ಶೀಘ್ರದಲ್ಲೇ ಬಾಲಿವುಡ್ ಫೈರ್ ಬ್ರಾಂಡ್ ಕಂಗನಾ ಮದುವೆಯಂತೆ, ವರ ಯಾರು ಗೊತ್ತಾ?

Follow Us :

ಬಾಲಿವುಡ್ ಫೈರ್‍ ಬ್ರಾಂಡ್ ಕಂಗನಾ ರಾಣಾವತ್ ಬಾಲಿವುಡ್ ಸ್ಟಾರ್‍ ನಟರೂ ಸೇರಿದಂತೆ ಅನೇಕ ರಾಜಕೀಯ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಸದಾ ಒಂದಲ್ಲ ಒಂದು ವಿವಾದಿತ ಹೇಳಿಕೆಗಳನ್ನು ನೀಡುತ್ತಾ ಸುದ್ದಿಯಲ್ಲಿರುತ್ತಾರೆ. ಇದೀಗ ನಟಿ ಕಂಗನಾ ಮದುವೆಯಾಗಲಿದ್ದಾರಂತೆ. ಈ ಸಂಬಂಧ ಸುದ್ದಿಯೊಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನೂ ನಟಿ ಕಂಗನಾ ಮದುವೆಯಾಗಲಿರುವ ವ್ಯಕ್ತಿ ಯಾರು? ಈ ಸುದ್ದಿ ವೈರಲ್ ಆಗಲು ಕಾರಣ ಏನು ಎಂಬ ವಿಚಾರಕ್ಕೆ ಬಂದರೇ,

ಬಾಲಿವುಡ್ ಸಿನಿರಂಗದಲ್ಲಿ ಸದಾ ವಿವಾದಾತ್ಮಕ ಹೇಳಿಕೆಗಳನ್ನು ನೀಡುವಂತಹ ಕಂಗನಾ ರಾಣಾವತ್  ಸದಾ ಒಂದಲ್ಲ ಒಂದು ವಿವಾದದ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಆಗಾಗ ದೊಡ್ಡ ದೊಡ್ಡ ಸೆಲೆಬ್ರೆಟಿಗಳ ಮೇಲೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಜೊತೆಗೆ ರಾಜಕೀಯ ನಾಯಕರನ್ನೂ ಸಹ ಆಕೆ ವಿಮರ್ಶೆ ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆಯನ್ನು ಕಾಂಟ್ರವರ್ಸಿ ಕ್ವೀನ್ ಎಂತಲೂ ಕರೆಯುತ್ತಾರೆ. ವಿವಾದಗಳಿಗೆ ಕೇರ್‍ ಆಫ್ ಅಡ್ರೆಸ್ ಎಂದರೇ ಕಂಗನಾ ರಾನೌತ್ ಎಂದು ಹೇಳಬಹುದು. ದೊಡ್ಡ ಸ್ಟಾರ್‍ ಗಳಾಗಲಿ, ಅಥವಾ ದೊಡ್ಡ ರಾಜಕಾರಣಿಗಳಾಗಲಿ ನೇರವಾಗಿ ಅವರ ಮೇಲೆ ಆರೋಪಗಳನ್ನು ಮಾಡಿಬಿಡುತ್ತಾರೆ. ಅವರನ್ನು ಎದುರಿಸಿ ಸಹ ನಿಲ್ಲುತ್ತಾರೆ. ಇಂತಹ ಅನೇಕ ಕಾರಣಗಳಿಂದ ಆಕೆ ತುಂಬಾನೆ ಸಮಸ್ಯೆಗಳನ್ನು ಎದುರಿಸಿದ್ದರು. ಇದೀಗ ಆಕೆಯ ಮದುವೆಯ ಬಗ್ಗೆ ಕ್ರಿಟಿಕ್ ಕೆ.ಆರ್‍.ಕೆ ಮಾಡಿದ ಟ್ವೀಟ್ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ.

ಕ್ರಿಟಿಕ್ ಕೆ.ಆರ್‍.ಕೆ ಸದಾ ಸಿನಿರಂಗದ ಸೆಲೆಬ್ರೆಟಿಗಳ ಬಗ್ಗೆ ಟ್ವೀಟ್ ಗಳನ್ನು ಮಾಡುತ್ತಾ ಸುದ್ದಿಯಾಗುತ್ತಿರುತ್ತಾರೆ. ಇದೀಗ ಬಾಲಿವುಡ್ ಫೈರ್ ಬ್ರಾಂಡ್ ಕಂಗನಾ ಮದುವೆಯ ಬಗ್ಗೆ ಕೆ.ಆರ್‍.ಕೆ ಟ್ವೀಟ್ ಮಾಡಿದ್ದಾರೆ. ನಟಿ ಕಂಗನಾ ಖ್ಯಾತ ಉದ್ಯಮಿಯೊಬ್ಬರನ್ನು ಮದುವೆಯಾಗಲಿದ್ದಾರೆ. ಡಿಸೆಂಬರ್‍ ಮಾಹೆಯಲ್ಲಿ ಅವರಿಬ್ಬರು ಎಂಗೇಜ್ ಮೆಂಟ್ ನಡೆಯಲಿದೆಯಂತೆ. ಜೊತೆಗೆ ಮದುವೆ ಮುಂದಿನ ವರ್ಷ ಏಪ್ರಿಲ್ ಮಾಹೆಯಲ್ಲಿ ನಡೆಯಲಿದೆ ಎಂದು ಟ್ವೀಟ್ ಮಾಡಿದ್ದಾರೆ. ಇನ್ನೂ ಈ ಟ್ವೀಟ್ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನೂ ಈ ಸುದ್ದಿಯಲ್ಲಿ ಎಷ್ಟರ ಮಟ್ಟಿಗೆ ಸತ್ಯಾಂಶ ಇದೆ ಎಂಬುದು ಇನ್ನಷ್ಟೆ ತಿಳಿದುಬರಬೇಕಿದೆ.

ಇನ್ನೂ ಕಂಗನಾ ಇತ್ತೀಚಿಗೆ ಬಾಲಿವುಡ್ ನಲ್ಲಿ ನಟಿಸುವುದು ಕಡಿಮೆ ಮಾಡಿದ್ದು, ಸೌತ್ ಸಿನೆಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೋಳ್ಳುತ್ತಿದ್ದಾರೆ. ಆಕೆ ಚಂದ್ರಮುಖಿ-2 ಸಿನೆಮಾದ ಮೂಲಕ ಸೌತ್ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಜೊತೆಗೆ ಎಮರ್ಜೆನ್ಸಿ ಎಂಬ ಸಿನೆಮಾದಲ್ಲಿ ಸಹ ನಟಿಸಿದ್ದು, ಈ ಸಿನೆಮಾದ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.