News

ಯಶಸ್ವಿಯಾಗಿ ಲ್ಯಾಂಡ್ ಆದ ಲ್ಯಾಂಡರ್, ಚಂದ್ರನ ಮೆಲೆ ಯಶಸ್ವಿಯಾಗಿ ಲ್ಯಾಡರ್ ಇಳಿಸಿ ಇತಿಹಾಸ ಸೃಷ್ಟಿಸಿದ ಇಸ್ರೋ….!

ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ನಮ್ಮ ಹೆಮ್ಮೆಯ ಇಸ್ರೋ ಮಾಡಿದೆ. ಚಂದ್ರಯಾನ-3 ಯಶಸ್ವಿಯಾಗಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಇಂದು ಭಾರತ ಇತಿಹಾಸ ಸೃಷ್ಟಿಸಿದೆ. ಚಂದ್ರಯಾನ 3 ಗಗನ ನೌಕೆಯ ಲ್ಯಾಂಡರ್‍  ವಿಕ್ರಮ್ ಅನ್ನು ಇಸ್ರೋ ವಿಜ್ಞಾನಿಗಳು ಇಂದು ಸಂಜೆ 6.04 ಕ್ಕೆ ಸರಿಯಾಗಿ ಚಂದ್ರನ ಮೇಲೆ ಲ್ಯಾಂಡಿಂಗ್ ಮಾಡಿದ್ದಾರೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿಸಿದ ಮೊದಲ ದೇಶ ಎಂಬ ಖ್ಯಾತಿಗೆ ಭಾರತ ಪಾತ್ರವಾಗಿದೆ.

ಕಳೆದ ಜು.14 ರಂದು ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3 ಗಗನ ನೌಕೆಯನ್ನು ಯಶಸ್ವಿಯಾಗಿ ಉಡಾಯಿಸಿತ್ತು. ಅಂದಿನಿಂದ ಚಂದ್ರಯಾನ-3 ರ ಬಗ್ಗೆ ಇಡೀ ವಿಶ್ವದಾಧ್ಯಂತ ಕೌತುಕ ಮನೆ ಮಾಡಿತ್ತು. ಈ ಗಗನಯಾನ ಯಶಸ್ವಿಯಾಗಲೆಂದು ಭಾರತದ ಜೊತೆಗೆ ಇಡೀ ವಿಶ್ವವೇ ಕಾತುರತೆಯಿಂದ ಕಾಯುತ್ತಿತ್ತು. ಚಂದ್ರನತ್ತ ಸಾಗಿದ ನೌಕೆ 41ನೇ ದಿನದ ಬಳಿಕ ಇಂದು ಸಂಜೆ ಚಂದ್ರನನ್ನು ಸೇರಿದೆ. ಇನ್ನೂ ಸಂಜೆ 5.20ಕ್ಕೆ ಚಂದ್ರನ ಮೇಲೆ ಲ್ಯಾಂಡರ್‍ ಇಳಿಸುವ ಪ್ರಕ್ರಿಯೆಯನ್ನು ಇಸ್ರೋ ವಿಜ್ಞಾನಿಗಳು ಶುರು ಮಾಡಿದ್ದರು. ಈ ಕೆಲಸ ಆರಂಭವಾದ ಕೂಡಲೇ ಕೊಟ್ಯಂತರ ಭಾರತೀಯ ಎದೆಬಡಿತ ಸಹ ಹೆಚ್ಚಾಗಿತ್ತು. ಅದನ್ನು ಇಸ್ರೋ ನೇರಪ್ರಸಾರ ಸಹ ಮಾಡಿತ್ತು. ದೇಶದ ಮೂಲೆ ಮೂಲೆಯಲ್ಲೂ ಈ ಐತಿಹಾಸಿಕ ಕ್ಷಣ ನೋಡುತ್ತಿದ್ದರು. ಜೊತೆಗೆ ಇಂದು ಬೆಳಿಗಿನಿಂದಲೇ ಚಂದ್ರನ ಮೇಲೆ ಲ್ಯಾಡರ್‍ ಯಶಸ್ವಿಯಾಗಿ ಲ್ಯಾಂಡ್ ಆಗಲಿ ಎಂದು ಪ್ರಾರ್ಥನೆ ಸಹ ಸಲ್ಲಿಸುತ್ತಿದ್ದರು. ಕೊನೆಗೆ ಯಶ್ವಿಯಾಗಿ ಚಂದ್ರನ ಮೇಲೆ ನೌಕೆ ಲ್ಯಾಂಡ್ ಆಗಿದ್ದು ಎಲ್ಲರೂ ಸಂಭ್ರಮಿಸಿದ್ದಾರೆ.

ಇನ್ನೂ ಚಂದ್ರನ ಮೇಲೆ ಭಾರತದ ನೌಕೆ ಲ್ಯಾಂಡ್ ಆಗಿದ್ದು, ಅದನ್ನು ಇಡೀ ದೇಶ ಮಾತ್ರವಲ್ಲದೇ ವಿಶ್ವದಾಧ್ಯಂತ ಸಂಭ್ರಮಿಸಿದ್ದಾರೆ. ನಿಗಧಿತ ಸಮಯದಂತೆ ಸಂಜೆ ಆರು ಗಂಟೆ ನಾಲ್ಕು ನಿಮಿಷಕ್ಕೆ ಸರಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಇಳಿದು ಇಸ್ರೋ ವಿಜ್ಞಾನಿಗಳ ತಾಕತ್ತು ಏನು ಎಂಬುದನ್ನು ತೋರಿಸಿದೆ ಎನ್ನಬಹುದಾಗಿದೆ. ದೇಶದಾದ್ಯಂತ ಪಟಾಕಿ ಸಿಡಿಸಿ ಸಂಭ್ರಮಾಚರಿಸಿದ್ದಾರೆ. ಇನ್ನೂ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ರವರು ಸಹ ವರ್ಚುವಲ್ ಮೂಲಕ ವೀಕ್ಷಣೆ ಮಾಡಿ ಇಸ್ರೋಗೆ ಅಭಿನಂದನೆ ಸಲ್ಲಿಸಿದ್ದಾರೆ.

Most Popular

To Top