News

ಲಂಡನ್ ನಲ್ಲಿ ಮತ್ತೆ ಕರೋನಾಂತಕ, ಹೊಸ ತಳಿಯ ಆರ್ಭಟದಿಂದ ಪಾಸಿಟೀವ್ ಪ್ರಕರಣಗಳ ಏರಿಕೆ……!

ಇಡೀ ವಿಶ್ವವನ್ನೇ ತಲ್ಲಣಗೊಳಿಸಿದಂತಹ ಕೊವಿಡ್ ನಿಂದಾದ ಸಾವು-ನೋವಿನಿಂದ ಜನ ಈಗಷ್ಟೆ ಹೊರಬರುತ್ತಿದ್ದಾರೆ. ಇನ್ನೇನು ಮಹಾಮಾರಿಯ ಕಾಟ ತಪ್ಪಿತ್ತು ಎನ್ನುವಷ್ಟರಲ್ಲಿ ಮತ್ತೊಂದು ತಳಿ ಉಗಮವಾಗುತ್ತಿದೆ. ಇದೀಗ ಮತ್ತೊಂದು ಕೋವಿಡ್ ಹೊಸ ತಳಿ ಕಾಣಿಸಿಕೊಂಡಿದೆ. ಈ ರೂಪಾಂತರಿ ತಳಿಗೆ ಎರಿಸ್ ಎಂದು ಹೆಸರಿಟ್ಟಿದ್ದು, ಇದು ಕಳೆದ ತಿಂಗಳು ಲಂಡನ್ ನಲ್ಲಿ ಪತ್ತೆಯಾಗಿದೆ. ಈ ವೈರಸ್ ಇದೀಗ ಲಂಡನ್ ನಲ್ಲಿ ಜೋರಾಗಿ ಹರಡುತ್ತಿದೆ ಎಂದು ಹೇಳಲಾಗುತ್ತಿದೆ.

ಲಂಡನ್ ನಲ್ಲಿ ಎರಿಸ್ (EG.5.1) ವೈರಸ್ ಪತ್ತೆಯಾಗಿತ್ತು. ಈ ವೈರಸ್ ಒಮಿಕ್ರಾನ್ ಗುಣಲಕ್ಷಣಗಳನ್ನು ಹೊಂದಿದ್ದು, ಒಂದೇ ತಿಂಗಳಿನಲ್ಲಿ ಶೇ.14.6 ರಷ್ಟು ಏರಿಕೆಯಾಗಿದೆಯಂತೆ. ಲಂಡನ್ ನಲ್ಲಿ ದಿನೇ ದಿನೇ ಕೋವಿಡ್ ಪಾಸಿಟೀವ್ ಕೇಸ್ ಗಳ ಸಂಖ್ಯೆ ಹೆಚ್ಚಾಗುತ್ತಿದೆಯಂತೆ. ಆಸ್ಪತ್ರೆಯಲ್ಲಿ ದಾಖಲಾಗುವವರ ಸಂಖ್ಯೆ ಸಹ ಹೆಚ್ಚಾಗಿದೆಯಂತೆ. ಇದರಿಂದ ಲಂಡನ್ ನಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಹ ಸೂಚನೆ ಬಂದಿದೆಯಂತೆ. ಜೊತೆಗೆ ವಿಶ್ವ ಆರೋಗ್ಯ ಸಂಸ್ಥೆ ಸಹ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನಿಡಿದೆ. ಜನರು ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕೆಯನ್ನು ಹಾಕಿಸಿಕೊಳ್ಳಿ ಕೋವಿಡ್ ಸಮಯದಲ್ಲಿ ತೆಗೆದುಕೊಂಡಂತಹ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲನೆ ಮಾಡಬೇಕು. ಎರಿಸ್ ವೈರಸ್ ಹರಡಲು ನಾವು ಅವಕಾಶ ಮಾಡಿಕೊಡಬಾರದೆಂದು ವಿಶ್ವಸಂಸ್ಥೆ ಸಹ ಸೂಚನೆ ನೀಡಿದೆ.

ಇನ್ನೂ ಲಂಡನ್ ಆರೋಗ್ಯ ತಜ್ಞರು ಮಾಹಿತಿಯಂತೆ ಕಳೆದು ತಿಂಗಳು ಇಳಿಮುಖವಾಗಿದ್ದ ಕೋವಿಡ್ ರೂಪಾಂತರಿ ಇದೀಗ ಅತ್ಯಂತ ವೇಗವಾಗಿ ಹರಡುತ್ತಿದೆಯಂತೆ. ದಾಖಲಾಗುತ್ತಿರುವ ಏಳು ಪ್ರಕರಣಗಳಲ್ಲಿ ಇದೊಂದಾಗಿದೆಯಂತೆ. ಈ ರೂಪಾಂತರಿ ವೈರಲ್ ಜು.3 ರಂದು ಏಷ್ಯಾದ ಭಾಗದಲ್ಲಿ ಕಾಣಿಸಿಕೊಂಟ್ಟಿತ್ತಂತೆ. ಜು.31 ರ ವೇಳೆಗೆ ಬ್ರಿಟನ್ ನಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿದೆಯಂತೆ. ಇನ್ನೂ ಈ ಹೊಸ ರೂಪಾಂತರಿ ಹರಡುವಿಕೆ ವೇಗ ಇದ್ದರೂ ಸೋಂಕಿನ ತ್ರೀವತೆ ಹೆಚ್ಚಿಲ್ಲ. ಈ ರೂಪಾಂತರಿಯಿಂದ ಲಸಿಕೆಗಳು ರಕ್ಷಣೆ ನೀಡುತ್ತಿವೆ. ಆದರೂ ಸಹ ಸುರಕ್ಷತಾ ಕ್ರಮಗಳನ್ನು ಮರೆಯಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡಿದೆ.

Most Popular

To Top