ಕರ್ನಾಟಕ ರಾಜ್ಯ ಕಾಂಗ್ರೇಸ್ ಸರ್ಕಾರ ಉರುಳಿಸಲು ವಿದೇಶದಲ್ಲಿ ನಡೆಯುತ್ತಿದೆಂತೆ ಗೇಮ್ ಪ್ಲಾನ್, ಡಿಕೆ ಶಿವಕುಮಾರ್ ಸ್ಪೋಟಕ ಹೇಳಿಕೆ

ಕರ್ನಾಟಕ ರಾಜ್ಯದಲ್ಲಿ ನಡೆದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೇಸ್ ಸರ್ಕಾರವನ್ನು ಉರುಳಿಸಲು ವಿದೇಶದಲ್ಲಿ ಷಡ್ಯಂತರಗಳನ್ನು ರೂಪಿಸುತ್ತಿದ್ದಾರೆ ಎಂಬ ಸ್ಪೋಟಕ ಹೇಳಿಕೆಯನ್ನು ರಾಜ್ಯ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‍ ಸ್ಪೋಟಕ…

ಕರ್ನಾಟಕ ರಾಜ್ಯದಲ್ಲಿ ನಡೆದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೇಸ್ ಸರ್ಕಾರವನ್ನು ಉರುಳಿಸಲು ವಿದೇಶದಲ್ಲಿ ಷಡ್ಯಂತರಗಳನ್ನು ರೂಪಿಸುತ್ತಿದ್ದಾರೆ ಎಂಬ ಸ್ಪೋಟಕ ಹೇಳಿಕೆಯನ್ನು ರಾಜ್ಯ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‍ ಸ್ಪೋಟಕ ಹೇಳಿಕೆಗಳನ್ನು ನೀಡಿದ್ದಾರೆ.

ಜನರ ಆರ್ಶಿವಾದದೊಂದಿಗೆ ಸಂಪೂರ್ಣ ಬಹುಮತದಿಂದ ಕಾಂಗ್ರೆಶ್ ರಾಜ್ಯ ಸರ್ಕಾರ ಆಡಳಿತ ನಡೆಸುತ್ತಿದೆ. ಆದರೆ ವಿದೇಶದಲ್ಲಿ ನಮ್ಮ ಸರ್ಕಾರವನ್ನು ಬೀಳಿಸುವ ನಿಟ್ಟಿನಲ್ಲಿ ಷಡ್ಯಂತರ ನಡೆಸಲಾಗುತ್ತಿದೆ ಎಂದು ಮಾದ್ಯಮಗಳೊಂದಿಗೆ ಡಿಕೆಶಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಅಂತಹ ಆಪರೇಷನ್ ಮಾಡಿದರೇ ನಮಗೆ ಗೊತ್ತಾಗುತ್ತದೆ ಅಂತಾ, ವಿದೇಶದಲ್ಲಿ ಕುಳಿತುಕೊಂಡು ಆಪರೇಷನ್ ಮಾಡುತ್ತಿದ್ದಾರೆ. ಆದರೆ ಆಪರೇಷನ್ ಮಾಡುತ್ತಿರುವುದು ಯಾರು ಎಂಬ ಹೆಸರಗಳನ್ನು ಮಾತ್ರ ಅವರು ಹೇಳಿಲ್ಲ. ಇನ್ನೂ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ತಿಂಗಳು ಕಳೆಯುವುದರ ಒಳಗೆ ರಾಜ್ಯದಲ್ಲಿ ಈ ರೀತಿಯ ಬೆಳವಣಿಗೆ ಆಗುತ್ತಿರುವುದು ತೀವ್ರ ಕುತೂಹಲ ಕೆರಳಿಸಿದೆ.

ಇನ್ನೂ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷ 135 ಸ್ಥಾನಗಳನ್ನು ಪಡೆದು ಬಹುಮತದಿಂದ ಸರ್ಕಾರ ರಚಿಸಿದೆ. ನೂತನ ಕಾಂಗ್ರೇಸ್ ಸರ್ಕಾರ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಗುದ್ದುಗೆ ಏರಿದ್ದಾರೆ. ಜೊತೆಗೆ ಚುನಾವಣೆಯ ಸಮಯದಲ್ಲಿ ಕಾಂಗ್ರೇಸ್ ಸರ್ಕಾರ ಘೋಷಣೆ ಮಾಡಿದ್ದ ಎಲ್ಲಾ ಗ್ಯಾರಂಟಿಗಳನ್ನು ಹಂತ ಹಂತವಾಗಿ ಈಡೇರಿಸುತ್ತಿದೆ. ಇದೀಗ ಡಿಕೆಶಿ ಸರ್ಕಾರವನ್ನು ಅತಂತ್ರಗೊಳಿಸಲು ವಿದೇಶದಲ್ಲಿ ಷಡ್ಯಂತರ ನಡೆಯುತ್ತಿದೆ ಎಂದು ಹೇಳುವ ಮೂಲಕ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಸದ್ಯ ಡಿ.ಕೆ.ಶಿವಕುಮಾರ್‍ ನೀಡಿದ ಹೇಳಿಕೆ ಇಡೀ ರಾಜ್ಯ ರಾಜಕಾರಣದಲ್ಲೇ ಹಲ್ ಚಲ್ ಸೃಷ್ಟಿಸಿದೆ.

ಇನ್ನೂ ಡಿಕೆಶಿ ಈ ಬಗ್ಗೆ ಮಾಹಿತಿ ನೀಡಿದರೂ ಸಹ ಯಾರು ಈ ಕೆಲಸ ಮಾಡುತ್ತಿದ್ದಾರೆ ಎಂಬ ಬಗ್ಗೆ ಹೇಳಿಲ್ಲ. ರಾಜ್ಯ ನಾಯಕರು ಆಪರೇಷನ್ ಮಾಡುತ್ತಿದ್ದಾರೋ ಅಥವಾ ಕೇಂದ್ರದ ನಾಯಕರು ಮಾಡುತ್ತಿದ್ದಾರೆಯೋ ಎಂಬುದರ ಬಗ್ಗೆ ಯಾವುದೇ ಸುಳಿವು ಮಾತ್ರ ನೀಡಿಲ್ಲ. ಇನ್ನೂ ಕಳೆದ 2018 ರಲ್ಲೂ ಸಹ ಕಾಂಗ್ರೇಸ್ ಜೆಡಿಎಸ್ ಸಂಮಿಶ್ರ ಸರ್ಕಾರವನ್ನು ಆಪರೇಷನ್ ಮಾಡಿ ಪತನ ಮಾಡಲಾಗಿತ್ತು. ಇದೀಗ ಮತ್ತೆ ಆಪರೇಷನ್ ಸದ್ದು ಕೇಳಿಬರುತ್ತಿದೆ.