ಅಜಯ್ ದೇವಗನ್ ಪುತ್ರಿ ನ್ಯಾಸ ದೇವಗನ್ ಸ್ಟಾರ್ ನಟಿಯರಂತೆ ತುಂಬಾ ಬೋಲ್ಡ್, ಆಕೆ ಏನು ಮಾಡಿದ್ರು ಹೆಮ್ಮೆ ಎಂದ ತಾಯಿ ಕಾಜೋಲ್….!

ಸಿನಿರಂಗದ ಸೆಲೆಬ್ರೆಟಿಗಳಂತೆ ಅವರ ಮಕ್ಕಳು ಸಹ ತುಂಬಾನೆ ಫೇಮಸ್ ಆಗಿರುತ್ತಾರೆ. ಬಾಲಿವುಡ್ ನ ಸ್ಟಾರ್‍ ಜೋಡಿಯಾದ ಅಜಯ್ ದೇವಗನ್ ಹಾಗೂ ಕಾಜೋಲ್ ಪುತ್ರಿ ನ್ಯಾಸ ದೇವಗನ್ ಸಹ ತುಂಬಾನೆ ಫೇಮಸ್ ಆಗಿದ್ದಾರೆ. ಇನ್ನೂ ಆಕೆ ಯಾವುದೇ ಸ್ಟಾರ್‍ ನಟಿಗಿಂತಲೂ ಕಡಿಮೆ ಇಲ್ಲವೆಂಬಂತೆ ತುಂಬಾನೆ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಸ್ನೇಹಿತರ ಜೊತೆಗೆ ನ್ಯಾಸ ಅನೇಕ ಪಾರ್ಟಿಗಳಿಗೆ ಹೋಗುತ್ತಿರುತ್ತಾರೆ. ಅಲ್ಲಿ ಆಕೆ ಧರಿಸುವ ಬಟ್ಟೆಗಳಿಂದ ಟ್ರೋಲ್ ಸಹ ಆಗುತ್ತಿರುತ್ತಾರೆ.  ಇದೀಗ ನ್ಯಾಸ ಕುರಿತು ಕಾಜೋಲ್ ಶಾಕಿಂಗ್ ಕಾಮೆಂಟ್ ಮಾಡಿದ್ದಾರೆ.

ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಕಾಜೋಲ್ ನ್ಯಾಸ ಬಗ್ಗೆ ಮಾತನಾಡಿದ್ದಾರೆ. ನ್ಯಾಸ ಬಗ್ಗೆ ಕಾಜೋಲ್ ಹೆಮ್ಮೆ ಪಡುತ್ತಾರಂತೆ. ಆಕೆ ಎಲ್ಲಿ ಹೋದರೂ ಸಹ ಘನತೆಯಿಂದ ಹೋಗುತ್ತಾಳೆ. ಅವಳಿಗೆ 19 ವರ್ಷ ವಯಸ್ಸಾಗಿದ್ದು, ಮೋಜು ಮಾಡುತ್ತಿದ್ದಾಳೆ. ಅವಳು ಏನು ಮಾಡಬೇಕು ಎಂದು ಇಷ್ಟಪಡುತ್ತಾಳೋ ಅದನ್ನು ಮಾಡಲು ಆಕೆಗೆ ಹಕ್ಕಿದೆ. ನಾನು ಸಹ ಅವಳನ್ನು ಸದಾ ಬೆಂಬಲಿಸುತ್ತೇನೆ ಎಂದಿದ್ದಾರೆ. ಇನ್ನೂ ಈ ಹಿಂದೆ ಸಹ ನ್ಯಾಸ ತಂದೆ ಅಜಯ್ ದೇವಗನ್ ಸಹ ಸೋಷಿಯಲ್ ಮಿಡಿಯಾದಲ್ಲಿ ತಮ್ಮ ಮಕ್ಕಳ ಮೇಲೆ ಎದುರಾಗುತ್ತಿರುವ ಟ್ರೋಲ್ಸ್ ಹಾಗೂ ವಿಮರ್ಶೆಗಳ ಬಗ್ಗೆ ಮಾತನಾಡಿದ್ದರು. ಟ್ರೋಲ್ ಗಳಿಂದ ನನಗೆ ತುಂಬಾ ಬೇಸರವಾಗುತ್ತಿದೆ. ಕೆಲವು ಬಾರಿ ಇಲ್ಲ ಸಲ್ಲದ ವಿಚಾರಗಳನ್ನು ಬರೆಯಲಾಗುತ್ತದೆ. ಅದೆಲ್ಲಾ ನಿಜವಾಗಿರುವುದಿಲ್ಲ ಎಂದು ಹೇಳಿದ್ದರು.

ಇನ್ನೂ ಅಜಯ್ ದೇವಗನ್ ಹಾಗೂ ಕಾಜೋಲ್ ರವರ ಮಗಳಾಗಿ ನ್ಯಾಸಾ 2003ರ ಏಪ್ರಿಲ್ 20 ರಂದು ಮುಂಬೈನಲ್ಲಿ ಜನಿಸಿದರು. ಇನ್ನೂ ಮುಂಬೈನ ಧೀರೂಭಾತಿ ಅಂಬಾನಿ ಶಾಲೆಯಲ್ಲಿ ಶಾಲಾ ಶಿಕ್ಷಣ, ಹೈಸ್ಕೂಲ್ ಸಿಂಗಾಪುರದಲ್ಲಿ ಮುಗಿಸಿ, ಬಳಿಕ ಸೌತ್ ಈಸ್ಟ್ ಏಷ್ಯಾದ ಯುನೈಟೆಡ್ ವರ್ಲ್ಡ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು. ಸದ್ಯ ಇರುವ ಮಾಹಿತಿಯಂತೆ ನ್ಯಾಸ ಸ್ವಿಟ್ಜರ್ಲೆಂಡ್ ನ ಗ್ಲಿಯನ್ ಇನ್ಸ್ ಸ್ಟಿಟ್ಯೂಟ್ ಆಫ್ ಹೈಯರ್‍ ಎಜುಕೇಶನ್  ಇಂಟರ್‍ ನ್ಯಾಷನಲ್ ಕಾಲೇಜಿನಲ್ಲಿ ಹಾಸ್ಪಿಟಾಲಿ ಕೋರ್ಸ್ ಮಾಡುತ್ತಿದ್ದಾರಂತೆ. ಇನ್ನೂ ನ್ಯಾಸ ಸಹ ಅನೇಕ ಪಾರ್ಟಿಗಳಲ್ಲಿ ಭಾಗಿಯಾಗುತ್ತಿರುತ್ತಾರೆ. ಎಲ್ಲಾ ಪಾರ್ಟಿಗಳಲ್ಲೂ ಆಕೆ ತುಂಬಾ ಬೋಲ್ಡ್ ಆಗಿಯೇ ಕಾಣಿಸಿಕೊಳ್ಳುತ್ತಿರುತ್ತಾರೆ. ಆಕೆ ಧರಿಸುವ ಡ್ರೆಸ್ ಗಳ ಕಾರಣದಿಂದ ಸಖತ್ ಟ್ರೋಲ್ ಸಹ ಆಗುತ್ತಿರುತ್ತಾರೆ. ಇನ್ನೂ ನ್ಯಾಸ ರನ್ನು ಸಿನೆಮಾ ರಂಗಕ್ಕೆ ಪರಿಚಯಿಸಲು ಕಾಜೋಲ್ ಹಾಗೂ ಅಜಯ್ ದೇವಗನ್ ಗೂ ಸಹ ಇಷ್ಟವಿಲ್ಲವಂತೆ.