ಅದ್ದೂರಿಯಾಗಿ ನಡೆದ ಸಿಂಗರ್ ಗೀತಾ ಮಾಧುರಿ ಸೀಮಂತ ಕಾರ್ಯಕ್ರಮ, ವೈರಲ್ ಆದ ಪೊಟೋಸ್……!

Follow Us :

ಟಾಲಿವುಡ್ ಸ್ಟಾರ್‍ ಸಿಂಗರ್‍ ಗೀತಾ ಮಾಧುರಿ ರವರ ಪರಿಚಯದ ಅವಶ್ಯಕತೆ ಹೆಚ್ಚಾಗಿ ಬೇಕಾಗಿಲ್ಲ. ಅನೇಕ ಸಿನೆಮಾಗಳಲ್ಲಿ ಹಾಡುಗಳನ್ನು ಹಾಡುವ ಮೂಲಕ ಖ್ಯಾತಿ ಪಡೆದುಕೊಂಡ ಗೀತಾ ಮಾಧುರಿ ಮತ್ತೊಮ್ಮೆ ತಾಯಿಯಾಗಲಿದ್ದಾರೆ. ಶೀಘ್ರದಲ್ಲೇ ಆಕೆ ಮಗುವಿಗೆ ಜನ್ಮ ಕೊಡಲಿದ್ದು, ಈ ಸಂಬಂಧ ಸೀಮಂತ ಕಾರ್ಯಕ್ರಮ ಸಹ ನೆರವೇರಿದ್ದು, ಈ ಪೊಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಸಿಂಗರ್‍ ಗೀತಾ ಮಾಧುರಿ ಹಾಗೂ ಆಕೆಯ ಪತಿ ನಂದು ಜೋಡಿಗೆ ದಾಕ್ಷಾಯನಿ ಎಂಬ ಮಗಳಿದ್ದಾರೆ. ಎರಡನೇ ಸಾರಿ ಆಕೆ ಇದೀಗ ಗರ್ಭಿಣಿಯಾಗಿದ್ದಾರೆ. ಡಿಸೆಂಬರ್‍ ಮಾಹೆಯಲ್ಲಿ ಆಕೆ ಗರ್ಭಿಣಿಯಾಗಿದ್ದ ವಿಚಾರವನ್ನು ಹೇಳಿದ್ದಾರೆ. ಇದೀಗ ಫೆಬ್ರವರಿ ಮಾಹೆಯಲ್ಲಿ ಮತ್ತೊಂದು ಮಗುವಿಗೆ ಜನ್ಮ ಕೊಡಲಿದ್ದಾರೆ. ಇದೀಗ ಆಕೆ ತುಂಬು ಗರ್ಭಿಣಿಯಾಗಿದ್ದು, ಆಕೆಯ ಸೀಮಂತ ಕಾರ್ಯಕ್ರಮವನ್ನು ಅದ್ದೂರಿಯಾಗಿ ನೆರವೇರಿಸಿದ್ದರು. ಈ ಕಾರ್ಯಕ್ರಮದಲ್ಲಿ ಆಕೆಯ ಕುಟುಂಬ ಸದಸ್ಯರು, ಸ್ನೇಹಿತರು ಹಾಗೂ ಹತ್ತಿರದ ಸಂಬಂಧಿಗಳು ಭಾಗವಹಿಸಿದ್ದರು. ಆಕೆ ಹಸಿರು ಬಣ್ಣದ ಕಲರ್‍ ಕಾಂಬಿನೇಷನ್ ನಲ್ಲಿರುವ ಸೀರೆಯಲ್ಲಿ ಮಿಂಚಿದ್ದಾರೆ. ವೇದಿಕೆಯನ್ನು ಹೂಗಳಿಂದ ಸಿಂಗರಿಸಿದ್ದರು. ಈ ಸಂಬಂಧ ಪೊಟೋಗಳು ಹಾಗೂ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಪೊಟೋಗಳಿಗೆ ಅಭಿಮಾನಿಗಳು, ಸಿನೆಮಾ ಸೆಲೆಬ್ರೆಟಿಗಳು ಸೇರಿದಂತೆ ಅನೇಕರು ಶುಭಾಷಯಗಳು ಹಾಗೂ ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ.

ಸಿಂಗರ್‍ ಗೀತಾ ಮಾಧುರಿ ಹಾಗೂ ನಂದು ರವರದ್ದು ಪ್ರೇಮವಿವಾಹವಾಗಿದೆ. 2014 ರಲ್ಲಿ ಈ ಜೋಡಿಯ ಮದುವೆ ಅದ್ದೂರಿಯಾಗಿ ನೆರವೇರಿದೆ. ಅವರ ಪ್ರೀತಿಗೆ ಸಾಕ್ಷಿಯಾಗಿ 2019ರಲ್ಲಿ ಗೀತಾ ಮಾಧುರಿ ಹಾಗೂ ನಂದು ದಂಪತಿಗಳಿಗೆ ದಾಕ್ಷಾಯನಿ ಹಾಗೂ ಪ್ರಕೃತಿ ಎಂಬ ಮಗಳು ಹುಟ್ಟಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಗೀತು ಹಾಗೂ ನಂದೂ ಬೇರೆಯಾಗಲಿದ್ದಾರೆ ಎಂಬ ಸುದ್ದಿಗಳು ಸಹ ಕೇಳಿಬಂದಿತ್ತು. ಈ ರೂಮರ್‍ ಕೇಳಿದ ಗೀತಾ ಮಾಧುರಿ ಸಹ ಚೆನ್ನಾಗಿ ನಕ್ಕಿದ್ದಾಗಿ ಸಹ ಹೇಳಿಕೊಂಡಿದ್ದರು. ಸದ್ಯ ಶೀಘ್ರದಲ್ಲೇ ಗೀತಾ ಮಾಧುರಿ ಮತ್ತೊಂದು ಮಗುವಿಗೆ ಜನ್ಮ ನೀಡಲಿದ್ದಾರೆ.  ಇತ್ತೀಚಿಗಷ್ಟೆ ನಂದು ಮ್ಯಾನ್ಷನ್ 24, ವಧುವು ಎಂಬ ವೆಬ್ ಸಿರೀಸ್ ಗಳಲ್ಲಿ ನಟಿಸಿದ್ದರು. ಈ ಸಿರೀಸ್ ಗಳು ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿದ್ದಾರೆ.