News

ಕರಿಮಣಿ ಮಾಲೀಕ ರೀಲ್ಸ್ ನಿಂದಲ್ಲ ನನ್ನ ಗಂಡ ಸತ್ತಿತ್ತು, ಸಾಲ ಹೆಚ್ಚಾಗಿ: ಪತ್ನಿ ನೀಡಿದ ಸ್ಪಷ್ಟನೆ?

ಇತ್ತೀಚಿಗಷ್ಟೆ ಚಾಮರಾಜನಗರ ಜಿಲ್ಲೆಯ ಹನೂರು ತಾಲುಕಿನ ಪಿಜಿ ಪಾಳ್ಯ ಎಂಬ ಗ್ರಾಮದ ನಿವಾಸಿ ಕುಮಾರ್‍ (33) ಎಂಬುವವರು ತನ್ನ ಪತ್ನಿ ಕರಿಮಣಿ ಮಾಲೀಕ ರೀಲ್ಸ್ ಮಾಡಿದ್ದರಿಂದ ನೊಂದು ಮೃತಪಟ್ಟಿದ್ದರು ಎಂದು ಹೇಳಲಾಗಿತ್ತು. ಇದೀಗ ಮೃತ ಕುಮಾರ್‍ ಪತ್ನಿ ಈ ಆರೋಪವನ್ನು ತಳ್ಳಿಹಾಕಿದ್ದು, ತನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದು ಏಕೆ ಎಂಬ ಕಾರಣವನ್ನು ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಕರಿಮಣಿ ಮಾಲೀಕ ನೀನಲ್ಲ ಎಂಬ ರೀಲ್ಸ್ ಸದ್ಯ ತುಂಬಾನೆ ಟ್ರೆಂಡಿಂಗ್ ನಲ್ಲಿದ್ದು, ಈ ರೀಲ್ಸ್ ಕಾರಣದಿಂದ ಪಿಜಿ ಪಾಳ್ಯ ಎಂಬ ಗ್ರಾಮದ ನಿವಾಸಿ ಕುಮಾರ್‍ ಎಂಬಾತನ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಎನ್ನಲಾಗಿತ್ತು. ಆದರೆ ಆತ ಸತ್ತಿತ್ತು ರೀಲ್ಸ್ ಮಾಡಿದ್ದರಿಂದ ಅಲ್ಲ ಎಂದು ಆತನ ಪತ್ನಿ ರೂಪ ಪ್ರತಿಕ್ರಿಯೆ ನೀಡಿದ್ದಾರೆ. ನಾನು ರೀಲ್ಸ್ ಮಾಡಿದ್ದಕ್ಕಾಗಿ ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆತ ತುಂಬಾನೆ ಸಾಲ ಮಾಡಿದ್ದ, ಪ್ರತಿನಿತ್ಯ ಮದ್ಯ ಸೇವಿಸಿ ಇಸ್ಪೀಟ್ ಆಡುತ್ತಿದ್ದ. ಸಾಲ ಹೆಚ್ಚಾಗಿ ಮರುಪಾವತಿ ಮಾಡಲು ಆಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನ್ನ ಮಕ್ಕಳ ಮೇಲೆ ಆಣೆ ಮಾಡಿ ಹೇಳ್ತಿನಿ. ನಾನು ಈ ಹಿಂದೆ ಸಹ ರೀಲ್ಸ್ ಮಾಡಿದ್ದೇನೆ. ಅದು ನನ್ನ ಪತಿ ಕುಮಾರ್‍ ಗೂ ತಿಳಿದಿದ್ದು, ಇದೀಗ ನನ್ನ ಮೇಲೆ ಪತಿ ಕುಟುಂಬಸ್ಥರು ಸುಮ್ಮನೆ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇನ್ನೂ ಮೃತ ಕುಮಾರ್‍ ಪತ್ನಿ ರೂಪ ಹಾಗೂ ಆಕೆಯ ಸೋದರ ಮಾವ ಸಹೋದರಿಯ ಜೊತೆಗೆ ಕರಿಮಣಿ ಮಾಲೀಕ ನೀನಲ್ಲ ಎಂಬ ರೀಲ್ಸ್ ಮಾಡಿದ್ದರು. ಈ ರೀಲ್ಸ್ ಮಾಡಿದ್ದ ಕಾರಣದಿಂದ ಕುಮಾರ್‍ ಸ್ನೇಹಿತರು ಆತನನ್ನು ಗೇಲಿ ಮಾಡಿದ್ದರಂತೆ. ಈ ರೀಲ್ಸ್ ನಿಂದಲೇ ಕುಮಾರ್‍ ಹಾಗೂ ರೂಪ ನಡುವೆ ಜಗಳ ಸಹ ನಡೆದಿತ್ತಂತೆ. ಈ ರೀಲ್ಸ್ ನಿಂದ ಮನನೊಂದು ಕುಮಾರ್‍ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಮಾರ್‍ ಕುಟುಂಬಸ್ಥರು ಆರೋಪ ಮಾಡಿದ್ದರು.

Most Popular

To Top