Film News

ಹಣಕ್ಕಾಗಿ ತಮಿಳು ಸಿನೆಮಾದಲ್ಲಿ ಬ್ಯಾಕ್ ಗ್ರೌಂಡ್ ಡ್ಯಾನ್ಸರ್ ಆಗಿ ನಟಿಸಿದ್ದರಂತೆ ಬಾಲಿವುಡ್ ಸ್ಟಾರ್ ನಟಿ ದಿಯಾ ಮಿರ್ಜಾ…!

ಸಿನಿರಂಗದಲ್ಲಿ ಸ್ಟಾರ್‍ ಗಳಾಗುವುದಕ್ಕೂ ಮುಂಚೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಅವುಗಳನ್ನು ಅವರೇ ಹೇಳುವವರೆಗೂ ಅನೇಕರಿಗೆ ತಿಳಿದಿರುವುದಿಲ್ಲ. ಕೆಲವೊಂದು ಸಂದರ್ಭಗಳಲ್ಲಿ ಅಂತಹ ವಿಚಾರಗಳು ಹೊರಬರುತ್ತಿರುತ್ತವೆ. ಇದೀಗ ಬಾಲಿವುಡ್ ಸ್ಟಾರ್‍ ನಟಿ ದಿಯಾ ಮಿರ್ಜಾ ಸಹ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಾಗ ಕೆಲವೊಂದು ಸಮಸ್ಯೆಗಳನ್ನು ಎದುರಿಸಿದ್ದರಂತೆ. ಕೆರಿಯರ್‍ ಆರಂಭದಲ್ಲಿ ಆಕೆ ಬ್ಯಾಕ್ ಗ್ರೌಂಡ್ ಡ್ಯಾನ್ಸರ್‍ ಆಗಿ ಕೆಲಸ ಮಾಡಿದ್ದರಂತೆ. ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಈ ವಿಚಾರಗಳನ್ನು ಆಕೆ ಹೊರಹಾಕಿದ್ದಾರೆ.

ಬಾಲಿವುಡ್ ನಟಿ ದಿಯಾ ಮಿರ್ಜಾ ಕಳೆದ 2000 ನೇ ಇಸವಿಯಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಮಿಸ್ ಆಸಿಯಾ ಫೆಸಿಫಿಕ್ ಕಿರೀಟವನ್ನು ಮುಡಿಗೇರಿಸಿಕೊಂಡರು. ಅಲ್ಲಿಯವರೆಗೂ ದಿಯಾ ಯಾರಿಗೂ ತಿಳಿದಿರಲಿಲ್ಲ. ಮಿಸ್ ಆಸಿಯಾ ಫೆಸಿಫಿಕ್ ಕಿರೀಟ ಪಡೆದುಕೊಂಡ ಬಳಿಕ ಆಕೆ ರಾತ್ರೋರಾತ್ರಿ ಪುಲ್ ಫೇಮಸ್ ಆದರು. ಸೋಷಿಯಲ್ ಮಿಡಿಯಾದಲ್ಲಂತೂ ಮತಷ್ಟು ಅಂದರೇ ಸ್ಟಾರ್‍ ನಟಿಯರಂತೆ ಫೇಮಸ್ ಆದರು. ಇನ್ನೂ ಆಕೆ ಈ ಕಿರೀಟ ಗೆಲ್ಲುವುದಕ್ಕೂ ಮುಂಚೆ ತಮಿಳು ಸಿನೆಮಾದಲ್ಲಿ ನಟಿಸಿದ್ದರಂತೆ. ನಟಿ ದಿಯಾ ಮಿರ್ಜಾ ತಮಿಳಿನ ಸಿನೆಮಾ ಒಂದರಲ್ಲಿ ಬ್ಯಾಕ್ ಗ್ರೌಂಡ್ ಡ್ಯಾನ್ಸರ್‍ ಆಗಿ ನಟಿಸಿದ್ದರಂತೆ. ಈ ವಿಚಾರವನ್ನು ಆಕೆ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ.

ಸಂದರ್ಶನದಲ್ಲಿ ಮಾತನಾಡಿದ ದಿಯಾ ಮಿರ್ಜಾ ಕಳೆದ 1999 ರಲ್ಲಿ ಎನ್ ಶ್ವಾಸ ಕಾಟ್ರೆ ಎಂಬ ತಮಿಳು ಸಿನೆಮಾದಲ್ಲಿ ನಟಿಸಿದ್ದೆ. ಈ ಸಿನೆಮಾವನ್ನು ಕೆ.ಎಸ್. ರವಿ ನಿರ್ದೇಶಿಸಿದ್ದರು. ಅರವಿಂದ ಸ್ವಾಮಿ ಹಾಗೂ ಇಷಾ ಕೊಪ್ಪಿಕರ ಹಿರೋ ಹಿರೋಯಿನ್ ಆಗಿ ನಟಿಸಿದ್ದರು. ಈ ಸಿನೆಮಾದಲ್ಲಿ ಜುಂಬಲಕ್ಕಾ ಎಂಬ ಹಾಡಿನಲ್ಲಿ ಹಿರೋಯಿನ್ ಸ್ನೇಹಿತೆಯಾಗಿ, ಸೈಡ್ ಡ್ಯಾನ್ಸರ್‍ ಆಗಿ ನಟಿಸಿದ್ದೆ. ಬ್ಯಾಕ್ ಗ್ರೌಂಡ್ ನಲ್ಲಿ ಎಕ್ಸ್ ಟ್ರಾ ಆಗಿದ್ದೆ. ನನಗೆ ಹಣದ ಅವಶ್ಯಕತೆಯಿದ್ದ ಕಾರಣದಿಂದ ಈ ಸಾಂಗ್ ಮಾಡಿದ್ದೆ. ಈ ಹಾಡಿನ ಶೂಟಿಂಗ್ ರಾಮೋಜಿರಾವ್ ಫಿಲಂ ಸಿಟಿಯಲ್ಲಿ ನಡೆದಿತ್ತು. ಶೂಟಿಂಗ್ ತುಂಬಾ ಚೆನ್ನಾಗಿ ನಡೆದಿತ್ತು. ಜೊತೆಗೆ ನನಗೆ ತುಂಬಾನೆ ಹಣ ಸಹ ದೊರೆಯಿತು. ಈ ಹಾಡಿಗೆ ಕೀರವಾಣಿ ಮ್ಯೂಸಿಕ್ ಕಂಪೋಸ್ ಮಾಡಿದ್ದರು. ಸುಂದರಂ ಮಾಸ್ಟರ್‍ ಕೊರಿಯೋಗ್ರಫಿ ಮಾಡಿದ್ದರು. ಎಂದು ದಿಯಾ ಹೇಳಿದ್ದಾರೆ.

ಇನ್ನೂ ಮಿಸ್ ಆಸಿಯಾ ಫೆಸಿಫಿಕ್ ಕಿರೀಟ ಪಡೆದುಕೊಂಡ ಬಳಿಕ ಆಕೆ ಅನೇಕ ಸಿನೆಮಾಗಳಲ್ಲಿ ನಟಿಸಿದ್ದರು. ಅನೇಕ ಸ್ಟಾರ್‍ ಗಳ ಜೊತೆಗೆ ತೆರೆ ಹಂಚಿಕೊಂಡಿದ್ದರು. ರೆಹನಾ ಹೈ ತೆರೆ ದಿಲ್ ಮೇ, ಲಗೇ ರಹೋ ಮುನ್ನಾ ಭಾಯ್ ಸೇರಿದಂತೆ ಅನೇಕ ಸಿನೆಮಾಗಳಲ್ಲಿ ನಟಿಸಿ ಫಾಲೋಯಿಂಗ್ ಸಹ ಬೆಳೆಸಿಕೊಂಡರು. ಇನ್ನೂ ಇತ್ತೀಚಿಗಷ್ಟೆ ತೆಲುಗಿನಲ್ಲಿ ಬಿಡುಗಡೆಯಾದ ವೈಲ್ಡ್ ಡಾಗ್ ಸಿನೆಮಾದಲ್ಲಿ ಸಹ ದಿಯಾ ಬಣ್ಣ ಹಚ್ಚಿದ್ದರು.

Most Popular

To Top