ರೇಪ್ ದೃಶ್ಯಗಳಲ್ಲಿ ಆ ರೀತಿ ನಟಿಸಿದ ಏಕೈಕ ನಟಿ ನಾನು ಮಾತ್ರ ಎಂದ ರವಿನಾ ಟಂಡನ್, ಹಾಟ್ ಕಾಮೆಂಟ್ಸ್ ವೈರಲ್…!

ಬಾಲಿವುಡ್ ಸಿನಿರಂಗದ ಸ್ಟಾರ್‍ ನಟಿ ರವಿನಾ ಟಂಡನ್ ಅನೇಕ ಸಿನೆಮಾಗಳಲ್ಲಿ ನಟಿಸಿ ತನ್ನದೇ ಆದ ಫೇಂ ಸಂಪಾದಿಸಿಕೊಂಡಿದ್ದರು. ಇದರ ಜೊತೆಗೆ ತೆಲುಗಿನಲ್ಲೂ ಸಹ ರವಿನಾ ಅನೇಕ ಸಿನೆಮಾಗಳನ್ನು ಮಾಡಿದ್ದಾರೆ. ತೆಲುಗಿನಲ್ಲಿ ಆಕಾಶ ವಿಧಿಲೋ, ಪಾಂಡವಲು ಪಾಂಡವಲು ತುಮ್ಮೆದ ಸಿನೆಮಾಗಳಲ್ಲಿ ನಟಿಸಿ ತೆಲುಗು ಪ್ರೇಕ್ಷಕರನ್ನೂ ಸಹ ರಂಜಿಸಿದ್ದರು. ಅದರಲ್ಲೂ ಇಡೀ ದೇಶದ ಅನೇಕ ಸಿನಿಮಾಗಳ ರೆಕಾರ್ಡ್‌ಗಳನ್ನು ಬ್ರೇಕ್ ಮಾಡಿದಂತಹ ಕೆಜಿಎಫ್ ಸಿನೆಮಾದಲ್ಲೂ ಸಹ ನಟಿಸಿ ದೇಶವ್ಯಾಪಿ ಖ್ಯಾತಿ ಪಡೆದುಕೊಂಡರು. ಇನ್ನೂ ಆಕೆಯ ವಯಸ್ಸು 47 ಆದರೂ ಸಹ ಇನ್ನೂ ಯಂಗ್ ನಟಿಯಂತೆ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಆಕೆ ರೇಪ್, ಕಿಸ್ ದೃಶ್ಯಗಳ ಬಗ್ಗೆ ಹಾಟ್ ಕಾಮೆಂಟ್ಸ್ ಮಾಡಿದ್ದಾರೆ.

ಸೀನಿಯರ್‍ ನಟಿ ರವಿನಾ ಟಂಡನ್ ಕೆಜಿಎಫ್-2 ಸಿನೆಮಾದಲ್ಲಿ ಪ್ರಧಾನ ಮಂತ್ರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸುಮಾರು ದಿನಗಳ ಬಳಿಕ ರವಿನಾ ಇಂತಹ ಪವರ್‍ ಪುಲ್ ಪಾತ್ರದಲ್ಲಿ ನಟಿಸಿದ್ದರು. ಇನ್ನೂ ಆಕೆಯ ಅಭಿನಯಕ್ಕೆ ಒಳ್ಳೆಯ ಪ್ರಶಂಸೆಗಳು ಸಹ ಬಂತು. 90 ರ ದಶಕದಲ್ಲಿ ಬಾಲಿವುಡ್ ನಲ್ಲಿ ಸ್ಟಾರ್‍ ನಟಿಯಾಗಿ ಅನೇಕ ಹಿಟ್ ಸಿನೆಮಾಗಳಲ್ಲಿ ನಟಿಸಿದ್ದಾರೆ. ಅನೇಕ ಸ್ಟಾರ್‍ ಗಳ ಜೊತೆಗೆ ನಟಿಸಿ ಫೇಂ ಸಂಪಾದಿಸಿಕೊಂಡಿದ್ದರು. ಎಲ್ಲ ನಟಿಯರಂತೆ ರವಿನಾ ಸಹ ಸಿನಿರಂಗದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಿದ್ದರಂತೆ. ಈ ಬಗ್ಗೆ ಅನೇಕ ಬಾರಿ ಆಕೆಯೇ ಹೇಳಿದ್ದಾರೆ. ಇದೀಗ ರಿವಿನಾ ತನಗೆ ಎದುರಾದ ಅವಮಾನದ ಬಗ್ಗೆ ಒಪೆನ್ ಆಗಿದ್ದಾರೆ. ನನಗೆ ಕಿರಿಕಿರಿ ಉಂಟಾಗುವಂತಹ ಸನ್ನಿವೇಶದಲ್ಲಿ ನಾನು ನಟಿಸುತ್ತಿರಲಿಲ್ಲ. ಅದರಿಂದ ನನ್ನನ್ನು ಅಹಂಕಾರಿ ಎಂಬ ಮುದ್ರೆಯನ್ನು ಸಹ ಹಾಕಿದರು. ಇದು ನನ್ನ ಕೆರಿಯರ್‍ ಪ್ರಾರಂಭದಲ್ಲಿ ಬಹಳಷ್ಟು ನಡೆಯಿತು.

ಇನ್ನೂ ನನಗೆ ಅಡ್ಜಸ್ಟ್ ಆಗದಂತಹ ದೃಶ್ಯಗಳಲ್ಲಿ ನಾನು ನಟಿಸುತ್ತಿರಲಿಲ್ಲ. ಸ್ವಿಮ್ಮಿಂಗ್ ಡ್ರೆಸ್ ಧರಿಸುವುದಕ್ಕೆ ಒಲ್ಲೆ ಎನ್ನುತ್ತಿದ್ದೆ. ಎಂದೂ ಸಹ ಕಿಸ್ ಮಾಡುವ ದೃಶ್ಯಗಳಲ್ಲಿ ನಟಿಸಿಲ್ಲ. ಎರಡು ರೇಪ್ ದೃಶ್ಯಗಳಲ್ಲಿ ಮಾತ್ರ ನಟಿಸಿದ್ದೆ. ಅದರಲ್ಲೂ ಸಹ ಡ್ರೆಸ್ ಹರಿದಂತೆ ಸಹ ಕಾಣಿಸಬಾರದು, ಅಸಭ್ಯವಾಗಿ ಅನ್ನಿಸಬಾರದು ಎಂದು ಕಂಡಿಷನ್ ಸಹ ಹಾಕಿದ್ದೆ. ಇನ್ನೂ ನನ್ನ ಡ್ರೆಸ್ ಸಹ ಕೊಂಚ ಸಹ ಚದುರದಂತೆ ನೋಡಿಕೊಳ್ಳುತ್ತಿದ್ದೆ. ರೇಪ್ ದೃಶ್ಯಗಳಲ್ಲಿ ಆ ಮಾದರಿಯಲ್ಲಿ ನಟಿಸಿದ ಏಕೈಕ ಹಿರೋಯಿನ್ ನಾನು ಮಾತ್ರ. ಈ ಕಾರಣದಿಂದ ನನ್ನನ್ನು ಅಹಂಕಾರಿ ಎಂತಲೂ ಕರೆದರು. ಕರಿಷ್ಮಾ ಕಪೂರ್‍ ನಟಿಸಿದ ಪ್ರೇಮ ಖೈದಿ ಸಿನೆಮಾದಲ್ಲಿ ಒಂದು ದೃಶ್ಯ ನನಗೆ ಇಷ್ಟವಾಗಲಿಲ್ಲ. ಆ ಕಾರಣದಿಂದ ಆ ಸಿನೆಮಾವನ್ನು ಸಹ ರಿಜೆಕ್ಟ್ ಮಾಡಿದೆ. ಈ ರೀತಿ ನಾನು ಅನೇಕ ಸಿನೆಮಾಗಳನ್ನು ತಿರಸ್ಕರಿಸಿದ್ದೆ ಎಂದು ರಿವಿನಾ ಹೇಳಿದ್ದಾರೆ.

Previous articleನಾಗರದಂತೆ ಜಡೆ, ಮೈನವಿರೇಳಿಸುವಂತಹ ಸೌಂದರ್ಯದ ಮೂಲಕ ಅಭಿಮಾನಿಗಳಿಗೆ ಹಾಟ್ ಟ್ರೀಟ್ ಕೊಟ್ಟ ಸ್ಟಾರ್ ಕಿಡ್ ಜಾನ್ವಿ….!
Next articleಆ ಲಕ್ಷಣಗಳಿರುವ ವ್ಯಕ್ತಿಯನ್ನೆ ಮದುವೆಯಾಗಲಿದ್ದಾರಂತೆ ನ್ಯಾಷನಲ್ ಕ್ರಷ್ ರಶ್ಮಿಕಾ…!