Film News

ಸಲ್ಮಾನ್ ಗೆ ವಾರ್ನಿಂಗ್ ಕೊಟ್ಟ ಲೇಡಿ ಜರ್ನಲಿಸ್ಟ್, ಆಕೆಗೆ ಸ್ಟ್ರಾಂಗ್ ಕಿಸ್ ಕೊಟ್ಟ ಸಲ್ಮಾನ್ ಖಾನ್…….!

ಬಾಲಿವುಡ್ ಸ್ಟಾರ್‍ ನಟ ಸಲ್ಮಾನ್ ಖಾನ್ ಪರಿಚಯ ಅಗತ್ಯವಿಲ್ಲ. ಇಂದಿಗೂ ಸಹ ಬಾಲಿವುಡ್ ನಲ್ಲಿ ಮೋಸ್ಟ್ ಎಲಿಜಿಬಲ್ ಬ್ಯಾಚಲರ್‍ ಎಂದೇ ಖ್ಯಾತಿ ಪಡೆದುಕೊಂಡ ಸಲ್ಮಾನ್ ಖಾನ್ ರವರ ಮದುವೆಯ ಬಗ್ಗೆ ಈಗಲೂ ಸಹ ಪ್ರಶ್ನೆಗಳು ಎದುರಾಗುತ್ತಲೇ ಇರುತ್ತವೆ. ವಯಸ್ಸಾದರೂ ಸಹ ಸಲ್ಮಾನ್ ಖಾನ್ ಕ್ರೇಜ್ ಮಾತ್ರ ಕೊಂಚ ಸಹ ಕಡಿಮೆಯಾಗಿಲ್ಲ. ಅಭಿಮಾನಿಗಳೊಂದಿಗೆ ತುಂಬಾ ಜಾಲಿಯಾಗಿರುವ ಸಲ್ಮಾನ್ ಖಾನ್ ಜರ್ನಲಿಸ್ಟ್ ಒಬ್ಬರಿಗೆ ಸ್ಟ್ರಾಂಗ್ ಕಿಸ್ ಕೊಟ್ಟಿದ್ದಾರೆ.

ಮುಂಬೈನಲ್ಲಿ ಇಂಟರ್‍ನ್ಯಾಷನಲ್ ಫಿಲಂ ಫೆಸ್ಟಿವಲ್ ಆಫ್ ಇಂಡಿಯಾ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ಸಹ ಭಾಗಿಯಾಗಿದ್ದರು. ಈ ಸಮಯದಲ್ಲಿ ಲೇಡಿ ಜರ್ನಲಿಸ್ಟ್ ಒಬ್ಬರನ್ನು ಗಟ್ಟಿಯಾಗಿ ಹತ್ತಿರಕ್ಕೆ ತೆಗೆದುಕೊಂಡು ಕಿಸ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನು ಕಂಡ ಅನೇಕರು ಶಾಕ್ ಆಗುತ್ತಿದ್ದಾರೆ. ಆದರೆ ಆ ಜನರ್ಲಿಸ್ಟ್ ಆತನ ಬೆಸ್ಟ್ ಫ್ರೆಂಡ್ ಅಂತೆ. ಸೀನಿಯರ್‍ ರಿಪೋರ್ಟರ್‍ ಆಗಿರುವ ತನ್ನ ಸ್ನೇಹಿತೆಯನ್ನು ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ನೋಡಿದ್ದರಂತೆ. ಕೂಡಲೇ ಆಕೆಯ ಬಳಿ ಹೋಗಿ ಮಾತನಾಡಿದ್ದಾರೆ. ಹತ್ತಿರಕ್ಕೆ ತೆಗೆದುಕೊಂಡು ಮುತ್ತಿಟ್ಟಿದ್ದಾರೆ. ಆಕೆ ಕೂಡ ಸಲ್ಮಾನ್ ಖಾನ್ ರವರನ್ನು ಮಾತನಾಡಿಸಿದ್ದಾರೆ. ಜೊತೆಗೆ ಸಲ್ಮಾನ್ ಖಾನ್ ಗೆ ಡ್ರಾಮಾ ಮಾಡಬೇಡ ಎಂದು ಆತನ ಕೆನ್ನೆ ಹಿಂಡಿದ್ದಾರೆ. ಬಳಿಕ ಸಲ್ಮಾನ್ ಖಾನ್ ಅಲ್ಲಿಂದ ಹೊರಟಿದ್ದಾರೆ. ಇನ್ನೂ ಈ ವಿಡಿಯೋ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇನ್ನೂ ಸಲ್ಮಾನ್ ಖಾನ್ ದೊಡ್ಡ ಸ್ಟಾರ್‍ ನಟನಾದರೂ ಸಹ ತನ್ನ ಸ್ನೇಹಿತೆಯನ್ನು ಗುರ್ತಿಸಿ ಮಾತನಾಡಿದ್ದು ಎಲ್ಲರನ್ನೂ ಆಶ್ಚರ್ಯಪಡಿಸಿದೆ. ಈ ವಿಡಿಯೋ ನೋಡಿದ ಅನೇಕರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಸಲ್ಮಾನ್ ಖಾನ್ ರವರನ್ನು ಎಲ್ಲರೂ ಮೆಚ್ಚುತ್ತಿದ್ದಾರೆ. ಬಾಲಿವುಡ್ ನಲ್ಲಿ ಭಾರಿ ಕ್ರೇಜ್ ಹೊಂದಿರುವ ನಟರಲ್ಲಿ ಸಲ್ಮಾನ್ ಖಾನ್ ಸಹ ಒಬ್ಬರಾಗಿದ್ದಾರೆ. ಬಾಲಿವುಡ್ ಮಾತ್ರವಲ್ಲದೇ ಇಡೀ ದೇಶದಾದ್ಯಂತ ಆತನಿಗೆ ಅಭಿಮಾನಿ ಬಳಗವಿದೆ. ಇನ್ನೂ ಸಲ್ಮಾನ್ ಖಾನ್ ಇತ್ತೀಚಿಗಷ್ಟೆ ತೆರೆಕಂಡ ಟೈಗರ್‍-3 ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಕಳೆದ ನ.12 ರಂದು ಈ ಸಿನೆಮಾ ಬಿಡುಗಡೆಯಾಗಿದೆ. ವಿಶ್ವದಾದ್ಯಂತ ಈ ಸಿನೆಮಾ ಸುಮಾರು 370 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.

Most Popular

To Top