ಡೆಂಗ್ಯೂ ಫೀವರ್ ನಿಂದ ಆಸ್ಪತ್ರೆಗೆ ದಾಖಲಾದ ಬಾಲಿವುಡ್ ಸ್ಟಾರ್ ನಟಿ, ಅಭಿಮಾನಿಗಳಿಗೆ ವಾರ್ನ್ ಮಾಡಿದ ಭೂಮಿ ಪಡ್ನೇಕರ್…..!

Follow Us :

ಬಾಲಿವುಡ್ ಬೋಲ್ಡ್ ಬ್ಯೂಟಿ ಭೂಮಿ ಪಡ್ನೇಕರ್ ಸದಾ ಬೋಲ್ಡ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದರು. ಸೋಷಿಯಲ್ ಮಿಡಿಯಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದ ಭೂಮಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಕೆ ಡೆಂಗ್ಯೂ ಫೀವರ್‍ ನಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿದ್ದು, ಅಭಿಮಾನಿಗಳಿಗೂ ಸಹ ವಾರ್ನಿಂಗ್ ಕೊಟ್ಟಿದ್ದಾರೆ. ಆಕೆ ಶೀಘ್ರವಾಗಿ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

ಬಾಲಿವುಡ್ ಸ್ಟಾರ್‍ ಅಂಡ್ ಬೋಲ್ಡ್ ಬ್ಯೂಟಿ ಭೂಮಿ ಪಡ್ನೇಕರ್‍ ಅನಾರೋಗ್ಯಕ್ಕೆ ಗುರಿಯಾಗಿದ್ದಾಋಎ. ಆಕೆಯನ್ನು ಡೆಂಗ್ಯೂ ಬಾದಿಸುತ್ತಿದೆ. ಈ ಕಾರಣದಿಂದ ಆಕೆ ಮುಂಬೈನಲ್ಲಿರುವ ಪ್ರವೈಟ್ ಆಸ್ಪತ್ರೆಯಲ್ಲಿ ಟ್ರೀಟ್ ಮೆಂಟ್ ತೆಗೆದುಕೊಳ್ಳುತ್ತಿದ್ದಾರೆ. ಈ ವಿಚಾರವನ್ನು ಭೂಮಿ ತನ್ನ ಸೋಷಿಯಲ್ ಮಿಡಿಯಾ ಖಾತೆಯ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದ ಎರಡು ಪೊಟೋಗಳನ್ನು ಆಕೆ ಶೇರ್ ಮಾಡಿದ್ದಾರೆ. ಆಕೆಯ ಜೊತೆಗೆ ಆಕೆಯ ಕುಟುಂಬಸ್ಥರು ಸಹ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದಾರೆ. ಜೊತೆಗೆ ನಾನು ಪಡುತ್ತಿರುವ ನೋವನ್ನು ಬೇರೆ ಯಾರೂ ಪಡಬಾರದೆಂಬ ಸಂದೇಶವನ್ನು ಸಹ ಹೇಳಿದ್ದಾರೆ.

ನಾನು ಡೆಂಗ್ಯೂ ಗೆ ಗುರಿಯಾಗಿದ್ದು, ನನ್ನಂತೆ ಯಾರೂ ಸಹ ನೋವು ಪಡಬಾರದು. ಎಚ್ಚರಿಕೆಯಿಂದ ಇರಬೇಕು. ಕೆಲವು ದಿನಗಳಿಂದ ದೇಶ ಕೆಲವೊಂದು ಪ್ರದೇಶದಲ್ಲಿ ಮಲಿನತೆ ಹೆಚ್ಚಾಗಿದೆ.  ಇದರಿಂದಾಗಿ ಡೆಂಗ್ಯೂ ಕೇಸ್ ಗಳು ಹೆಚ್ಚಾಗುತ್ತಿದೆ. ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಬೇಕು. ಪ್ರತೀ ಮನೆಯಲ್ಲಿ ಸೊಳ್ಳೆ ನಿಯಂತ್ರಣ ಮಾಡುವ ಎಲ್ಲಾ ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ಎಚ್ಚರಿಕೆಗಳನ್ನು ಸಹ ಕೊಟ್ಟಿದ್ದಾರೆ. ಜೊತೆಗೆ ದೇಹದಲ್ಲಿ ಇಮ್ಯೂನಿಟಿ ಸಹ ಬೆಳೆಸಿಕೊಳ್ಳಬೇಕು ಎಂದೂ ಸಹ ಹೇಳಿದ್ದಾರೆ. ಇನ್ನೂ ಭೂಮಿ ಹಂಚಿಕೊಂಡ ಈ ಲೇಟೆಸ್ಟ್ ಪೊಸ್ಟ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಇನ್ನೂ ಭೂಮಿ ಸಿನಿರಂಗದಲ್ಲಿ ಮಹಿಳೆಯರ ಮೇಲಾಗುವ ದೌರ್ಜನ್ಯಗಳು, ತಾರತಮ್ಯ, ಪುರುಷ ಪಾರುಪತ್ಯ ಮೊದಲಾದ ವಿಚಾರಗಳ ಬಗ್ಗೆ ನೇರವಾಗಿಯೇ ಮಾತನಾಡುತ್ತಿರುತ್ತಾರೆ. ಟಾಯ್ಲೇಟ್ ಏಕ್ ಪ್ರೇಮ ಕಥ, ಶುಭ ಮಂಗಳ್ ಸಾವಧಾನ್, ಬದಾಯಿ ಹೋ ಸೇರಿದಂತೆ ಹಲವು ಸಿನೆಮಾಗಳ ಮೂಲಕ ಆಕೆ ಫೇಂ ಪಡೆದುಕೊಂಡರು. ಪಾತ್ರ ಬೋಲ್ಡ್ ಆಗಿದ್ದರೂ ಸರಿ, ಪಾತ್ರದಲ್ಲಿ ವೈವಿಧ್ಯತೆಯಿರಬೇಕೆಂದು ಆಕೆ ಭಾವಿಸುತ್ತಾರೆ.