಳಿಸುತ್ತಿದ್ದಾರೆ. ಇನ್ನೂ ಬಾಲಿವುಡ್ ಸ್ಟಾರ್‍ ನಟಿ ಕತ್ರಿನಾ ಕೈಫ್ ಸಹೋದರ ಸೆಬಾಸ್ಟಿಯನ್ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಸುದ್ದಿ ಹರಿದಾಡಿತ್ತು. ಇದೀಗ ಇಲಿಯಾನಾ ಮದುವೆಗೂ ಮುಂಚೆ ಗರ್ಭಿಣಿಯಾದ ವಿಚಾರವನ್ನು ಸೊಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿರುವುದು ಎಲ್ಲರೂ ಶಾಕ್ ಆಗುವಂತೆ ಮಾಡಿದೆ.

Most Popular

To Top