ರಾಜ್ ಕುಂದ್ರಾ-ಶಿಲ್ಪಾ ಶೆಟ್ಟಿ ವಿಚ್ಚೇದನ. ಸಂಚಲನ ಸೃಷ್ಟಿಸಿದ ರಾಜ್ ಕುಂದ್ರಾ ಪೋಸ್ಟ್….!

ಬಾಲಿವುಡ್ ಸ್ಟಾರ್‍ ನಟಿ ಶಿಲ್ಪಾ ಶೆಟ್ಟಿ ಹಾಗೂ ಆಕೆಯ ಪತಿ ಶಿಲ್ಪಾ ಕುಂದ್ರಾ ವಿಚ್ಚೇದನಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಇಬ್ಬರ ನಡುವೆ ವಿಬೇದಗಳು ಹುಟ್ಟಿಕೊಂಡಿದೆ. ಈ ಸುದ್ದಿ ಹರಿದಾಡಲು ರಾಜ್ ಕುಂದ್ರಾ ಹಂಚಿಕೊಂಡ ಪೋಸ್ಟ್ ಕಾರಣ…

ಬಾಲಿವುಡ್ ಸ್ಟಾರ್‍ ನಟಿ ಶಿಲ್ಪಾ ಶೆಟ್ಟಿ ಹಾಗೂ ಆಕೆಯ ಪತಿ ಶಿಲ್ಪಾ ಕುಂದ್ರಾ ವಿಚ್ಚೇದನಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಇಬ್ಬರ ನಡುವೆ ವಿಬೇದಗಳು ಹುಟ್ಟಿಕೊಂಡಿದೆ. ಈ ಸುದ್ದಿ ಹರಿದಾಡಲು ರಾಜ್ ಕುಂದ್ರಾ ಹಂಚಿಕೊಂಡ ಪೋಸ್ಟ್ ಕಾರಣ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಇಬ್ಬರ ನಡುವೆ ವಿಬೇದವಾದರೂ ಏನು, ರಾಜ್ ಕುಂದ್ರಾ ಮಾಡಿದ ಪೋಸ್ಟ್ ನಲ್ಲಿ ಏನಿತ್ತು ಎಂಬ ವಿಚಾರಕ್ಕೆ ಬಂದರೇ,

ಕೆಲವು ದಿನಗಳ ಹಿಂದೆ ರಾಜ್ ಕುಂದ್ರಾ ಹೆಸರು ಪೋರ್ನೋಗ್ರಫಿ ಪ್ರಕರಣದಲ್ಲಿ ಕೇಳಿಬಂದಿತ್ತು. ಈ ಪ್ರಕರಣ ಬಾಲಿವುಡ್ ಅಂಗಳದಲ್ಲಿ ಭಾರಿ ಸದ್ದು ಮಾಡಿತ್ತು. ಈ ಪ್ರಕರಣದ ಬಳಿಕ ರಾಜ್ ಕುಂದ್ರಾ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಮಾಸ್ಕ್ ಬಳಸುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಈ ಪ್ರಕರಣದಿಂದ ಬೈಯಲ್ ಪಡೆದುಕೊಂಡರು. ಬಳಿಕ ಶಿಲ್ಪಾಶೆಟ್ಟಿ ಹಾಗೂ ರಾಜ್ ಕುಂದ್ರಾ ನಡುವೆ ವಿಬೇದಗಳು ಹುಟ್ಟಿಕೊಂಡಿದೆ ಎಂಬ ಸುದ್ದಿಗಳು ಕೇಳಿಬರುತ್ತಲೇ ಇತ್ತು. ಜೊತೆಗೆ ವಿಚ್ಚೇದನ ಸಹ ಪಡೆದುಕೊಳ್ಳಲಿದ್ದಾರೆ ಎಂಬ ರೂಮರ್‍ ಸಹ ಹುಟ್ಟಿಕೊಂಡಿತ್ತು. ಇದೀಗ ರಾಜ್ ಕುಂದ್ರಾ ಹಂಚಿಕೊಂಡ ಪೋಸ್ಟ್ ಮತ್ತೆ ಅವರ ವಿಚ್ಚೇದನದ ಬಗ್ಗೆ ರೂಮರ್‍ ಹುಟ್ಟಿಕೊಳ್ಳಲು ಕಾರಣವಾಗಿದೆ. ಆತ ಹಂಚಿಕೊಂಡ ಪೋಸ್ಟ್ ನಲ್ಲಿ ಏನಿದೆ ಎಂಬ ವಿಚಾರಕ್ಕೆ ಬಂದರೇ,

ನಟಿ ಶಿಲ್ಪಾಶೆಟ್ಟಿ ಪತಿ ರಾಜ್ ಕುಂದ್ರಾ ಸೋಷಿಯಲ್ ಮಿಡಿಯಾ ವೇದಿಕೆಯ ಮೂಲಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನಲ್ಲಿ ಶಿಲ್ಪಾಶೆಟ್ಟಿ ಹೆಸರನ್ನು ಹೇಳದೆ ನಾವಿಬ್ಬರು ಬೇರೆಯಾಗಿತ್ತಿದ್ದೇವೆ. ಈ ಕಷ್ಟದ ಸಮಯದಲ್ಲಿ ನಮಗೆ ನಿಮ್ಮ ಸಹಕಾರ ಬೆಂಬಲ ಬೇಕಿದೆ ಎಂದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಗೆ ಹಾರ್ಟ್ ಬ್ರೇಕಿಂಗ್ ಎಮೋಜಿಯನ್ನು ಸಹ ಹಾಕಿದ್ದಾರೆ. ಆದರೆ ಈ ಬಗ್ಗೆ ಶಿಲ್ಪಾ ಶೆಟ್ಟಿ ಅಂತಹ ಪ್ರಕಟನೆ ಏನು ಮಾಡಿಲ್ಲ. ಆದರೆ ರಾಜ್ ಕುಂದ್ರಾ ಪೋಸ್ಟ್ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ರಾಜ್ ಕುಂದ್ರಾ ಅಭಿನಯದ UT69 ಸಿನೆಮಾ ಸಹ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ಸಮಯದಲ್ಲಿ ಆತ ಮಾಡಿದ ಪೋಸ್ಟ್ ಸಂಚಲನ ಸೃಷ್ಟಿಸಿದೆ. ಈ ಪೋಸ್ಟ್ ಬಗ್ಗೆ ವಿವಿಧ ಕಾಮೆಂಟ್ ಗಳು ಸಹ ಕೇಳಿಬರುತ್ತಿವೆ.

ರಾಜ್ ಕುಂದ್ರಾ ರವರ ಜೀವನ ಚರಿತೆಯನ್ನು ಆಧಾರವಾಗಿಟ್ಟುಕೊಂಡು ನಿರ್ಮಾಣವಾದ UT69 ಸಿನೆಮಾದಲ್ಲಿ ಅವರೇ ಹಿರೋ ಆಗಿ ನಟಿಸಿದ್ದಾರೆ. ಈ ಸಿನೆಮಾ ಇದೇ ನವೆಂಬರ್‍ 3 ರಂದು ಬಿಡುಗಡೆಯಾಗಲಿದೆ. ಸಿನೆಮಾದ ಟ್ರೈಲರ್‍ ಸಹ ಶೀಘ್ರದಲ್ಲೇ ಬಿಡುಗಡೆಯಾಗಿದೆ. ಸಿನೆಮಾ ಪ್ರಮೋಷನ್ ನಿಮಿತ್ತ ಆತ ಮಾಸ್ಕ್ ಇಲ್ಲದೇ ಮಿಡಿಯಾ ಮುಂದೆ ಬರುತ್ತಿದ್ದಾರೆ.