Film News

ಮಾಜಿ ಪತಿ ಬಗ್ಗೆ ಸಂಚಲನಾತ್ಮಕ ಹೇಳಿಕೆ ಕೊಟ್ಟ ರಾಖಿ, ಸ್ನಾನ ಮಾಡುತ್ತಿದ್ದಾಗಿ ವಿಡಿಯೋ ಮಾಡಿ ಏನ್ ಮಾಡ್ತಿದ್ದ ಗೊತ್ತಾ?

ಬಾಲಿವುಡ್ ನ ಐಟಂ ಬಾಂಬ್ ಎಂತಲೇ ಖ್ಯಾತಿ ಪಡೆದುಕೊಂಡ ರಾಖಿ ಸಾವಂತ್ ಪ್ರತಿನಿತ್ಯ ಒಂದಲ್ಲ ಒಂದು ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಕಳೆದೆರಡು ತಿಂಗಳಿನಿಂದ ಸದಾ ಅವರ ಹೆಸರು ಕೇಳಿಬರುತ್ತಲೇ ಇದೆ. ಸಿನೆಮಾ ಕಥೆಯಂತೆ ಆಕೆಯ ಲವ್ ಸ್ಟೋರಿ ಸಹ ಸಾಗಿದೆ. ಮೈಸೂರು ಮೂಲದ ಆದಿಲ್ ಖಾನ್ ದುರಾನಿ ಎಂಬಾತನೊಂದಿಗೆ ಪ್ರೇಮಪಯಣ, ಬಳಿಕ ನಿಗೂಡ ಮದುವೆ, ಬಳಿಕ ಆರೋಪಗಳು ಮಾಡಿದ್ದು, ಇದಾದ ನಂತರ ಆದಿಲ್ ನನ್ನು ಜೈಲಿಗೆ ಕಳುಹಿಸಿದ್ದು, ಹೀಗೆ ಅವರ ಲವ್ ಸ್ಟೋರಿ ಅನೇಕ ತಿರುವುಗಳನ್ನು ಪಡೆದುಕೊಳ್ಳುತ್ತಲೇ ಇದೆ. ಇದೀಗ ಆಕೆ ತನ್ನ ಮಾಜಿ ಪತಿಯ ಬಗ್ಗೆ ಕೆಲವೊಂದು ಸಂಚಲನಾತ್ಮಕ ಹೇಳಿಕೆಗಳನ್ನು ಕೊ‌ಟ್ಟಿದ್ದಾರೆ.

ವಿವಾದಗಳಿಗೆ ಕೇರಾಫ್ ಎಂದೇ ಕರೆಯಲಾಗುವ ರಾಖಿ ಸಾವಂತ್ ಸದಾ ಏನೋ ಒಂದು ವಿಚಾರಕ್ಕೆ ಸುದ್ದಿಯಲ್ಲೇ ಇರುತ್ತಾರೆ. ಯಾವುದೇ ವಿಚಾರವಾದರೂ ಸಹ ಹಿಂದೆ ಮುಂದೆ ನೋಡದೇ ಮಿಡಿಯಾ ಮುಂದೆ ಮಾತನಾಡುತ್ತಾರೆ. ಅದರಲ್ಲೂ ಆಕೆ ತನ್ನ ವೈಯುಕ್ತಿಕ ವಿಚಾರಗಳಿಂದ ಸಿಕ್ಕಾಪಟ್ಟೆ ಸುದ್ದಿಯಾದರು. ರಾಖಿ ತನ್ನ ಮೊದಲ ಪತಿ ರಿತೇಶ್ ನಿಂದ ವಿಚ್ಚೇದನ ಪಡೆದುಕೊಂಡರು. ಬಳಿಕ ಕರ್ನಾಟಕದ ಆದಿಲ್ ದುರಾನಿ ಎಂಬ ಯುವಕನೊಂದಿಗೆ ಪ್ರೇಮಾಯಣ ಸಾಗಿಸಿದರು. ಯಾರಿಗೂ ತಿಳಿಯದೇ ವಿವಾಹವಾದರು. ಜೊತೆಗೆ ಆಕೆ ಇಸ್ಲಾಂ ಧರ್ಮಕ್ಕೆ ಮತಾಂತರ ಸಹ ಆಗಿದ್ದರಂತೆ. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಆಕೆ ಆದಿಲ್ ನಿಂದ ಸಹ ದೂರವಾದರು. ಇದೀಗ ಆದಿಲ್ ಹಾಗೂ ರಾಖಿ ಸಾವಂತ್ ಒಬ್ಬರ ಮೇಲೋಬ್ಬರು ಆರೋಪಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇದೀಗ ರಾಖಿ ಸಾವಂತ್ ಆದಿಲ್ ದುರಾನಿ ಬಗ್ಗೆ ಕೆಲವೊಂದು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ.

ಆದಿಲ್ ಬಗ್ಗೆ ಆರೋಪಗಳನ್ನು ಮಾಡಿರುವ ರಾಖಿ, ತಾನು ಸ್ನಾನ ಮಾಡುತ್ತಿದ್ದರೇ ವಿಡಿಯೋ ಮಾಡುತ್ತಿದ್ದ, ತನ್ನ ನಗ್ನ ವಿಡಿಯೋಗಳನ್ನು ರೆಕಾರ್ಡ್ ಮಾಡಿದ್ದ. ಆ ವಿಡಿಯೋಗಳನ್ನು ಆತ ದುಬೈನಲ್ಲಿ ನಲವತ್ತೇಳು ಲಕ್ಷಗಳಿಗೆ ಮಾರಾಟ ಮಾಡಿದ್ದೇನೆ. ಆ ವಿಡಿಯೋಗಳು ಯಾವಾಗ ಇಂಟರ್‍ ನೆಟ್ ನಲ್ಲಿ ವೈರಲ್ ಆಗುತ್ತೋ ಎಂಬ ಭಯ ನನ್ನಲ್ಲಿ ಕಾಡುತ್ತಿದ್ದೆ. ಅಷ್ಟೇಅಲ್ಲದೇ ಆದಿಲ್ ಗೆ ಅನೇಕ ಮಹಿಳೆಯರ ಜೊತೆಗೆ ಅಕ್ರಮ ಸಂಬಂಧಗಳಿವೆ. ಪುರುಷರೊಂದಿಗೆ ಸಹ ಆತ ಶೃಂಗಾರ ಕ್ರೀಡೆ ನಡೆಸಿದ್ದಾನೆ. ನಾನು ಸೆಲೆಬ್ರೆಟಿಯಾದ ಹಿನ್ನೆಲೆಯಲ್ಲಿ ಆ ವಿಡಿಯೋ ಲೀಕ್ ಆದರೇ ನನ್ನ ಮುಖವನ್ನು ಸಮಾಜದಲ್ಲಿ ತೋರಿಸಲು ಸಾಧ್ಯವಿಲ್ಲ. ನಾನು ಆದಿಲ್ ನೊಂದಿಗೆ ಇರುವಷ್ಟು ದಿನ ನರಕ ನೋಡಿದ್ದೇನೆ ಎಂದು ಆರೋಪಗಳ ಸುರಿಮಳೆಗೈದಿದ್ದಾರೆ.

ಇನ್ನೂ ರಾಖಿ ಸಾವಂತ್ ಗೆ ಮದುವೆಯಾದ ವಿಚಾರವನ್ನು ಬಚ್ಚಿಟ್ಟು ಮೋಸ ಮಾಡಿದ್ದಾಳೆ ಎಂದು ಆದಿಲ್ ದುರಾನಿ ಸಹ ಆರೋಪಗಳನ್ನು ಮಾಡಿದ್ದಾರೆ. ಇನ್ನೂ ಅತ್ಯಾಚಾರದ ಆರೋಪದ ಮೇಲೆ ಜೈಲಿನಲ್ಲಿದ್ದ ಆದಿಲ್ ಜಾಮೀನು ಮೇಲೆ ಹೊರಬಂದಿದ್ದು, ರಾಖಿ ವಿರುದ್ದ ಕಿಡಿಕಾರುತ್ತಿದ್ದಾರೆ. ಇದೀಗ ರಾಖಿ ನೀಡಿದ ಹೇಳಿಕೆಗಳ ವಿರುದ್ದ ಆತ ಯಾವ ರೀತಿ ಕೌಂಟರ್‍ ಕೊಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top