Film News

ಇಂಟರ್ ನೆಟ್ ನಲ್ಲಿ ವೈರಲ್ ಆದ ಬನ್ನಿ ವೈಫ್ ಅಲ್ಲು ಸ್ನೇಹಾ ವಿಡಿಯೋ, ಸ್ಟಾರ್ ನಟಿಗಿಂತ ಕಡಿಮೆಯಿಲ್ಲ ಎಂದ ಫಾಲೋವರ್ಸ್….!

ಸಾಮಾನ್ಯವಾಗಿ ಸಿನಿರಂಗದಲ್ಲಿ ಸ್ಟಾರ್‍ ಸೆಲೆಬ್ರೆಟಿಗಳಂತೆ ಅವರ ಪತ್ನಿಯರೂ ಸಹ ಫೇಮಸ್ ಆಗಿರುತ್ತಾರೆ. ಟಾಲಿವುಡ್ ನ ಸ್ಟೈಲಿಷ್ ಸ್ಟಾರ್‍ ಅಲ್ಲು ಅರ್ಜುನ್ ಪತ್ನಿ ಸ್ನೇಹಾರೆಡ್ಡಿ ಸಹ ಸೋಷಿಯಲ್ ಮಿಡಿಯಾದಲ್ಲಿ ತುಂಬಾ ಫೇಮಸ್ ಆಗಿದ್ದಾರೆ. ಅಲ್ಲು ಅರ್ಜುನ್ ರವರನ್ನು ಐಕಾನ್ ಸ್ಟಾರ್‍ ಎಂದರೇ, ಸ್ನೇಹಾರೆಡ್ಡಿಯವರನ್ನು ಫ್ಯಾಷನ್ ಐಕಾನ್ ಎಂದು ಕರೆಯಲಾಗುತ್ತದೆ. ಇದೀಗ ಆಕೆ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡ ವಿಡಿಯೋ ಒಂದು ಸಖತ್ ವೈರಲ್ ಆಗು‌ತ್ತಿದ್ದು, ಸ್ಟಾರ್‍ ನಟಿಗಿಂತಲೂ ಕಡಿಮೆಯಿಲ್ಲ ಎಂದು ಆಕೆಯ ಫಾಲೋವರ್ಸ್ ಕಾಮೆಂಟ್ ಮಾಡುತ್ತಿದ್ದಾರೆ.

ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುವ ಸ್ನೇಹಾರೆಡ್ಡಿ ಇತ್ತಿಚಿಗೆ ಸೋಷಿಯಲ್ ಮಿಡಿಯಾದಲ್ಲಿ ಸ್ಟಾರ್‍ ನಟಿಯರಿಗಿಂತಲೂ ಕಡಿಮೆಯಿಲ್ಲ ಎಂಬಂತೆ ಹಾಟ್ ಟ್ರೀಟ್ ನೀಡುತ್ತಿದ್ದಾರೆ. ಈ ಹಾದಿಯಲ್ಲೇ ಸ್ನೇಹಾರೆಡ್ಡಿ ತನ್ನ ಇನ್ಸ್ಟಾ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಸ್ನೇಹಾ ತುಂಬಾನೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಸ್ನೇಹಾರೆಡ್ಡಿ ನರ್ಸರಿಯಲ್ಲಿ ಸಸಿಗಳ ಮಧ್ಯೆ ಬೆರತು ಹೋಗಿದ್ದಾರೆ. ನಮ್ಮ ಸುತ್ತಮುತ್ತ ಸಸಿಗಳು ಇದ್ದರೇ ಅದಕ್ಕಿಂತ ಮಿಗಿಲಾದ ಸಂತೋಷ ಏನಿರುತ್ತದೆ. ಸಸಿಗಳನ್ನು ನೋಡುತ್ತಿದ್ದರೇ ಪ್ರೀತಿಯಲ್ಲಿ ಬೀಳುತ್ತೇವೆ. ಸಸಿಗಳನ್ನು ಪೋಷಣೆ ಮಾಡುತ್ತಿದ್ದರೇ ಮನಸ್ಸಿಗೆ ತುಂಬಾನೆ ಆಹ್ಲಾದಕರವಾಗಿರುತ್ತದೆ. ಅದಕ್ಕಾಗಿ ನನಗೆ ಈ ನರ್ಸರಿ ಅತ್ಯಂತ ಇಷ್ಟವಾದ ಪ್ರದೇಶ ಎಂದು ಹೇಳಿದ್ದಾರೆ. ಇನ್ನೂ ಆಕೆ ತುಂಬಾನೆ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದು, ಎಲ್ಲರನ್ನೂ ಸೆಳೆಯುತ್ತಿದೆ.

ಇನ್ನೂ ಸ್ನೇಹಾ ರೆಡ್ಡಿ ಹಂಚಿಕೊಂಡ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಆಕೆ ಯಾವುದೇ ಸ್ಟಾರ್‍ ನಟಿಗಿಂತಲೂ ಕಡಿಮೆಯಿಲ್ಲ ಎಂಬಂತೆ ಹಾಟ್ ಪೋಸ್ ಕೊಡುತ್ತಿದ್ದಾರೆ. ಅಷ್ಟೊಂದು ಸೌಂದರ್ಯವಿದ್ದರೂ, ನಟಿಯಾಗುವಂತಹ ಎಲ್ಲಾ ಗುಣಗಳು ಇದ್ದರೂ ಸಹ ಆಕೆ ಏಕೆ ನಟಿಯಾಗಲಿಲ್ಲ ಎಂಬ ಸಂದೇಹಗಳನ್ನು ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದಾರೆ. ಇನ್ನೂ ಆಕೆ ಏನಾದರೂ ಸಿನೆಮಾಗಳಲ್ಲಿ ಎಂಟ್ರಿ ಕೊಟ್ಟಿದ್ದರೇ ಪಕ್ಕಾ ಇಂಡಸ್ಟ್ರಿಯಲ್ಲಿ ಸ್ಟಾರ್‍ ನಟಿಯಾಗುತ್ತಿದ್ದರು ಎಂಬ ಮಾತುಗಳು ಕೇಳಿಬರುತ್ತಿವೆ. ಇನ್ನೂ ಸ್ಟಾರ್‍ ನಟಿಯರನ್ನು ಮೀರಿಸುವಂತಹ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ. ವೈಯುಕ್ತಿಕ ಜೀವನವನ್ನು ಮೀರಿ ಹೊರಗಿನ ಪ್ರಪಂಚಕ್ಕೆ ತಾನು ಏನು ಎಂಬುದನ್ನು ತೋರಿಸಿಕೊಡುತ್ತಿದ್ದಾರೆ. ಸೋಷಿಯಲ್ ಮಿಡಿಯಾವನ್ನು ವೇದಿಕೆಯನ್ನಾಗಿ ಮಾಡಿಕೊಂಡು ಮಾಡಲ್ ಆಗಿ ಬದಲಾಗುತ್ತಿದ್ದಾರೆ. ಸ್ನೇಹಾ ಇಬ್ಬರ ಮಕ್ಕಳ ತಾಯಿ ಆದರೂ ಸಹ ಯಂಗ್ ನಟಿಯರಿಂತಲೂ ಕಡಿಮೆಯಿಲ್ಲ ಎಂಬಂತೆ ಕಾಣಿಸಿಕೊಳ್ಳುತ್ತಿದ್ದಾರೆ.

Most Popular

To Top