ರಕುಲ್ ಪ್ರೀತ್ ಮಾಡಿದ ಕೆಲಸಕ್ಕೆ ಎಲ್ಲರಿಂದ ಪ್ರಶಂಸೆ, 520 ಗಿಡಗಳನ್ನು ನೆಟ್ಟ ರಕುಲ್, 520 ಗಿಡಗಳು ಏಕೆ ಗೊತ್ತಾ?

Follow Us :

ಸೌತ್ ಅಂಡ್ ನಾರ್ತ್ ಸಿನಿರಂಗದ ಬಹುಬೇಡಿಕೆ ನಟಿ ರಕುಲ್ ಪ್ರೀತ್ ಸಿಂಗ್ ಇತ್ತೀಚಿಗಷ್ಟೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ಫೆ.21 ರಂದು ರಕುಲ್ ಪ್ರೀತ್ ಸಿಂಗ್ ಬಾಲಿವುಡ್ ನಟ ಕಂ ನಿರ್ಮಾಪಕ ಜಾಕಿ ಭಗ್ನಾನಿ ಎಂಬಾತನೊಂದಿಗೆ ಮದುವೆಯಾದರು. ಸುಮಾರು ದಿನಗಳ ಕಾಲ ಪ್ರೀತಿಸಿದ ಈ ಜೋಡಿ ಕಳೆದ ವರ್ಷ ತಮ್ಮ ಪ್ರೀತಿಯ ವಿಚಾರವನ್ನು ಸೋಷಿಯಲ್ ಮಿಡಿಯಾ ಮೂಲಕ ಹಂಚಿಕೊಂಡಿದ್ದರು. ಬಳಿಕ ಫೆ.21 ರಂದು ಗೋವಾದ ದುಬಾರಿ ರೆಸಾರ್ಟ್‌ನಲ್ಲಿ ಅದ್ದೂರಿಯಾಗಿ ಮದುವೆಯಾದರು. ಇದೀಗ ಅವರು 520 ಗಿಡಗಳನ್ನು ನೆಟ್ಟು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದೀಗ ಅವರು 520 ಗಿಡಗಳನ್ನು ನೆಟ್ಟ ಹಿಂದೆ ಒಂದು ಕಾರಣ ಸಹ ಇದೆ.

ಸುಮಾರು ವರ್ಷಗಳ ಕಾಲ ನಿಗೂಢವಾಗಿ ಪ್ರೀತಿಸಿದ ರಕುಲ್ ಪ್ರೀತ್ ಹಾಗೂ ಜಾಕಿ ಭಗ್ನಾನಿ ಇದೀಗ ಅಧಿಕೃತವಾಗಿ ಸಪ್ತಪದಿ ತುಳಿದು ಪತಿ-ಪತ್ನಿಯಾಗಿದ್ದಾರೆ. ಗೋವಾದ ದುಬಾರಿ ರೆಸಾರ್ಟ್‌ನಲ್ಲಿ ಈ ಜೋಡಿಯ ಮದುವೆ ಅದ್ದೂರಿಯಾಗಿ ನೆರವೇರಿದೆ. ಈ ಜೋಡಿ ಸಂಪ್ರದಾಯಬದ್ದವಾದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ರಕುಲ್ ಪಿಂಕ್ ಕಲರ್‍ ಲೆಹಂಗಾದಲ್ಲಿ ತುಂಬಾನೆ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ನೂತನ ವಧು ವರರು ಇಬ್ಬರೂ ಸಂತೋಷದಿಂದ ಕಾಣಿಸಿಕೊಂಡಿದ್ದಾರೆ. ಕುಟುಂಬಸ್ಥರು, ಸ್ನೇಹಿತರ ಸಮಕ್ಷಮದಲ್ಲಿ ರಕುಲ್ ಹಾಗೂ ಜಾಕಿ ಮದುವೆ ಅದ್ದೂರಿಯಾಗಿ ನೆರವೇರಿದೆ. ಇದೀಗ ಈ ಜೋಡಿ ತಮ್ಮ ಮದುವೆಗೆ ಬಂದ ಪ್ರತಿ ಅತಿಥಿಯ ಹೆಸರಿನಲ್ಲಿ ಗಿಡವೊಂದನ್ನು ನೆಟ್ಟಿದ್ದಾರೆ. ಆ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. ಸದ್ಯ ಆಕೆಯ ಈ ಕೆಲಸಕ್ಕೆ ಎಲ್ಲ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ನಟಿ ರಕುಲ್ ಹಾಗೂ ಜಾಕಿ ಮದುವೆ ಗೋವಾದಲ್ಲಿ ಫೆ.21 ರಂದು ಅದ್ದೂರಿಯಾಗಿ ನೆರವೇರಿದೆ. ಈ ಜೋಡಿಯ ಮದುವೆ ತುಂಬಾ ಅದ್ದೂರಿಯಾಗಿ ನಡೆದಿದ್ದು, ಈ ಮದುವೆಗೆ 520 ಮಂದಿ ಅತಿಥಿಗಳು ಆಗಮಿಸಿದ್ದರಂತೆ. ಈ ಹಿನ್ನೆಲೆಯಲ್ಲಿ ರಕುಲ್ ಹಾಗೂ ಜಾಕಿ 520 ಮಂದಿ ಹೆಸರಿನಲ್ಲಿ ಸಸಿ ನೆಟ್ಟಿದ್ದಾರೆ. ಇನ್ನೂ ದೊಡ್ಡ ದೊಡ್ಡ ಸಮಾರಂಭಗಳು ನಡೆದಾಗ ಪರಿಸರಕ್ಕೆ ಹಾನಿಯಾಗುತ್ತದೆ. ಅದರಲ್ಲೂ ಸೆಲೆಬ್ರೆಟಿಗಳ ಮದುವೆ ಎಂದರೇ ಮತಷ್ಟು ಪರಿಸರಕ್ಕೆ ಹಾನಿಯಾಗುತ್ತದೆ. ಆದ್ದರಿಂದ ಆ ಹಾನಿಯನ್ನು ಕಡಿಮೆ ಮಾಡುವ ಉದ್ದೇಶದಿಂದ ರಕುಲ್ ಹಾಗೂ ಜಾಕಿ 520 ಸಸಿಗಳನ್ನು ನೆಟ್ಟು ಅದರ ಪ್ರಮಾಣ ಪತ್ರಗಳನ್ನು ಸಹ ಆ ಅತಿಥಿಗಳಿಗೆ ಕಳುಹಿಸಿದ್ದಾರೆ. ಇದೀಗ ಈ ಪ್ರಮಾಣ ಪತ್ರ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೆ ನಟಿ ಜೂಗಿ ಚಾವ್ಲಾ ಸಹ ತಮ್ಮ ಮಗಳ ಹುಟ್ಟುಹಬ್ಬದಂದು ಸಾವಿರ ಗಿಡಗಳನ್ನು ನೆಟ್ಟು ಅನೇಕರಿಗೆ ಮಾದರಿಯಾಗಿದ್ದಾರೆ.