ಜೈಲಿನಿಂದ ಬಂದ ರವಿಂದರ್, ಅಪ್ಪಿ ಮುದ್ದಾಡಿದ ಮಹಾಲಕ್ಷ್ಮೀ, ಮತ್ತೆ ಟ್ರೋಲ್ ಆದ ಮಹಾಲಕ್ಷ್ಮೀ…..!

Follow Us :

ನಿರ್ಮಾಪಕ ರವಿಂದರ್‍ ಹಾಗೂ ಮಹಾಲಕ್ಷ್ಮೀ ತಮ್ಮ ಮೊದಲ ಪತಿ ಹಾಗೂ ಪತ್ನಿಗೆ ವಿಚ್ಚೇದನ ನೀಡಿ ಕೆಲವು ದಿನಗಳ ಕಾಲ ಇಬ್ಬರೂ ಪ್ರೀತಿಸಿ ಅದ್ದೂರಿಯಾಗಿ ಸಪ್ತಪದಿ ತುಳಿದರು. ಅವರಿಬ್ಬರ ಮದುವೆ ವಿಚಾರ ಸೋಷಿಯಲ್ ಮಿಡಿಯಾದಲ್ಲಿ ಕಾಣಿಸಿದ್ದೇ ತಡ ಪ್ರತಿನಿತ್ಯ ಅವರನ್ನು ಟ್ರೋಲ್ ಮಾಡುತ್ತಲೇ ಇದ್ದರು. ಕೆಲವು ದಿನಗಳ ಹಿಂದೆಯಷ್ಟೆ ವಂಚನೆ ಪ್ರಕರಣವೊಂದರಲ್ಲಿ ನಿರ್ಮಾಪಕರ ರವಿಂದರ್‍ ಜೈಲಿಗೆ ಸೇರಿದ್ದರು. ಕೆಲವು ದಿನಗಳ ಹಿಂದೆಯಷ್ಟೆ ರವಿಂದರ್‍ ಬಗ್ಗೆ ಮಹಾಲಕ್ಷ್ಮೀ ಕೆಲವೊಂದು ಶಾಕೀಂಗ್ ಕಾಮೆಂಟ್ಸ್ ಮಾಡಿದ್ದರು. ಆತ ಮೋಸ ಮಾಡಿದ್ದಾನೆ ಎಂದಿದ್ದರು. ಆದರೆ ಇದೀಗ ರವಿಂದರ್‍ ಜೈಲಿನಿಂದ ಹೊರಬರುತ್ತಿದ್ದಂತೆ ಮಹಾಲಕ್ಷ್ಮೀ ಆತನನ್ನು ಅಪ್ಪಿಕೊಂಡು ಮುದ್ದಾಡಿ ಮತ್ತೆ ಟ್ರೋಲ್ ಆಗುತ್ತಿದ್ದಾರೆ.

ತಮಿಳು ನಿರ್ಮಾಪಕ ರವೀಂದರ್‍ ಚಂದ್ರಶೇಖರ್‍ ವಂಚನೆ ಪ್ರಕರಣವೊಂದು ದಾಖಲಾಗಿತ್ತು. 15.83 ಕೋಟಿ ರೂಪಾಯಿ ವಂಚನೆ ಮಾಡಿದ್ದಾಗಿ ಆರೋಪದ ಮೇರೆಗೆ ಪೊಲೀಸರು ಆತನನ್ನು ಬಂಧಿಸಿದ್ದರು. ಇದೀಗ ಅವರನ್ನು ಷರತ್ತುಬದ್ದ ಜಾಮೀನಿನ ಮೇಲೆ ಹೊರಬಂದಿದ್ದಾರೆ ಎನ್ನಲಾಗಿದೆ. ಇನ್ನೂ ರವಿಂದರ್‍ ಜೈಲಿನಲ್ಲಿದ್ದಾಗ ಮಹಾಲಕ್ಷ್ಮೀ ಗೊಳೋ ಎಂದು ಅಳುತ್ತಾ ಆತ ನನಗೆ ಮೋಸ ಮಾಡಿದ್ದಾನೆ. ಹತ್ತಾರು ಕೋಟಿ ಮೋಸ ಮಾಡಿದ ಬಗ್ಗೆ ನನಗೆ ತಿಳಿಸದೇ ಮದುವೆಯಾಗಿದ್ದಾನೆ. ನಾನು ಆತನನ್ನು ನಂಬಿ ಮೊದಲ ಪತಿಗೆ ವಿಚ್ಚೇದನ ಕೊಟ್ಟು ಆತನನ್ನು ಮದುವೆಯಾಗಿ ಮೋಸ ಹೋಗಿದ್ದೇನೆ. ಮೊಬೈಲ್ ಸಂಖ್ಯೆ ಬದಲಿಸಿಕೊಂಡು ಮೋಸ ಮಾಡ್ತಿದ್ದ, ಇದು ಯಾವುದೂ ನನಗೆ ಗೊತ್ತಿರಲಲ್ಲ ಎಂದು ಗಂಭೀರ ಆರೋಪಗಳನ್ನು ಮಾಡಿದ್ದರು. ಈ ಕಾರಣದಿಂದ ಮಹಾಲಕ್ಷ್ಮೀ ಸಿಕ್ಕಾಪಟ್ಟೆ ಟ್ರೋಲ್ ಸಹ ಆಗಿದ್ದರು.

ಸದ್ಯ ನಿರ್ಮಾಪಕ ರವೀಂದರ್‍ ಷರತ್ತುಬದ್ದ ಜಾಮೀನಿನ ಮೇರೆಗೆ ಜೈಲಿನಿಂದ ಹೊರಬಂದಿದ್ದಾರೆ. ಇದೀಗ ಪತಿಯ ಜೊತೆ ಮಹಾಲಕ್ಷ್ಮೀ ಪೋಸ್ ಕೊಟ್ಟಿದ್ದಾರೆ. ರವೀಂದರ್‍ ರವರಿಗೆ ಗಡ್ಡ ಸಿಕ್ಕಾಪಟ್ಟೆ ಬೆಳೆದಿದೆ. ಮಹಾಲಕ್ಷ್ಮೀಯೊಂದಿಗೆ ಆತ ಪೊಟೋ ಹಂಚಿಕೊಂಡಿದ್ದಾರೆ. ಆತ ಇಂದಿಗೂ ನನ್ನನ್ನು ನಗಿಸುವಂತಹ ಪತಿಯೇ ಮಹಾಲಕ್ಷ್ಮೀ ಎಂದು ಪೊಟೋಗೆ ರವೀಂಧರ್‍ ಕ್ಯಾಪ್ಷನ್ ಹಾಕಿದ್ದಾರೆ. ಜೊತೆಗೆ ನಟಿ ಮಹಾಲಕ್ಷ್ಮೀ ಸಹ ಇಂದಿಗೂ ನಾನು ನನ್ನ ಪತಿಯನ್ನು ಹೆಚ್ಚಾಗಿ ನಂಬುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇನ್ನೂ ಈ ಪೊಟೊಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಜೊತೆಗೆ ಅದೇ ರೀತಿಯಲ್ಲಿ ಟ್ರೋಲ್ ಸಹ ಆಗುತ್ತಿದ್ದಾರೆ.

ನಟಿ ಮಹಾಲಕ್ಷ್ಮೀಯವರನ್ನು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಟ್ರೋಲ್ ಮಾಡಲಾಗುತ್ತಿದೆ. ಗಂಡ ಜೈಲಿನಲ್ಲಿದ್ದಾಗ ಒಂದು ರೀತಿಯಲ್ಲಿ ಹೇಳಿದ್ದ ನೀನು ಇದೀಗ ಮತ್ತೊಂದು ಅವತಾರ ತಾಳಿ ಮತ್ತೊಂದು ರೀತಿಯಲ್ಲಿ ಹೇಳುತ್ತಿದ್ದಿಯಾ, ಗಂಡ ಜೈಲಿನಲ್ಲಿದ್ದಾಗ ಆತ ಮೋಸಗಾರ, ಇದೀಗ ಹೊರಗೆ ಬಂದಾಗ ಅವನಂಥ ಗಂಡ ಇಲ್ಲ ಎಂದು ಹೇಳುತ್ತಿದ್ದಿಯಾ ಎಂದು ಸಖತ್ ಟ್ರೋಲ್ ಮಾಡುತ್ತಿದ್ದಾರೆ.