ವೈರಲ್ ಆದ ನಟಿ ಸ್ವರಾ ಭಾಸ್ಕರ್ ಬೇಬಿ ಬಂಪ್ ಪೊಟೋಶೂಟ್ಸ್, ನಿಮ್ಮ ಮಗವಿಗೆ ಹಿಂದೂ ಹೆಸರಿಡಿ ಎಂದ ನೆಟ್ಟಿಗರು……!

Follow Us :

ಬಾಲಿವುಡ್ ಬೋಲ್ಡ್ ಬ್ಯೂಟಿಗಳಲ್ಲಿ ಸ್ವರಾ ಭಾಸ್ಕರ್‍ ಸಹ ಒಬ್ಬರಾಗಿದ್ದಾರೆ. ಬೋಲ್ಡ್ ಪಾತ್ರಗಳಲ್ಲಿ ನಟಿಸುವ ಮೂಲಕ ಆಕೆ ಎಲ್ಲರನ್ನೂ ಆಕರ್ಷಣೆ ಮಾಡಿದ್ದಾರೆ. ಜೊತೆಗೆ ಆಕೆ ಸೊಷಿಯಲ್ ಮಿಡಿಯಾದಲ್ಲಿ ಮಾಡುವಂತಹ ಕಾಮೆಂಟ್ಸ್ ಗಳ ಕಾರಣದಿಂದ ಸದಾ ಆಕೆ ಟ್ರೋಲ್ ಗಳಿಗೆ ಗುರಿಯಾಗುತ್ತಿರುತ್ತಾರೆ. ಇತ್ತೀಚಿಗಷ್ಟೆ ಆಕೆ ಯುವರಾಜಕಾರಣಿ ಫಹಾದ್ ಅಹ್ಮದ್ ಎಂಬಾತನನ್ನು ಮದುವೆಯಾದರು. ಮದುವೆಯ ಕಾರಣದಿಂದಲೂ ಆಕೆ ತುಂಬಾ ವಿಮರ್ಶೆಗಳನ್ನು ಎದುರಿಸಿದ್ದರು. ಕೆಲವು ದಿನಗಳ ಹಿಂದೆಯಷ್ಟೆ ಆಕೆ ಗರ್ಭಿಣಿಯಾದ ವಿಚಾರವನ್ನು ಅನೌನ್ಸ್ ಮಾಡಿದ್ದು, ಇದೀಗ ಬೇಬಿಬಂಪ್ ಪೊಟೋಗಳನ್ನು ಹಂಚಿಕೊಂಡಿದ್ದಾರೆ.

ನಟಿ ಸ್ವರಾ ಭಾಸ್ಕರ್‍ ಕಳೆದ ಫೆ.16 ರಂದು ಯಂಗ್ ಪೊಲಿಟೀಷಿಯನ್ ಫಹಾದ್ ಅಹ್ಮದ್ ಎಂಬಾತನನ್ನು ವಿವಾಹವಾದರು. ಜನವರಿ 6 ರಂದೇ ಸ್ವರಾ ಮದುವೆಯಾಗಿದ್ದರು. ಕೋರ್ಟಿನಲ್ಲಿ ಈಕೆ ಮದುವೆಯಾಗಿದ್ದರು. ಆದರೆ ಫೆ.16 ರಂದು ಆಕೆ ಪೊಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಇನ್ನೂ ಮದುವೆಯಾದಾಗಿನಿಂದ ಸ್ವರಾ ಭಾಸ್ಕರ್‍ ಟ್ರೋಲ್ ಆಗುತ್ತಲೇ ಇದ್ದಾರೆ. ಇನ್ನೂ ಆಕೆ ಕೆಲವು ದಿನಗಳ ಹಿಂದೆಯಷ್ಟೆ ತಾನು ಗರ್ಭಿಣಿಯಾಗಿದ್ದ ವಿಚಾರವನ್ನು ಸೋಷಿಯಲ್ ಮಿಡಿಯಾ ಮೂಲಕ ಹಂಚಿಕೊಂಡಿದ್ದರು. ಇದೀಗ ಆಕೆ ಬೇಬಿಬಂಪ್ ಪೊಟೋಶೂಟ್ಸ್ ಮಾಡಿಸಿದ್ದು, ಪೊಟೋಗಳನ್ನು ಸೊಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಜೊತೆಗೆ ವಿಮರ್ಶೆ ಸಹ ಮಾಡುತ್ತಿದ್ದಾರೆ.

ಇನ್ನೂ ಸ್ವರಾಭಾಸ್ಕರ್‍ ತಮ್ಮ ಅಧಿಕೃತ ಇನ್ಸ್ಟಾ ಖಾತೆಯಲ್ಲಿ ಈ ಬೇಬಿಬಂಪ್ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೊಟೋಗಳಲ್ಲಿ ಸ್ವರಾ ಬಿಳಿ ಹಾಗೂ ನೀಲಿ ಬಣ್ಣದ ಗೌನ್ ಧರಿಸಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಫಹಾದ್ ನೀಲಿ ಬಣ್ಣದ ಶರ್ಟ್, ನೀಲಿ ಬಣ್ಣದ ಪ್ಯಾಂಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ನೇಚರ್‍ ಬ್ಯಾಕ್ ಗ್ರೌಂಡ್ ನಲ್ಲಿ ರೊಮ್ಯಾಂಟಿಕ್ ಪೋಸ್ ಗಳನ್ನು ಕೊಟ್ಟಿದ್ದಾರೆ. ಈ ಪೊಟೊಗಳಿಗೆ ಸ್ವರಾ ಕೆಲವೊಮ್ಮೆ ಜೀವನ ನಿಮ್ಮನ್ನು ಅನಿರೀಕ್ಷಿತವಾಗಿ ಆರ್ಶಿವಾದಿಸುತ್ತದೆ ಮತ್ತು ನಿಮ್ಮನ್ನು ಸ್ವಯಂ ಶೋಧನೆ ಮತ್ತು ಒಗ್ಗಟ್ಟಿನ ಪ್ರಯಾಣಕ್ಕೆ ಕರೆದೊಯ್ಯುತ್ತದೆ ಎಂದು ಕ್ಯಾಪ್ಷನ್ ಸಹ ಹಾಕಿದ್ದಾರೆ. ಇನ್ನೂ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಜೊತೆಗೆ ವಿವಿಧ ರೀತಿಯ ಕಾಮೆಂಟ್ ಗಳು ಸಹ ಹರಿದುಬರುತ್ತಿವೆ.

ಇನ್ನೂ ಸ್ವರಾ ಭಾಸ್ಕರ್‍ ರವರ ಬೇಬಿ ಬಂಪ್ ಪೊಟೊಶೂಟ್ಸ್ ಇದೀಗ ವೈರಲ್ ಆಗುತ್ತಿದ್ದು, ವಿವಿಧ ರೀತಿಯ ಕಾಮೆಂಟ್ ಗಳು ಹರಿದುಬರುತ್ತಿದೆ. ಕೆಲವರು ಮೆಚ್ಚುಗೆ ಕಾಮೆಂಟ್ ಗಳನ್ನು ಹಾಕುತ್ತಿದ್ದರೇ ಮತ್ತೆ ಕೆಲವರು ವಿಮರ್ಶೆ ಮಾಡುತ್ತಿದ್ದಾರೆ. ನೀವು ಹಿಂದೂ ಧರ್ಮಕ್ಕೆ ಕಳಂಕ ತಂದಿದ್ದೀರಾ, ನಿಮ್ಮ ಪ್ರೀತಿ ನಿಜವಾಗಿದ್ದರೇ ನಿಮಗೆ ಹುಟ್ಟುವ ಮಗುವಿಗೆ ಹಿಂದೂ ಹೆಸರಿಡಿ ಎಂದು ಕಾಮೆಂಟ್ಸ್ ಮಾಡಿದ್ದಾರೆ.