Dear all, Im good ಎಂದು ಸುಳ್ಳು ಸುದ್ದಿಯನ್ನು ನಂಬಬೇಡಿ ಎಂದ ಖ್ಯಾತ ಗಾಯಕಿ ಮಂಗ್ಲಿ….!

Follow Us :

ಸೌತ್ ಸಿನಿರಂಗದ ಸ್ಟಾರ್‍ ಸಿಂಗರ್‍ ಮಂಗ್ಲಿ ಕಾರು ಕಳೆದ ಭಾನುವಾರ ಅಫಘಾತಕ್ಕೆ ಗುರಿಯಾಗಿದ್ದು, ಈ ಕುರಿತು ಸೋಷಿಯಲ್ ಮಿಡಿಯಾದಲ್ಲಿ ವಿವಿಧ ರೀತಿಯ ಕಥನಗಳು ಹರಿದಾಡುತ್ತಿವೆ. ಈ ಕುರಿತು ಇದೀಗ ಮಂಗ್ಲಿ ರವರೇ ತಮ್ಮ ಇನ್ಸ್ಟಾ ಖಾತೆಯಲ್ಲಿ ಸ್ಟೋರಿಯನ್ನು ಹಂಚಿಕೊಂಡು Dear all, im good ಎಂದು ರೂಮರ್‍ ಗಳನ್ನು ಯಾರು ನಂಬಬೇಡಿ ಎಂದು ಹೇಳಿದ್ದಾರೆ. ಇದೀಗ ಆಕೆ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಸ್ಟಾರ್‍ ನಟಿ ಮಂಗ್ಲಿ ರಂಗಾರೆಡ್ಡಿ ಜಿಲ್ಲೆ ನಂದಿ ಗ್ರಾಮ ಕನ್ಹಾ ಆಧ್ಯಾತ್ಮಿಕ ಉತ್ಸವದಲ್ಲಿ ಭಾಗಿಯಾಗಿದ್ದರು.  ಕಾರ್ಯಕ್ರಮ ಮುಗಿಸಿಕೊಂಡು ಬೆಂಗಳೂರು ಹೈದರಾಬಾದ್ ಹೈವೇ ಮೂಲಕ ಹೈದರಾಬಾದ್ ಬರುತ್ತಿದ್ದರು. ಶಂಶಾಬಾದ್ ತೊಂಡುಪಲ್ಲಿ ಬಳಿ ಕಾರು ಅಪಘಾತಕ್ಕೆ ಒಳಗಾಗಿದ್ದು, ಮಂಗ್ಲಿ ಕಾರಿಗೆ ಸಣ್ಣ ಟ್ರಕ್ ಗುದ್ದಿದೆ. ಈ ಘಟನೆ ಭಾನುವಾರ (ಮಾ.17) ತಡರಾತ್ರಿ ನಡೆದಿದೆ. ಅದೃಷ್ಟಾವಶಾತ್ ಯಾವುದೇ ಪ್ರಮಾದ ಸಂಭವಿಸಿಲ್ಲ. ಸಣ್ಣ ಪುಟ್ಟ ಗಾಯಗಳೊಂದಿಗೆ ಮಂಗ್ಲಿ ಅಪಾಯದಿಂದ ಪಾರಾಗಿದ್ದರು. ಮಂಗ್ಲಿ ಕಾರಿಗೆ ಡಿಕ್ಕಿ ಹೊಡೆದ ವಾಹನದ ಚಾಲಕ ಕುಡಿದಿದ್ದ ಎನ್ನಲಾಗಿದೆ. ಮಂಗ್ಲಿ ಕಾರು ಹಿಂಭಾಗ ತುಂಬಾ ಡ್ಯಾಮೇಜ್ ಆಗಿತ್ತು. ಆದರೆ ಈ ಕುರಿತು ವಿವಿಧ ರೀತಿಯ ರೂಮರ್‍ ಗಳು ಕೇಳಿಬರುತ್ತಿದ್ದು, ಈ ಬಗ್ಗೆ ಮಂಗ್ಲಿ ಕ್ಲಾರಿಟಿ ಕೊಟ್ಟಿದ್ದಾರೆ.

ಸಿಂಗರ್‍ ಮಂಗ್ಲಿ ತನ್ನ ಸೋಷಿಯಲ್ ಮಿಡಿಯಾದಲ್ಲಿ ಅಪಘಾತದ ಬಗ್ಗೆ ಪೋಸ್ಟ್ ಒಂದನ್ನು ಹಾಕಿದ್ದಾರೆ. ಡಿಯರ್‍ ಆಲ್, ನಾನು ಕ್ಷೇಮವಾಗಿದ್ದೀನಿ. ನನಗೆ ಏನು ಆಗಿಲ್ಲ. ಇತ್ತೀಚಿಗೆ ಆಕಸ್ಮಿಕವಾಗಿ ಸಣ್ಣ ಅಪಘಾತ ನಡೆದಿದೆ. ಆದರೆ ಪ್ರಚಾರ ಆಗುತ್ತಿರುವ ಸುಳ್ಳು ಸುದ್ದಿಯನ್ನು ಯಾರು ನಂಬಬೇಡಿ. ನಿಮ್ಮ ಪ್ರೀತಿ ಅಭಿಮಾನಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ, ಇಂತಿ ನಿಮ್ಮ ಮಂಗ್ಲಿ ಎಂದು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದೀಗ ಪ್ರಚಾರವಾಗುತ್ತಿರುವ ಸುದ್ದಿಯಲ್ಲಿ ಸತ್ಯಾಂಶವಿಲ್ಲ. ಅದು ಸಣ್ಣ ಅಪಘಾತ ಎಂದು ಮಂಗ್ಲಿ ಕ್ಲಾರಿಟಿ ಕೊಟ್ಟಿದ್ದಾರೆ. ಆ ಮೂಲಕ ಅಭಿಮಾನಿಗಳು ಆಂದೋಲನಕ್ಕೆ ಗುರಿಯಾಗಬೇಡಿ ಎಂದು ಪರೋಕ್ಷವಾಗಿ ಹೇಳಿದ್ದಾರೆ.