Film News

ಆಸ್ಪತ್ರೆಯಲ್ಲಿ ಕಾಣಿಸಿಕೊಂಡ ಉರ್ಫಿ ಜಾವೇದ್, ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಯ ಪಾಲಾದ ಬೋಲ್ಡ್ ಬ್ಯೂಟಿ……!

ಬಾಲಿವುಡ್ ಸಿನಿರಂಗದ ನಟಿಯರ ಪೈಕಿ ಸದಾ ವಿವಾದಗಳ ಮೂಲಕ ಸುದ್ದಿಯಲ್ಲಿರುವ ನಟಿಯರಲ್ಲಿ ಉರ್ಫಿ ಜಾವೇದ್ ಸದಾ ಮುಂದಿರುತ್ತಾರೆ ಎಂದು ಹೇಳಬಹುದಾಗಿದೆ. ವಿವಿಧ ರೀತಿಯ ಅದರಲ್ಲೂ ವಿಚಿತ್ರವಾದ ಬಟ್ಟೆಗಳ ಮೂಲಕ ಆಕೆ ಸದಾ ಸುದ್ದಿಯಾಗುತ್ತಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ಸದಾ ಸೆನ್ಷೇಷನ್ ಕ್ರಿಯೇಟ್ ಮಾಡುತ್ತಿರುತ್ತಾರೆ. ಇದೀಗ ಆಕೆ ಆಸ್ಪತ್ರೆಯ ಬೆಡ್ ಮೇಲೆ ಮಲಗಿ ಕಾಣಿಸಿಕೊಂಡಿದ್ದಾರೆ. ಆಕೆಯ ಪೊಟೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ನಟಿ ಉರ್ಫಿ ಮೊದಲು ಕಿರುತೆರೆಯಲ್ಲಿ ಕಾಣಿಸಿಕೊಂಡರೂ ಸಹ ಆಕೆ ಪಾಪ್ಯುಲರ್‍ ಆಗಿದ್ದು ಮಾತ್ರ ಹಿಂದಿ ವರ್ಷನ್ ನ ಬಿಗ್ ಬಾಸ್ ನಲ್ಲಿ. ಈ ಶೋ ಮೂಲಕ ಕ್ರೇಜ್ ಸಂಪಾದಿಸಿಕೊಂಡ ಈಕೆ ಶೋ ನಿಂದ ಹೊರಬಂದ ಬಳಿಕ ವಿಚಿತ್ರವಾದ ಬಟ್ಟೆಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ಪ್ರತಿನಿತ್ಯ ಒಂದಲ್ಲ ಒಂದು ರೀತಿಯ ವಿಚಿತ್ರವಾದ ಬಟ್ಟೆಗಳನ್ನು ಧರಿಸಿ ಸೋಷಿಯಲ್ ಮಿಡಿಯಾದಲ್ಲಿ ಸೆನ್ಷೇಷನ್ ಕ್ರಿಯೇಟ್ ಮಾಡುತ್ತಿರುತ್ತಾರೆ. ಮೈಕೊರೆಯುವ ಚಳಿಯಲ್ಲೂ ಸಹ ಆಕೆ ತುಂಟು ಬಟ್ಟೆಯುಟ್ಟು ಎಲ್ಲರ ಗಮನ ಸೆಳೆಯುತ್ತಾಳೆ. ಕೈಗೆ ಸಿಗುವಂತಹ ವಸ್ತುಗಳನ್ನು ಬಳಸಿಕೊಂಡು ಖಾಸಗಿ ಅಂಗಾಂಗಗಳನ್ನು ಕವರ್‍ ಮಾಡಿಕೊಂಡು ಸಹ ಪೋಟೋಶೂಟ್ಸ್ ಹಂಚಿಕೊಳ್ಳುತ್ತಿರುತ್ತಾರೆ. ಸದಾ ಬೋಲ್ಡ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದ ಈಕೆ ಇದೀಗ ಆಸ್ಪತ್ರೆಯ ಬೆಡ್ ಮೇಲೆ ಮಲಗಿ ಕಾಣಿಸಿಕೊಂಡಿದ್ದು, ಈ ಪೊಟೋ ವೈರಲ್ ಆಗಿದೆ.

ಇನ್ನೂ ಉರ್ಫಿ ಜಾವೇದ್ ಆಸ್ಪತ್ರೆಯ ಬೆಡ್ ಮೇಲೆ ಕಾಣಿಸಿಕೊಂಡಿದ್ದಾರೆ. ಆಕೆ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನುವಂತೆ ಆಕೆಯ ಬಾಯಿಗೆ ಮಾಸ್ಕ್ ಹಾಕಕಾಗಿದೆ. ಬೆಡ್ ಮೇಲೆ ಮಲಗಿ ಆಕೆ ಎರಡೂ ಕೈಗಳನ್ನು ಮೇಲಕ್ಕೆತ್ತಿ ವಿಕ್ಟರಿ ಸಿಂಬಲ್ ತೋರಿಸಿದ್ದಾರೆ. ಇನ್ನೂ ಈ ಪೊಟೋ ಅನ್ನು ಆಕೆ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದರು. ಆಕೆಗೆ ಏನಾಗಿದೆ ಎಂದು ಎಲ್ಲರೂ ಚರ್ಚೆಗಳನ್ನು ಶುರು ಮಾಡಿದ್ದರು. ಈ ಪೊಟೋಗೆ ತುಂಬಾನೆ ನೆಗೆಟೀವ್ ಕಾಮೆಂಟ್ ಗಳು ಸಹ ಬರುತ್ತಿದ್ದಂತೆ, ಆಕೆ ಈ ಪೊಟೋ ಡಿಲೀಟ್ ಸಹ ಮಾಡಿದ್ದಾರೆ. ಸದ್ಯ ಉರ್ಫಿ ತನ್ನ ಪೊಟೋ ಡಿಲೀಟ್ ಮಾಡಿದ ಕಾರಣದಿಂದ ಆಕೆ ಅಭಿಮಾನಿಗಳನ್ನು ದಾರಿ ತಪ್ಪಿಸುವ ನಿಟ್ಟಿನಲ್ಲಿ ಈ ರೀತಿ ಮಾಡಿದ್ದಾರೆ ಎಂದು ಟ್ರೋಲ್ ಸಹ ಮಾಡಿದ್ದಾರೆ. ಈ ಹಿಂದೆ ಸಹ ಆಕೆ ಪೊಲೀಸರು ಬಂಧನ ಮಾಡಿದ್ದರು ಎಂಬ ಸೀನ್ ಕ್ರಿಯೇಟ್ ಮಾಡಿದ್ದರು. ಈ ಕಾರಣದಿಂದ ಆಕೆ ಮತ್ತೆ ಪಾಪ್ಯುಲರ್‍ ಆಗಲು ಈ ರೀತಿ ಮಾಡಿದ್ದಾರೆ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ.

Most Popular

To Top