ಖ್ಯಾತ ಬಾಲಿವುಡ್ ನಟಿ ಪೂನಂ ಪಾಂಡೆ ನಿಧನ, ಗರ್ಭಕಂಠ ಕ್ಯಾನ್ಸರ್ ನಿಂದ ಮೃತಪಟ್ಟ ನಟಿ……!

Follow Us :

ಬಾಲಿವುಡ್ ಹಾಟ್ ನಟಿ ಪೂನಂ ಪಾಂಡೆ ಗರ್ಭಕಂಠ ಕ್ಯಾನ್ಸರ್ ವ್ಯಾಧಿಯಿಂದ ಮೃತಪಟ್ಟಿದ್ದಾರೆ. ಈ ಸುದ್ದಿಯನ್ನು ಆಕೆಯ ಮ್ಯಾನೇಜರ್‍ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಪೂನಂ ಪಾಂಡೆ ಇನ್ಸ್ಟಾ ಖಾತೆಯಲ್ಲಿ ಅಧಿಕೃತವಾಗಿ ಪೂನಂ ತಂಡ ಪೋಸ್ಟ್ ಮಾಡಿದ್ದಾರೆ. ಈ ಸುದ್ದಿಯನ್ನು ತಿಳಿದ ಪೂನಂ ಅಭಿಮಾನಿಗಳು ಕ್ಷಣ ಶಾಕ್ ಆಗಿದ್ದಾರೆ. ಅಭಿಮಾನಿಗಳು ಸೇರಿದಂತೆ ಸಿನೆಮಾ ಸೆಲೆಬ್ರೆಟಿಗಳು ಆಕೆಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸುತ್ತಿದ್ದಾರೆ.

ಮಾಡಲಿಂಗ್ ಮೂಲಕ ಕೆರಿಯರ್‍ ಪ್ರಾರಂಭಿಸಿದ ಪೂನಂ ಪಾಂಡೆಯನ್ನು ಬೋಲ್ಡ್ ನೆಸ್ ಗೆ ಕೆರಾಫ್ ಅಡ್ರೆಸ್ ಎಂದೇ ಕರೆಯಲಾಗುತ್ತದೆ. ಆಕೆ ಅಶ್ಲೀಲ ಚಿತ್ರಗಳ ಮೂಲಕ ಸಖತ್ ಸದ್ದು ಮಾಡಿದ್ದರು. ಯಾರು ಏನೇ ಹೇಳಿದರೂ ನಾನು ನನ್ನ ಇಷ್ಟ ಎಂಬಂತೆ ಆಕೆ ಬೋಲ್ಡ್ ಆಗಿಯೇ ಅನೇಕ ಸಿನೆಮಾಗಳಲ್ಲಿ ಸಹ ನಟಿಸಿದ್ದಾರೆ. ಜೊತೆಗೆ ಆಕೆ ಒಂದು ಸ್ವಂತ ಆಪ್ ಅನ್ನು ಸಹ ಲಾಂಚ್ ಮಾಡಿಕೊಂಡಿದ್ದರು. ಸದ್ಯ 32 ನೇ ವಯಸ್ಸಾಗಿರುವ ಪೂನಂ ಕ್ಯಾನ್ಸರ್‍ ವ್ಯಾಧಿಯಿಂದ ಮೃತಪಟ್ಟಿದ್ದಾರೆ. ಈ ಕುರಿತು ಪೂನಂ ತಮ್ಮ ಇನ್ಸ್ಟಾ ಖಾತೆಯಲ್ಲಿ ಅಧಿಕೃತವಾಗಿ ಪೋಸ್ಟ್ ಮಾಡಿದ್ದಾರೆ. ಇಂಡಿನ ಬೆಳಿಗ್ಗೆ ನಮಗೆಲ್ಲರಿಗೂ ಕಠಿಣ ದಿನವಾಗಿತ್ತು. ಗರ್ಭಕಂಠ ಕ್ಯಾನ್ಸರ್‍ ಕಾರಣದಿಂದ ನಾವು ಪೂನಂ ರವರನ್ನು ಕಳೆದುಕೊಂಡಿದ್ದೇವೆ ಎಂದು ತಿಳಿಸಲು ದುಃಖವಾಗುತ್ತಿದೆ. ಆಕೆಯೊಂದಿಗೆ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರೊಂದಿಗೂ ದಯೆಯಿಂದ ಭೇಟಿಯಾಗುತ್ತಿದ್ದರು. ಈ ದುಃಖದ ಸಮಯದಲ್ಲಿ ನಾವು ನಮ್ಮ ಖಾಸಗಿತನಕ್ಕಾಗಿ ವಿನಂತಿ ಮಾಡುತ್ತಿದ್ದೇವೆ. ಆಕೆಯೊಂದಿಗೆ ಹಂಚಿಕೊಂಡ ಎಲ್ಲಾ ಕ್ಷಣಗಳನ್ನು ನಾವು ನೆನಪಿಸಿಕೊಳ್ಳುತ್ತಿದ್ದೇವೆ, ಫೆ.1 ರಂದು ಅವರ ನಿಧನವಾಗಿದೆ ಎಂದು ತಿಳಿಸಿದ್ದಾರೆ.

ಇನ್ನೂ ಪೂನಂ ಪಾಂಡೆ ರವರು ತಮ್ಮ ತವರು ಕಾನ್ಪುರದಲ್ಲಿರುವ ಮನೆಯಲ್ಲಿ ನಿಧನರಾಗಿದ್ದಾರೆ. ಅಂತ್ಯಸಂಸ್ಕಾರದ ಕುರಿತು ಮಾಹಿತಿ ಇನಷ್ಟೆ ಬರಬೇಕಿದೆ. ತಮ್ಮ ವಿವಾದಿತ ಮಾತುಗಳಿಂದ ತುಂಬಾನೆ ಖ್ಯಾತಿ ಪಡೆದಿದ್ದರು. ಸೋಷಿಯಲ್ ಮಿಡಿಯಾದಲ್ಲಂತೂ ಆಕೆ ತುಂಬಾನೆ ಫಾಲೋಯಿಂಗ್ ಪಡೆದುಕೊಂಡಿದ್ದರು. ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿರುವ ಪೂನಂ ಪಾಂಡೆ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಆಕೆಯ ಅಭಿಮಾನಿಗಳು ಶಾಕ್ ಆಗಿದ್ದಾರೆ. ಕೆಲವು ದಿನಗಳಿಂದೆಯಷ್ಟೆ ಪೂನಂ ಗೆ ಗರ್ಭಕಂಠ ಕ್ಯಾನ್ಸರ್‍ ಇದೆ ಎಂಬ ಸುದ್ದಿ ಗೊತ್ತಾಗಿತ್ತು. ಆದರೆ ಅದಾಗಲೇ ಕಾಲ ಮೀರಿ ಹೋಗಿತ್ತು. ಆಕೆ ಉತ್ತರ ಪ್ರದೇಶದಲ್ಲಿದ್ದ ಮನೆಯಲ್ಲಿದ್ದರು. ಅಂತ್ಯಸಂಸ್ಕಾರ ಸಹ ಅಲ್ಲಿಯೇ ನಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.