ಭಾರತದಲ್ಲಿರುವುದು ನಮ್ಮ ಪುಣ್ಯ ಎಂದ ನಟಿ ನಶ್ರುತ್, ಇಸ್ರೇಲ್ ಯುದ್ದಪೀಡಿತ ಪ್ರದೇಶದಲ್ಲಿನ ಸ್ಥಿತಿಯ ಬಗ್ಗೆ ನಶ್ರುತ್ ಹೇಳಿದ್ದು ಹೀಗೆ….!

ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವಣ ಭೀಕರ ಯುದ್ದ ನಡೆಯುತ್ತಿದ್ದು, ದೊಡ್ಡ ಮಟ್ಟದಲ್ಲೇ ಪ್ರಾಣಹಾನಿಯಾಗಿದೆ. ಎರಡೂ ದೇಶಗಳ ಪ್ರಜೆಗಳ ಜೊತೆಗೆ ಆ ದೇಶಗಳಲ್ಲಿ ವಾಸಿಸುವಂತಹ ಬೇರೆ ದೇಶಗಳ ನಾಗರೀಕರು ಸಹ ಈ ಯುದ್ದದಲ್ಲಿ ಬಲಿಯಾಗಿದ್ದಾರೆ.…

ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವಣ ಭೀಕರ ಯುದ್ದ ನಡೆಯುತ್ತಿದ್ದು, ದೊಡ್ಡ ಮಟ್ಟದಲ್ಲೇ ಪ್ರಾಣಹಾನಿಯಾಗಿದೆ. ಎರಡೂ ದೇಶಗಳ ಪ್ರಜೆಗಳ ಜೊತೆಗೆ ಆ ದೇಶಗಳಲ್ಲಿ ವಾಸಿಸುವಂತಹ ಬೇರೆ ದೇಶಗಳ ನಾಗರೀಕರು ಸಹ ಈ ಯುದ್ದದಲ್ಲಿ ಬಲಿಯಾಗಿದ್ದಾರೆ. ಇನ್ನೂ ಆಯಾ ದೇಶಗಳು ತಮ್ಮ ದೇಶದ ಪ್ರದೇಶಗಳನ್ನು ವಾಪಸ್ಸು ಕರೆಸುಕೊಳ್ಳುತ್ತಿವೆ. ಇಸ್ರೇಲ್ ನಲ್ಲಿ ಸಿಲುಕಿಕೊಂಡಿದ್ದ ಬಾಲಿವುಡ್ ನಟಿ ನುಶ್ರತ್ ಭರುಚಾ ಸಹ ಭಾರತಕ್ಕೆ ಮರಳಿದ್ದಾರೆ. ಇದೀಗ ಆಕೆ ಸೋಷಿಯಲ್ ಮಿಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದು, ಯುದ್ದಪೀಡಿತ ಪ್ರದೇಶದಲ್ಲಿದ್ದ ಸ್ಥಿತಿಯನ್ನು ತಿಳಿಸಿದ್ದಾರೆ. ಇದೇ ವೇಳೆ ಭಾರತದಲ್ಲಿರುವುದು ನಮ್ಮ ಪುಣ್ಯ ಎಂದು ಆಕೆ ಹೇಳಿದ್ದಾರೆ.

ಎರಡು ದಿನಗಳ ಕಾಲ ಇಸ್ರೇಲ್ ನಲ್ಲಿ ಸಿಲುಕಿದ್ದ ಬಾಲಿವುಡ್ ನಟಿ ನುಶ್ರತ್ ಭರುಚಾ ತವರಿಗೆ ಸುರಕ್ಷಿತವಾಗಿ ಮರಳಿದ್ದಾರೆ. ಅಘಾತದಿಂದ ಆಕೆ ಚೇತರಿಸಿಕೊಂಡಿದ್ದು, ಇಸ್ರೇಲ್ ನಲ್ಲಿ ಆಕೆ ಅನುಭವಿಸಿದ ಭಯಾನಕ ಹಾಗೂ ಆತಂಕದ ಅನುಭವವನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಭಾರತಕ್ಕೆ ಮರಳಲು ನೆರವು ನೀಡಿದ ಭಾರತ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ. ನಿಮ್ಮೆಲ್ಲರ ಪ್ರಾರ್ಥನೆ ಹಾಗೂ ಶುಭಾಶಯಗಳಿಗೆ ಧನ್ಯವಾದ ತಿಳಿಸುತ್ತೇನೆ. ನಾನು ಇಸ್ರೇಲ್ ನಿಂದ ಸುರಕ್ಷಿತವಾಗಿ ಹಿಂತಿರುಗಿದ್ದೇನೆ. ನಾನು ಮನೆಗೆ ಬಂದು ಸುರಕ್ಷಿತವಾಗಿ ಸೇರಿದ್ದೇನೆ. ಎರಡು ದಿನಗಳ ಕಾಲ ನಾನು ಇಸ್ರೇಲ್ ನಲ್ಲಿದ್ದ ರೂಮ್ ನಲ್ಲಿ ಭಯಂಕರ ಅನುಭವ ಎದುರಿಸಿದ್ದೇನೆ. ನನಗೆ ಎಚ್ಚರವಾದಾಗ ಬಾಂಬ್ ಗಳ ಸದ್ದು, ಸೈರನ್ ಗಳ ಸದ್ದು ಜೋರಾಗಿತ್ತು. ಅದನ್ನು ಕೇಳಿ ನಾನು ತುಂಭಾ ಭಯಭೀತಳಾಗಿದ್ದೆ. ಆದರೆ ನಮ್ಮ ದೇಶ ತುಂಬಾನೆ ಸುರಕ್ಷಿತವಾಗಿದೆ. ನಾವು ಇಲ್ಲಿರುವುದಕ್ಕೆ ನಾವೆಲ್ಲರೂ ಅದೃಷ್ಟವಂತರು ಎಂದು ಹೇಳಿದ್ದಾರೆ.

ನಮ್ಮ ಭಾರತ ದೇಶ ಇಡೀ ವಿಶ್ವದಲ್ಲಿಯೇ ಅದ್ಬುತವಾದ ದೇಶವಾಗಿದೆ. ಇಲ್ಲಿ ಎಲ್ಲರೂ ನಿರ್ಭಿತಿಯಿಂದ ಬದುಕುತ್ತಾರೆ. ಇಸ್ರೇಲ್ ನಲ್ಲಿ ಬೆಳಿಗೆ ಎದ್ದ ಕೂಡಲೇ ನನಗೆ ಕೇಳಿದಂತಹ ಭಯಾನಕ ಶಬ್ದಗಳು ಕೇಳಿಸಿಲ್ಲ. ಇಲ್ಲಿ ಎಲ್ಲರೂ ಯಾವುದೇ ಭಯವಿಲ್ಲದೇ ಸುರಕ್ಷಿತವಾಗಿ ಬದುಕುತ್ತಿದ್ದೇವೆ ಎಂದು ಹೇಳಿದ್ದಾರೆ. ನಟಿ ನುಶ್ರತ್ ರವರ ಅಕೇಲಿ ಸಿನೆಮಾಗಾಗಿ ಇಸ್ರೇಲ್ ಗೆಹೋಗಿದ್ದರು. ಈ ವೇಳೆ ಇಸ್ರೇಲ್ ಹಾಗೂ ಪ್ಯಾಲೆಸ್ಟೈನ್ ನಡುವೆ ಯುದ್ದ ಆರಂಭವಾಗಿತ್ತು. ಭಾರತ ಸರ್ಕಾರ ಆಕೆಯನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತಂದರು. ಭಾರತಕ್ಕೆ ಹಿಂದಿರುಗಿದ ಸಮಯದಲ್ಲಿ ನುಶ್ರತ್ ಏರ್‍ ಪೋರ್ಟ್ ನಲ್ಲಿ ಯಾರೋಂದಿಗೂ ಸಹ ಮಾತನಾಡಿರಲಿಲ್ಲ. ಇದೀಗ ಆಕೆ ವಿಡಿಯೋ ಮೂಲಕ ಅಲ್ಲಿನ ಭಯಾನಕ ದೃಶ್ಯವನ್ನು ವಿಡಿಯೋ ಮೂಲಕ ವಿವರಿಸಿದ್ದಾರೆ.