Film News

ಪುತ್ರಿಯ ಜೊತೆಗೆ ಶಿರಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್……!

ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಈ ವರ್ಷದಲ್ಲಿ ಎರಡು ಸಿನೆಮಾಗಳ ಮೂಲಕ ಬ್ಲಾಕ್ ಬ್ಲಸ್ಟರ್‍ ಹಿಟ್ ಪಡೆದುಕೊಂಡಿದ್ದಾರೆ. ಇದೀಗ ಮತ್ತೊಂದು ಸಿನೆಮಾ ಸಹ ತೆರೆಕಾಣಲಿದ್ದು, ಈ ಸಿನೆಮಾದ ಮೂಲಕ ಹ್ಯಾಟ್ರಿಕ್ ಹಿಟ್ ಪಡೆದುಕೊಳ್ಳುವ ಹಂಬಲದಲ್ಲಿದ್ದಾರೆ. ಈ ಹಾದಿಯಲ್ಲೇ ಶಾರುಖ್ ಟೆಂಪಲ್ ರನ್ ಮಾಡುತ್ತಿದ್ದಾರೆ. ಶಿರಡಿಯಲ್ಲಿ ಸಾಯಿಬಾಬಾ ಬಳಿಗೆ ತೆರಳಿದ ಶಾರುಖ್ ಖಾನ್ ಹಾಗೂ ಅವರ ಪುತ್ರಿ ಸಾಯಿಬಾಬಾ ರವರಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ನಟ ಶಾರುಕ್ ಕಳೆದ ಡಿ.12 ರಂದು ಜಮ್ಮುನಲ್ಲಿರುವ ಮಾತಾ ವೈಷ್ಣೋದೇವಿ ದೇವಾಲಯದಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಈ ಹಿಂದೆ ಜವಾನ್ ಸಿನೆಮಾ ಬಿಡುಗಡೆಯ ಸಮಯದಲ್ಲಿ ಸಹ ಶಾರುಖ್ ಟೆಂಪಲ್ ರನ್ ಮಾಡಿದ್ದರು. ಇದೀಗ ಮತ್ತೊಮ್ಮೆ ಅವರ ಡಂಕಿ ಸಿನೆಮಾ ಬಿಡುಗಡೆಯಾಗುತ್ತಿರುವ ಕಾರಣದಿಂದ ಮತ್ತೆ ಟೆಂಪಲ್ ರನ್ ಮಾಡುತ್ತಿದ್ದಾರೆ. ಡಿ.21 ರಂದು ಡಂಕಿ ಸಿನೆಮಾ ರಿಲೀಸ್ ಆಗಲಿದೆ. ಈ ಹಾದಿಯಲ್ಲೇ ಶಾರುಖ್ ಖಾನ್ ಹಾಗೂ ಅವರ ಪುತ್ರಿ ಸುಹಾನಾ ಖಾನ್ ಜೊತೆಗೆ ಶಿರಡಿಗೆ ಹೋಗಿ ಅಲ್ಲಿ ಸಾಯಿನಾಥನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಸಂಬಂಧ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಸತತ ಸೋಲುಗಳಿಂದ ಕಂಗೆಟ್ಟ ಬಾಲಿವುಡ್ ಗೆ ಶಾರುಖ್ ಖಾನ್ ಪಠಾನ್ ಸಿನೆಮಾದ ಮೂಲಕ ದೊಡ್ಡ ಸಕ್ಸಸ್ ತಂದುಕೊಟ್ಟರು. ಬಳಿಕ ಜವಾನ್ ಸಿನೆಮಾ ಸಹ ಬಾಕ್ಸ್ ಆಫೀಸ್ ನಲ್ಲಿ ಭಾರಿ ಕಲೆಕ್ಷನ್ ಮಾಡಿತ್ತು.

ಇನ್ನೂ ಕೆಲವು ದಿನಗಳ ಹಿಂದೆಯಷ್ಟೆ ಈ ಸಿನೆಮಾ ಪೋಸ್ಟರ್‍ ಹಾಗೂ ಟೀಸರ್‍ ಬಿಡುಗಡೆ ಮಾಡಲಾಗಿತ್ತು. ಈ ಪೋಸ್ಟರ್‍ ಹಾಗೂ ಟೀಸರ್‍ ರಿಲೀಸ್ ಆದ ಬಳಿಕ ಸಿನೆಮಾದ ಮೇಲೆ ಮತಷ್ಟು ನಿರೀಕ್ಷೆ ಹುಟ್ಟಿದೆ ಎನ್ನಲಾಗಿದೆ. ಟೀಸರ್‍ ನಲ್ಲಿ ರುವಂತೆ ಪಂಜಾಬ್ ಮೂಲದ ಕಥೆ ಇದಾಗಿದೆ. ಈ ಸಿನೆಮಾದಲ್ಲಿ ಶಾರುಖ್ ಖಾನ್, ತಾಪ್ಸಿಪನ್ನು, ವಿಕ್ಕಿ ಕೌಶಲ್ ಸೇರಿದಂತೆ ಅನೇಕ ಖ್ಯಾತ ಕಲಾವಿದರು ಬಣ್ಣ ಹಚ್ಚಿದ್ದಾರೆ. ಲವ್ ಅಂಡ್ ಫ್ರೆಂಡ್ ಶೀಪ್ ಕಥೆಯನ್ನು ಒಳಗೊಂಡಿರುವಂತಹ ಈ ಸಿನೆಮಾವನ್ನು ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‍ ಟೈನ್ ಮೆಂಟ್ ಹಾಗೂ ರಾಜ್ ಕುಮಾರ್‍ ಹಿರಾನಿ ಫಿಲಂಸ್ ನಡಿ ಗೌರಿ ಖಾನ್ ಹಾಗೂ ರಾಜ್ ಕುಮಾರ್‍ ಹಿರಾನಿ ನಿರ್ಮಾಣ ಮಾಡಿದ್ದಾರೆ. ಈ ಸಿನೆಮಾದ ಮೂಲಕ ಶಾರುಖ್ ಹ್ಯಾಟ್ರಿಕ್ ಪಡೆದುಕೊಳ್ಳುವ ಹಂಬಲದಲ್ಲಿದ್ದಾರೆ. ಈ ಹಾದಿಯಲ್ಲೇ ಶಾರುಖ್ ಟೆಂಪಲ್ ರನ್ ಮಾಡ್ತಾ ಇದ್ದಾರೆ ಎನ್ನಲಾಗುತ್ತಿದೆ.

Most Popular

To Top