ಸಂಚಲನಾತ್ಮಕ ನಿರ್ಣಯ ತೆಗೆದುಕೊಂಡ ಸ್ಟಾರ್ ನಟಿ ಅನುಷ್ಕಾ ಶರ್ಮಾ, ಶಾಕ್ ಆದ ಫ್ಯಾನ್ಸ್….!

Follow Us :

ಬಾಲಿವುಡ್ ಸಿನಿರಂಗದಲ್ಲಿ ಸ್ಟಾರ್‍ ಹಿರೋಯಿನ್ ಗಳಲ್ಲಿ ಅನುಷ್ಕಾ ಶರ್ಮಾ ಸಹ ಒಬ್ಬರಾಗಿದ್ದಾರೆ. ಆಕೆ ಸಿನಿರಂಗಕ್ಕೆ ಎಂಟ್ರಿಕೊಟ್ಟ ಪ್ರಾರಂಭದಲ್ಲೇ ಸೆನ್ಷೇಷನ್ ಕ್ರಿಯೇಟ್ ಮಾಡಿದ್ದರು. ಈಕೆ ಸ್ಟಾರ್‍ ನಟರ ಜೊತೆಗೆ ಅನೇಕ ಸಿನೆಮಾಗಳಲ್ಲಿ ನಟಿಸಿದ್ದು, ಸ್ಟಾರ್‍ ಡಮ್ ಗಿಟ್ಟಿಸಿಕೊಂಡರು. ಬಾಲಿವುಡ್ ನಲ್ಲಿ ಎದುರಿಲ್ಲ ನಟಿಯರಲ್ಲಿ ಆಕೆ ಸಹ ಸ್ಥಾನ ಸಂಪಾದಿಸಿಕೊಂಡಿದ್ದಾರೆ. ಇದೀಗ ಆಕೆ ತನ್ನ ಪ್ಯೂಚರ್‍ ಕೆರಿಯರ್‍ ಬಗ್ಗೆ ಸಂಚಲನಾತ್ಮಕ ಹೇಳಿಕೆಗಳನ್ನು ಕೊಟ್ಟಿದ್ದಾರೆ. ಆಕೆಯ ಕಾಮೆಂಟ್ಸ್ ನೊಡಿದ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ನಟಿ ಅನುಷ್ಕಾ ಕಳೆದ 2017 ರಲ್ಲಿ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಜೊತೆಗೆ ಸಪ್ತಪದಿ ತುಳಿದರು. ಮದುವೆಯಾದ ಬಳಿಕವೂ ಸಹ ಅನುಷ್ಕಾ ಸಿನಿರಂಗದಲ್ಲಿ ಮುಂದುವರೆಯುತ್ತಿದ್ದಾರೆ. ಸಿನಿರಂಗದಲ್ಲಿ ಬಹುಬೇಡಿಕೆಯೊಂದಿರುವ ನಟಿಯಾಗಿರುವ ಅನುಷ್ಕಾ ಶರ್ಮಾ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಬ್ಯುಸಿಯಾಗಿರುತ್ತಾರೆ. ಮದುವೆಯಾದ ಕೆಲವೇ ವರ್ಷಗಳಲ್ಲಿ ಆಕೆ ಮುದ್ದಾದ ಮಗುವಿಗೆ ಜನ್ಮ ಕೊಟ್ಟರು. ಇದರಿಂದ ಆಕೆ ಹೆಚ್ಚಾಗಿ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ. ಆಗಾಗ ಮಾತ್ರ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಮದುವೆಯಾದ ಬಳಿಕ ಅನುಷ್ಕಾ ನಾಲ್ಕು ಸಿನೆಮಾಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. ಈ  ಸಿನೆಮಾಗಳೂ ಸಹ ಆಕೆ ಮದುವೆಗೂ ಮುಂಚೆ ತೆಗೆದ ಸಿನೆಮಾಗಳಾಗಿವೆ.

ಇನ್ನೂ ನಟಿ ಅನುಷ್ಕಾ ಇತ್ತೀಚಿಗೆ ಬಾಲಿವುಡ್ ಮಿಡಿಯಾ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಆಕೆ ಕೆಲವೊಂದು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಸಂದರ್ಶನದಲ್ಲಿ ಮಾತನಾಡುತ್ತಾ ನನ್ನ ಮಗಳಾದ ವಾಮಿಕಾ ಗೆ ಇದು ಅತ್ಯಂತ ಪ್ರಮುಖವಾದ ಸಮಯವಾಗಿದೆ. ಆಕೆಯನ್ನು ನಾನು ತುಂಬಾ ಜಾಗರೂಕತೆಯಿಂದ ನೋಡಿಕೊಳ್ಳಬೇಕು. ವಿರಾಟ್ ಸಹ ಆಕೆಯನ್ನು ಚೆನ್ನಾಗಿ ನೋಡಿಕೋಳ್ಳುತ್ತಾನೆ. ಆದರೆ ತಾಯಿಯಾಗಿ ನನ್ನ ಜವಾಬ್ದಾರಿಯನ್ನು ಸಹ ನಾನು ನಿಭಾಯಿಸಬೇಕಿದೆ. ಆದ್ದರಿಂದ ನಾನು ನನ್ನ ಕುಟುಂಬಕ್ಕಾಗಿ ಸಮಯ ನೀಡಲು ಒಂದು ಗಟ್ಟಿ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಇನ್ನೂ ವರ್ಷಕ್ಕೆ ಒಂದು ಸಿನೆಮಾ ಮಾತ್ರ ಮಾಡಲು ನಿರ್ಧರಿಸಿದ್ದೇನೆ. ನನ್ನ ನಿರ್ಣಯ ಅಭಿಮಾನಿಗಳಿಗೆ ನೋವು ತರುತ್ತದೆ ಎಂದು ಗೊತ್ತು. ಆದರೆ ನನ್ನಕುಟುಂಬಕ್ಕಾಗಿ ಈ ನಿರ್ಣಯ ತೆಗೆದುಕೊಳ್ಳಬೇಕಿದೆ. ನಟಿಯಾಗಿ, ಪತ್ನಿಯಾಗಿ, ತಾಯಿಯಾಗಿ ಎಲ್ಲವನ್ನೂ ಆಸ್ವಾದಿಸಿದ್ದೇನೆ. ಸದ್ಯ ತಾಯಿಯಾಗಿ ನಾನು ತೃಪ್ತಿಯಾಗಿದ್ದೇನೆ ಎಂದಿದ್ದಾರೆ.

ಇನ್ನೂ ಅನುಷ್ಕಾ ಮದುವೆ ಬಳಿಕ ಒಂದು ಸಿನೆಮಾದಲ್ಲಿ ಸಹ ನಟಿಸಿಲ್ಲ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಹೇಳಿಕೆಗಳು ವೈರಲ್ ಆಗುತ್ತಿವೆ. ಆಕೆಯ ಅಭಿಮಾನಿಗಳು ಮಾತ್ರ ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಅನುಷ್ಕಾ ಮದುವೆಯಾದರೂ ಸಹ ಅದೇ ಗ್ಲಾಮರ್‍ ಮೈಂಟೈನ್ ಮಾಡುತ್ತಿದ್ದಾರೆ. ಸೊಷಿಯಲ್ ಮಿಡಿಯಾದಲ್ಲಿ ಆಗಾಗ ಆಕೆ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಲೇ ಇರುತ್ತಾರೆ.  ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಅನುಷ್ಕಾ ಮತ್ತೆ ಸಿನೆಮಾಗಳಲ್ಲಿ ಬ್ಯುಸಿಯಾಗಬೇಕು ಎಂದು ಅಭಿಮಾನಿಗಳು ಕೋರುತ್ತಿದ್ದಾರೆ.