Film News

ಪುಷ್ಪಾ-2 ಸಿನೆಮಾದಲ್ಲಿ ಸ್ಪೇಷಲ್ ಸಾಂಗ್ ನಲ್ಲಿ ಕುಣಿಯಲಿದ್ದಾರಂತೆ ಬಾಲಿವುಡ್ ಹಾಟ್ ಬ್ಯೂಟಿ ಜಾನ್ವಿ ಕಪೂರ್…..!

ಟಾಲಿವುಡ್ ಸ್ಟಾರ್‍ ನಟ ಅಲ್ಲು ಅರ್ಜುನ್ ಹಾಗೂ ನಿರ್ದೇಶಕ ಸುಕುಮಾರ್‍ ಕಾಂಬಿನೇಷನ್ ನಲ್ಲಿ ತೆರೆಕಂಡ ಪುಷ್ಪಾ ಸಿನೆಮಾ ಭಾರಿ ಸದ್ದು ಮಾಡಿತ್ತು. ತೆಲುಗು ಸೇರಿದಂತೆ ಅನೇಕ ಭಾಷೆಗಳಲ್ಲಿ ಬಿಡುಗಡೆಯಾದ ಈ ಸಿನೆಮಾ ವಿಶ್ವದಾದ್ಯಂತ ಸದ್ದು ಮಾಡಿತ್ತು. ಇದೀಗ ಎಲ್ಲರೂ ಪುಷ್ಪಾ-2 ಸಿನೆಮಾಗಾಗಿ ಕಾಯುತ್ತಿದ್ದಾರೆ. ಈ ಸಿನೆಮಾದಲ್ಲಿನ ಸ್ಪೇಷಲ್ ಸಾಂಗ್ ಗಾಗಿ ಬಾಲಿವುಡ್ ನ ಯಂಗ್ ಬ್ಯೂಟಿ ಜಾನ್ವಿ ಕಪೂರ್‍ ರವರನ್ನು ಕರೆತರಲಿದ್ದಾರೆ ಎಂಬ ಸುದ್ದಿಯೊಂದು ಭಾರಿ ವೈರಲ್ ಆಗುತ್ತಿದೆ.

ಖ್ಯಾತ ನಿರ್ದೇಶಕ ಸುಕುಮಾರ್‍ ಪುಷ್ಪಾ-2 ಸಿನೆಮಾವನ್ನು ತುಂಬಾನೆ ಪ್ರತಿಷ್ಟೆಯಾಗಿ ತೆಗೆದುಕೊಂಡು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನೆಮಾದ ಶೂಟಿಂಗ್ ಶುರುವಾದಾಗಿನಿಂದ ತುಂಬಾನೆ ಹೈಪ್ ಕ್ರಿಯೇಟ್ ಮಾಡಿದೆ ಎಂದೇ ಹೇಳಬಹುದಾಗಿದೆ. ಈ ಸಿನೆಮಾದಲ್ಲೂ ಸಹ ಅನೇಕ ಸ್ಟಾರ್‍ ಗಳು ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ಕನ್ನಡದ ನಟಿ ಶ್ರೀಲೀಲಾ ಪುಷ್ಪಾ-2 ಸಿನೆಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದರಲ್ಲೂ ಆಕೆ ಸ್ಪೇಷಲ್ ಸಾಂಗ್ ನಲ್ಲಿ ಸೊಂಟ ಬಳುಕಿಸಲಿದ್ದಾಳೆ. ಪುಷ್ಪಾ-1 ರಲ್ಲಿ ಹೂ ಅಂಟಾವಾ ಸಾಂಗ್ ಭಾರಿ ಸೆನ್ಷೇಷನ್ ಕ್ರಿಯೇಟ್ ಮಾಡಿತ್ತು. ಈ ಹಾಡಿನಲ್ಲಿ ಸಮಂತಾ ನೃತ್ಯಕ್ಕೆ ಪಡ್ಡೆ ಹುಡುಗರಂತೂ ಈಗಲೂ ಸಹ ನಿದ್ದೆಗೆಡಿಸಿಕೊಳ್ಳುತ್ತಿದ್ದಾರೆ. ಓರ್ವ ಸ್ಟಾರ್‍ ನಟಿ ಐಟಂ ಸಾಂಗ್ ನಲ್ಲಿ ಈ ರೇಂಜ್ ಗೆ ಕುಣಿದಿದ್ದರು. ಈ ನೃತ್ಯಕ್ಕಾಗಿ ಸಮಂತಾ 5 ಕೋಟಿ ಸಂಭಾವನೆ ಸಹ ಪಡೆದುಕೊಂಡಿದ್ದಾರೆ. ಇದೀಗ ಪುಷ್ಪಾ-2 ಸಿನೆಮಾದ ಸ್ಪೇಷಲ್ ಸಾಂಗ್ ಬಗ್ಗೆ ಸುದ್ದಿ ಜೋರಾಗಿ ಕೇಳಿಬರುತ್ತಿದೆ.

ಪುಷ್ಪಾ-2 ಸಿನೆಮಾದಲ್ಲಿನ ಸ್ಪೇಷಲ್ ಹಾಡಿನಲ್ಲಿ ಸ್ಟೇಪ್ಸ್ ಹಾಕಲು ಅನೇಕ ನಟಿಯರ ಹೆಸರುಗಳು ಕೇಳಿಬಂದಿತ್ತು. ಇದೀಗ ಮತ್ತೋರ್ವ ನಟಿಯ ಹೆಸರು ಕೇಳಿಬರುತ್ತಿದೆ. ಅದರಂತೆ ಪುಷ್ಪಾ-2 ಸಿನೆಮಾದಲ್ಲಿ ಸ್ಪೇಷಲ್ ಹಾಡಿಗೆ ಹೆಜ್ಜೆ ಹಾಕಲಿದ್ದಾರಂತೆ ಬಾಲಿವುಡ್ ಯಂಗ್ ಬ್ಯೂಟಿ ಜಾನ್ವಿ ಕಪೂರ್‍. ಈ ರೀತಿಯ ಸುದ್ದಿಯೊಂದು ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಪುಷ್ಪಾ ಸಿನೆಮಾದಲ್ಲಿ ಹೂ ಅಂಟಾವಾ ಮಾಮ ಹಾಡಿಗೆ ಸ್ಟಾರ್‍ ನಟಿ ಸಮಂತಾ ಸಖತ್ ಸ್ಟೆಪ್ಸ್ ಹಾಕಿದ್ದರು. ಈ ಹಾಡು ಭಾರಿ ಸದ್ದು ಮಾಡಿತ್ತು. ದೇಶ ವಿದೇಶಗಳಲ್ಲೂ ಸಹ ಈ ಹಾಡಿನ ಹವಾ ಇತ್ತು ಎಂದೇ ಹೇಳಬಹುದು. ಇದೀಗ ನಿರ್ದೇಶಕ ಸುಕುಮಾರ್‍ ಪುಷ್ಪಾ-2 ಸಿನೆಮಾದಲ್ಲಿ ಸ್ಪೇಷಲ್ ಹಾಡನ್ನು ಪ್ಲಾನ್ ಮಾಡಿದ್ದು, ಅದರಲ್ಲಿ ಜಾನ್ವಿ ಕಪೂರ್‍ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸುದ್ದಿಯ ಬಗ್ಗೆ ಯಾವುದೇ ಅಧಿಕೃತ ಅಪ್ಡೇಟ್ ಇಲ್ಲ. ಆದರೆ ಸುದ್ದಿ ಮಾತ್ರ ಭಾರಿ ವೈರಲ್ ಆಗುತ್ತಿದೆ.

Most Popular

To Top