Film News

ಮುದ್ದಾದ ಗಂಡು ಮಗುವಿಗೆ ಜನ್ಮ ಕೊಟ್ಟ ಗೋವಾ ಬ್ಯೂಟಿ ಇಲಿಯಾನಾ, ಹೆಸರು ಕೂಡ ಇಟ್ಟಿದ್ದಾರೆ…..!

ಗೋವಾ ಬ್ಯೂಟಿ ಇಲಿಯಾನಾ ಕೆಲವು ತಿಂಗಳುಗಳ ಹಿಂದೆಯಷ್ಟೆ ತಾನು ಗರ್ಭಿಣಿಯೆಂದು ಸೋಷಿಯಲ್ ಮಿಡಿಯಾ ಮೂಲಕ ತಿಳಿಸಿ ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದರು. ಅಂದಿನಿಂದ ಆಕೆ ಸದಾ ಒಂದಲ್ಲ ಒಂದು ಪೋಸ್ಟ್ ಮೂಲಕ ಸದ್ದು ಮಾಡುತ್ತಲೇ ಇದ್ದರು. ಬೇಬಿಬಂಪ್ ಪೊಟೋಸ್ ಹಂಚಿಕೊಳ್ಳುತ್ತಿದ್ದರು. ಇದೀಗ ಆಕೆ ಮುದ್ದಾದ ಗಂಡು ಮಗುವಿಗೆ ಜನ್ಮ ಕೊಟ್ಟಿದ್ದು, ಈ ಸಂಬಂಧ ಆಕೆ ಪೋಸ್ಟ್ ಮೂಲಕ ಈ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಮಗನ ಪೊಟೊ ಜೊತೆಗೆ ಎಮೋಷನಲ್ ನೋಟ್ ಸಹ ಹಂಚಿಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೆ ಆಕೆ ಮದುವೆಯಾಗದೇ ತಾನು ಗರ್ಭಿಣಿ ಎಂದು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಎಲ್ಲರೂ ಶಾಕ್ ಆಗಿದ್ದರು. ಬಳಿಕ ಆಕೆ ತನ್ನ ಬೇಬಿ ಬಂಪ್ಸ್ ಜೊತೆಗೆ ಕ್ರೇಜಿ ಕಾಮೆಂಟ್ ಗಳ ಮೂಲಕ ಸದ್ದು ಮಾಡುತ್ತಲೇ ಇದ್ದಾರೆ. ಆಕೆ ಗರ್ಭಿಣಿ ಎಂಬ ವಿಚಾರವನ್ನು ರಿವೀಲ್ ಮಾಡಿ ಸುಮಾರು ತಿಂಗಳುಗಳ ಬಳಿಕ ತನ್ನ ಮಗುವಿನ ತಾಯಿ ಯಾರು ಎಂಬ ವಿಚಾರ ರಿವೀಲ್ ಮಾಡಿದ್ದಾರೆ. ಇಲಿಯಾನಾಗೆ ಮದುವೆ ಆಗಲೇ ಇಲ್ಲ. ಅಂತಹುದರಲ್ಲಿ ಆಕೆ ಗರ್ಭಿಣಿಯಾಗಿದ್ದಾರೆ, ಆ ಗರ್ಭಕ್ಕೆ ಕಾರಣ ಯಾರು ಎಂಬ ಅನುಮಾನಗಳು ಪ್ರಶ್ನೆಗಳು ಸೋಷಿಯಲ್ ಮಿಡಿಯಾದಲ್ಲಿ ಎದುರಾಗುತ್ತಲೇ ಇತ್ತು. ಕೊನೆಗೆ ಆತನ ಗರ್ಭಕ್ಕೆ ಕಾರಣ ಯಾರು ಎಂಬುದನ್ನೂ ಸಹ ರಿವೀಲ್ ಮಾಡಿದ್ದರು. ಆದರೆ ಆ ವ್ಯಕ್ತಿ ಯಾರು ಎಂಬ ಬಗ್ಗೆ ಯಾವುದೇ ಮಾಹಿತಿ ಮಾತ್ರ ಇಲ್ಲ.

ಇನ್ನೂ ಆ.1 ರಂದು ಇಲಿಯಾನಾ ಮುದ್ದಾದ ಗಂಡು ಮಗುವಿಗೆ ಜನ್ಮ ಕೊಟ್ಟಿದ್ದಾರೆ. ಈ ಸುದ್ದಿಯನ್ನು ಆಕೆ ಶನಿವಾರ ಸಂಜೆ ತನ್ನ ಸೋಷಿಯಲ್ ಮಿಡಿಯಾ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ಆಕೆ ತನ್ನ ಇನ್ಸ್ಟಾ ಖಾತೆಯಲ್ಲಿ ಈ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಮಗನ ಪೊಟೋ ಜೊತೆಗೆ ಆಕೆ ಮಗನಿಗೆ ಹೆಸರನ್ನು ಸಹ ಇಟ್ಟಿದ್ದಾರೆ. ಇಲಿಯಾನಾ ತನ್ನ ಮಗನಿಗೆ ಕೋವಾ ಫಿನಿಕ್ಸ್ ಡೊಲಾನ್ ಎಂದು ಹೆಸರಿಟ್ಟಿದ್ದಾರೆ. ಈ ಪೊಟೋಗಳ ಜೊತೆಗೆ ಆಕೆ ಒಂದು ಎಮೋಷನಲ್ ನೋಟ್ ಸಹ ಹಂಚಿಕೊಂಡಿದ್ದಾರೆ. ಈ ಪ್ರಪಂಚದೊಳಗೆ ನಮ್ಮ ಬೇಬಿ ಬಾಯ್ ನನ್ನು ಆಹ್ವಾನಿಸುವುದರಲ್ಲಿ ನಾವು ತುಂಬಾ ಸಂತೋಷವಾಗಿದ್ದೇವೆ. ಅದನ್ನು ನಾವು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ನಮ್ಮ ಮನಸ್ಸಿನಲ್ಲಿ ತುಂಬಾ ಆನಂದ ತುಂಬಿದೆ ಎಂದು ಎಮೋಷನಲ್ ನೋಟ್ ಹಂಚಿಕೊಂಡಿದ್ದಾರೆ.

ಇನ್ನೂ ಇಲಿಯಾನಾ ಹಂಚಿಕೊಂಡ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಪೋಸ್ಟ್ ಗೆ ಅಥಿಯಾ ಶೆಟ್ಟಿ, ಸೋಫಿ ಚೌದರಿ ಸೇರಿದಂತೆ ಅನೇಕ ಸೆಲೆಬ್ರೆಟಿಗಳೂ ಸಹ ಶುಭಾಷಯಗಳನ್ನು ಕೋರುತ್ತಿದ್ದಾರೆ. ಇನ್ನೂ ಅಭಿಮಾನಿಗಳು ಸಹ ಶುಭಾಷಯ ಕೋರುತ್ತಿದ್ದಾರೆ. ಇನ್ನೂ ಇಲಿಯಾನಾ ಮಗು ಹುಟ್ಟಿದ ಕೆಲವೇ ದಿನಗಳಲ್ಲಿ ಮುಖವನ್ನು ತೋರಿಸಿದ್ದಾರೆ.

Most Popular

To Top