ಬಾಲಿವುಡ್ ಬಿಗ್ ಬಿ ಹೆಲ್ತ್ ಬುಲೆಟಿನ್, ಅಂಜಿಯೋಪ್ಲಾಸ್ಟಿ ಬಳಿಕ ಅಮಿತಾಬ್ ಹೇಗಿದ್ದಾರೆ?

Follow Us :

ದೇಶದ ಸಿನಿರಂಗದಲ್ಲಿ ದೊಡ್ಡ ನೇಮ್, ಫೇಮ್ ಹೊಂದಿರುವ ನಟರಲ್ಲಿ ಅಮಿತಾಬ್ ಬಚ್ಚನ್ ಅಗ್ರ ಸ್ಥಾನದಲ್ಲಿದ್ದಾರೆ. ಇಂದಿಗೂ ಸಹ ಅಮಿತಾಬ್ ಸಾಲು ಸಾಲು ಸಿನೆಮಾಗಳಲ್ಲಿ ನಟಿಸುವ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ನಿನ್ನೆಯಷ್ಟೆ ಅಮಿತಾಬ್ ಅನಾರೋಗ್ಯದ ನಿಮಿತ್ತ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಆಸ್ಪತ್ರೆಗೆ ದಾಖಲಾದ ಸುದ್ದಿ ತಿಳಿಯುತ್ತಿದ್ದಂತೆ ಅಭಿಮಾನಿಗಳು ಆತಂಕಕ್ಕೆ ಗುರಿಯಾಗಿದ್ದರು. ಇದೀಗ ಅವರಿಗೆ ಹೃದಯದ ಅಂಜಿಯೋಪ್ಲಾಸ್ಟಿಗೆ ಒಳಗಾಗಿದ್ದು, ಅವರ ಹೆಲ್ತ್ ಬಗ್ಗೆ ಅಪ್ಡೇಟ್ ಬಂದಿದೆ.

ಮಾ.15 ರಂದು ಬೆಳಿಗ್ಗೆ ಅಮಿತಾಬ್ ಬಚ್ಚನ್ ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಹೃದಯದಲ್ಲಿ ಬ್ಲಾಕೇಜ್ ಇರುವುದು ಕಂಡು ಬಂದಿದ್ದರಿಂದ ಅಂಜಿಯೋಪ್ಲಾಸ್ಟಿ ಮಾಡಲಾಗಿದೆ ಎನ್ನಲಾಗಿದೆ. ಇದು ತಿಳಿಯುತ್ತಿದ್ದಂತೆ ಅಮಿತಾಬ್ ಅಭಿಮಾನಿಗಳಲ್ಲಿ ಆತಂಕದ ವಾತವರಣ ನಿರ್ಮಾಣವಾಗಿತ್ತು. ಮಾ.15 ರಂದು ಬೆಳಿಗ್ಗೆ 6 ಗಂಟೆಗೆ ಅಮಿತಾಬ್ ಬಚ್ಚನ್ ಕೋಕಿಲಾಬೆನ್ ಅಂಬಾನಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಅವರಿಗೆ ಅಂಜಿಯೋ ಪ್ಲಾಸ್ಟಿ ಮಾಡಲಾಗಿತ್ತು. ಇದೀಗ ಆಸ್ಪತ್ರೆಯವರು ಅಮಿತಾಬ್ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದಾರೆ. ಸದ್ಯ ಅಮಿತಾಬ್ ರವರ ಆರೋಗ್ಯ ಸ್ಥಿತಿ ಉತ್ತಮವಾಗಿದ್ದು, ಆರೋಗ್ಯವಾಗಿದ್ದಾರೆ ಹಾಗೂ ಅಂಜಿಯೋಪ್ಲಾಸ್ಟಿ ಬಳಿಕ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿದ್ದಾರೆ ಎಂದು ಆಸ್ಪತ್ರೆಯಿಂದ ಮಾಹಿತಿ ನೀಡಲಾಗಿದೆ.

ಇನ್ನೂ ಅಮಿತಾಬ್ ರವರ ವಯಸ್ಸು ಸದ್ಯ 81 ವರ್ಷ ವಯಸ್ಸಾಗಿದೆ. ವಯಸ್ಸಾದರೂ ಸಹ ಅವರು ಫಿಟ್ ಆಗಿದ್ದಾರೆ. ಸದ್ಯ ಅಂಜಿಯೋಪ್ಲಾಸ್ಟಿ ಮಾಡಿದ ಬಳಿಕ ಅಮಿತಾಬ್ ದೇವರು ಹಾಗೂ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ತಮ್ಮ ಟ್ವಿಟರ್‍ ಖಾತೆಯಲ್ಲಿ ಈ ಕುರಿತು ಟ್ವೀಟ್ ಮಾಡಿದ್ದಾರೆ. ಅವರು ಮಾಡಿದ ಟ್ವೀಟ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಜೊತೆಗೆ ಅಭಿಮಾನಿಗಳು ಅವರ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ. ಈ ಹಿಂದೆ ಸಹ ಅಮಿತಾಬ್ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದರು. ಕೆಬಿಸಿ 14 ಶೂಟಿಂಗ್ ಸಮಯದಲ್ಲಿ, ಥಗ್ಸ್ ಆಫ್ ಹಿಂದೂಸ್ತಾನ್ ಸೆಟ್ ನಲ್ಲೂ ಸಹ ಅಮಿತಾಬ್ ರವರಿಗೆ ಗಾಯಗಳಾಗಿತ್ತು. ಕೋವಿಡ್ ಗೂ ಸಹ ಅಮಿತಾಬ್ ರವರು ಗುರಿಯಾಗಿದ್ದರು. ಈ ಮಾರಕ ವೈರಸ್ ಅನ್ನು ಯಶ್ವಸ್ವಿಯಾಗಿ ಜಯಸಿದ್ದರು ಸದ್ಯ ಪ್ರಭಾಸ್ ರವರ ಕಲ್ಕಿ 2898AD ಸಿನೆಮಾದಲ್ಲಿ ಅಮಿತಾಬ್ ರವರು ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದು, ಈ ಸಿನೆಮಾದ ಮೇಲೆ ಭಾರಿ ನಿರೀಕ್ಷೆ ಸಹ ಹುಟ್ಟಿದೆ.