News

ಪಾಠ ಬಿಟ್ಟು ಆಟವಾಡಿದ ವಿದ್ಯಾರ್ಥಿಗೆ ಶಿಕ್ಷೆ ನೀಡಿದ ಶಿಕ್ಷಕ, ಬಸ್ಕಿ ಹೊಡೆಯುತ್ತಾ ಕುಸಿದು ಬಿದ್ದು ವಿದ್ಯಾರ್ಥಿ ಸಾವು…!

ಶಾಲೆಯೊಂದರಲ್ಲಿ ವಿದ್ಯಾರ್ಥಿಯೊಬ್ಬ ತರಗತಿಗೆ ಹಾಜರಾಗದೇ ಮೈದಾನದಲ್ಲಿ ಆಟವಾಡುತ್ತಿದ್ದನ್ನು ಕಂಡ ಶಿಕ್ಷಕ ಮೂವರು ವಿದ್ಯಾರ್ಥಿಗಳನ್ನು ಕರೆಸಿ ಬಸ್ಕಿ ಹೊಡೆಯುವ ಶಿಕ್ಷೆ ನೀಡಿದ್ದಾರೆ. ಈ ವೇಳೆ ಬಸ್ಕಿ ಹೊಡೆಯುತ್ತಾ 10 ವರ್ಷದ ಬಾಲಕ ಕುಸಿದು ಮೃತಪಟ್ಟಿದ್ದಾರೆ. ವಿದ್ಯಾರ್ಥಿಯ ಆಕ್ರಂದನ ಮುಗಿಲು ಮುಟ್ಟಿದ್ದು, ಟೀಚರ್‍ ಅಘಾತಕ್ಕೆಗೊಳಗಾಗಿದ್ದಾರೆ ಎನ್ನಲಾಗಿದೆ. ಇನ್ನೂ ಈ ಘಟನೆ ಒಡಿಶಾದ ಜಾಜ್ ಪುರದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.

ಜಾರ್ಜ್ ಪುರ ವ್ಯಾಪ್ತಿಯ ಸೂರ್ಯನಾರಾಯಣ ನೋಡಲ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ರುದ್ರ ನಾರಾಯಣ ಸೇಥಿ ಮೃತಪಟ್ಟ ಬಾಲಕ ಎಂದು ಗುರ್ತಿಸಲಾಗಿದೆ. ನ.21 ರಂದು ಮಂಗಳವಾರ ಮೃತ ಬಾಲಕ ತನ್ನ ಗೆಳೆಯರ ಜೊತೆಗೆ ಪಾಠ ಬಿಟ್ಟು ಆಟವಾಡಲು ಹೋಗಿದ್ದಾನೆ. ಅದೇ ತರಗತಿಯ ಇಬ್ಬರು ಬಾಲಕೊಂದಿಗೆ ಆಟವಾಡಿದ್ದಾನೆ. ಮದ್ಯಾಹ್ನ 3 ಗಂಟೆಯ ವೇಳೆಗೆ ರುದ್ರನಾರಾಯಣ ಹಾಗೂ ಇಬ್ಬರೂ ಬಾಲಕರು ತರಗತಿಗೆ ಹಾಜರಾಗಬೇಕಾಗಿತ್ತು. ಆದರೆ ವಿದ್ಯಾರ್ಥಿಗಳು ಪಾಠದ ಸಮಯವಾದರೂ ಆಟವಾಡುತ್ತಲೇ ಇದ್ದರು. ತರಗತಿಗೆ ಚಕ್ಕರ್‍ ಹೊಡೆದು ಆಟವಾಡಿದ ಕಾರಣಕ್ಕೆ ತರಗತಿಯ ಶಿಕ್ಷಕ ಕರೆಸಿ ಬಸ್ಕಿ ಹೊಡೆಯುವ ಶಿಕ್ಷೆ ನೀಡಿದ್ದಾರೆ. ಐದಾರು ಬಸ್ಕಿ ಹೊಡೆಯುತ್ತಿದ್ದಂತೆ ರುದ್ರ ನಾರಾಯಣ ಕುಸಿದು ಬಿದಿದ್ದಾನೆ.

ಬಳಿಕ ಅಲ್ಲಿದ್ದ ಬಾಲಕರು ಕಿರಿಚಾಡಿದ್ದಾರೆ. ಓಡಿ ಬಂದ ಟೀಚರ್‍ ತರಗತಿ ಕೊಠಡಿಗೆ ಎತ್ತಿಕೊಂಡು ಹೋಗಿದ್ದಾರೆ. ಬಿಸಿಲಿಗೆ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ ಎಂದು ಭಾವಿಸಿದ್ದ ಶಿಕ್ಷಕನಿಗೆ ಪರಿಸ್ಥಿತಿ ಕೈ ಮೀರಿದೆ ಎಂದು ಅರಿವಾಗಿ ಬೇರೆ ಶಿಕ್ಷಕರಿಗೆ ಸುದ್ದಿ ತಿಳಿಸಿದ್ದಾರೆ. ಕೂಡಲೇ ಬಾಲಕನ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಶಾಲಾ ವಾಹನದಲ್ಲಿ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಿದ್ದು, ಉನ್ನತ ಆಸ್ಪತ್ರೆಗೆ ದಾಖಲು ಮಾಡುವಂತೆ ವೈದ್ಯರು ಸೂಚಿಸಿದ್ದಾರೆ. ಬಳಿಕ ಬಾಲಕನನ್ನು ಎಸ್.ಸಿ.ಬಿ ಮೆಡಿಕಲ್ ಕಾಲೇಜಿಗೆ ದಾಖಲು ಮಾಡಿದ್ದಾರೆ. ಆದರೆ ಕುಸಿದು ಬಿದ್ದಾಗಲೇ ಬಾಲಕ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ. ಪೋಷಕರು ಆಕ್ರಂದನ ಮುಗಿಲು ಮುಟ್ಟಿದ್ದರೇ, ಶಿಕ್ಷಕ ಆಘಾತಕ್ಕೆ ಗುರಿಯಾಗಿದ್ದಾರೆ. ಆದರೆ ಈ ಕುರಿತು ಇನ್ನೂ ಯಾವುದೇ ಪ್ರಕರಣ ದಾಖಲಾಗದೇ ಇರುವುದರಿಂದ ಪ್ರಕರಣ ದಾಖಲಾದರೇ ತನಿಖೆ ನಡೆಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ ಎಂದು ತಿಳಿದುಬಂದಿದೆ.

Most Popular

To Top