News

ಬೆಂಗಳೂರಿನ ಖ್ಯಾತ ರಾಮೇಶ್ವರಂ ಕೆಫೆಯಲ್ಲಿ ಸ್ಟೋಟ, ಕೆಫೆ ಎಂಡಿ ನೀಡಿದ್ರ ಸ್ಪೋಟಕ ಮಾಹಿತಿ……!

ಸಿಲಿಕಾನ್ ಸಿಟಿ ಬೆಂಗಳೂರಿನ ಕುಂದಲಹಳ್ಳಿ ಎಂಬಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಸ್ಪೋಟಗೊಂಡ ಪರಿಣಾಮ 5 ಮಂದಿಗೆ ಗಂಭಿರ ಗಾಯಗಳಾಗಿವೆ. ಕೆಫೆಗೆ ಬಂದಿದ್ದ ವ್ಯಕ್ತಿಯೊಬ್ಬರ ಬ್ಯಾಗ್ ನಲ್ಲಿದ್ದ ನಿಗೂಡ ವಸ್ತು ಸ್ಪೋಟಗೊಂಡಿದೆ ಎನ್ನಲಾಗಿದೆ. ಸದ್ಯ ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈ ಘಟನೆಯ ಹಿಂದೆ ಅನೇಕ ಅನುಮಾನಗಳು ವ್ಯಕ್ತವಾಗಿದೆ. ಹೊರಗಡೆಯಿಂದ ತಂದಿದ್ದ ಬ್ಯಾಗ್ ನಲ್ಲಿದ್ದ ವಸ್ತು ಸ್ಪೋಟಗೊಂಡಿದ್ದು, ಇದೊಂದು ದ್ವೇಷ ಸ್ಪೋಟ ಇರಬಹುದು ಎನ್ನಲಾಗಿದೆ.

ಬೆಂಗಳೂರಿ ರಾಮೇಶ್ವರಂ ಕೆಫೆ ಅಂಬಾನಿ ಕುಟುಂಬದಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಕ್ಯಾಟರಿಂಗ್ ಗುತ್ತಿಗೆ ವಹಿಸಿಕೊಂಡಿದೆ. ಜೊತೆಗೆ ರಾಮೇಶ್ವರಂ ಕೆಫೆ ಇಡೀ ದೇಶದಾದ್ಯಂತ ಕ್ಯಾಟರಿಂಗ್ ವಿಸ್ತರಿಸಲು ನಿರ್ಧಾರ ಮಾಡಿದ್ದರು ಈ ಕಾರಣದಿಂದ ಬ್ಯುಸಿನೆಸ್ ಸಂಬಂಧ ಸ್ಟೋಟಿಸಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಕುರಿತು ರಾಮೇಶ್ವರಂ ಕೆಫೆಯ ಎಂ.ಡಿ. ದಿವ್ಯಾ ಮಾದ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ನಾನು ಕೆಫೆಯಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನು ಗಮನಿಸಿದ್ದೇನೆ. 10 ಸೆಕೆಂಡ್ ಗಳಲ್ಲಿ ಎರಡು ಬಾರಿ ಸ್ಪೋಟ ಸಂಭವಿಸಿದೆ. ಇದು ಕೈ ತೊಳೆಯುವ ಜಾಗದಲ್ಲಿ ಸ್ಪೋಟ ಸಂಭವಿಸಿದೆ. ಆ ಜಾಗದಲ್ಲಿ ಯಾವುದೇ ಸಿಲಿಂಡರ್‍ ಇರಲಿಲ್ಲ. ಕೆಫೆಯಲ್ಲಿಟ್ಟಿದ್ದ ಸಿಲಿಂಡರ್‍ ಗಳು ಸೇಫ್ ಆಗಿದೆ. ಸ್ಪೋಟಗೊಂಡ ಜಾಗದಲ್ಲಿ ಇಬ್ಬರು ಉದ್ಯೋಗಿಗಳ ಗುರುತಿನ ಚೀಟಿ ಹಾಗೂ ಬ್ಯಾಟರಿ ಬೋಲ್ಟ್ ಗಳು ಸಿಕ್ಕಿವೆ. ನಮಗೆ ದೊರೆತಂತಹ ಮಾಹಿತಿಯಂತೆ ಯಾರೋ ಗ್ರಾಹಕರ ಸೋಗಿನಲ್ಲಿ ಬಂದು ಬ್ಯಾಗ್ ಇಟ್ಟು ಹೋಗಿದ್ದಾರೆ. ಅದೇ ಬ್ಯಾಗ್ ನಿಂದ ಬ್ಲಾಸ್ಟ್ ಆಗಿದೆ. ಆತ ಬಂದು ಹೋದ ನಿಖರ ಮಾಹಿತಿಯಿಲ್ಲ. ಸಿಸಿಟಿವಿ ದೃಶ್ಯಗಳನ್ನು ಪೊಲೀಸರಿಗೆ ನೀಡಲಾಗಿದೆ ಎಂದು ರಾಮೇಶ್ವರಂ ಕೆಫೆ ಎಂ.ಡಿ. ದಿವ್ಯಾ ತಿಳಿಸಿದ್ದಾರೆ ಎನ್ನಲಾಗಿದೆ. ಇನ್ನೂ ಘಟನಾ ಸ್ಥಳಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯ ಅಧಿಕಾರಿಗಳ ತಂಡ, ಶ್ವಾನದಳ ಸ್ಥಳಕ್ಕೆ ಭೇಟಿ ನೀಡಿದೆ. ಡಿಜಿಪಿ ಅಲೋಕ್ ಮೋಹನ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಇನ್ನೂ ಘಟನೆಯ ಕುರಿತು ಸಿಎಂ ಸಿದ್ದರಾಮಯ್ಯ ಮಾತನಾಡಿ, ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಪೋಟದಲ್ಲಿ ಸುಧಾರಿಯ ಸ್ಪೋಟಕ್ಕೆ ಸಾಮಾಗ್ರಿ ಬಳಕೆ ಮಾಡಿರಬಹುದು. ಇಂತಹ ಘಟನೆಗಳು ಎಂದಿಗೂ ನಡೆಯಬಾರದು. ಎಲ್ಲಾ ಕಾಲದಲ್ಲಿಯೂ ಅಂತಹ ಘಟನೆಗಳು ನಡೆಯುತ್ತಿರುತ್ತವೆ. ನಮ್ಮ ಸರ್ಕಾರದ ಅವಧಿಯಲ್ಲಿ ಮೊದಲ ಭಾರಿ ಈ ರೀತಿಯ ಘಟನೆ ನಡೆದಿದೆ. ಸ್ಪೋಟ ನಡೆದ ಜಾಗದಲ್ಲಿ ನೆಟ್ ಬೋಲ್ಡ್ ಪತ್ತೆಯಾಗಿದೆ. ಯಾವುದೇ ಗಂಭೀರ ಹಾನಿಯಾಗಿಲ್ಲ, ಯಾವುದೇ ಪ್ರಾಣಪಾಯ ಹಾನಿಯಾಗಿಲ್ಲ, ಈ ಕುರಿತು ಅಧಿಕಾರಿಗಳಲ್ಲಿ ಮಾಹಿತಿ ಪಡೆದಿದ್ದೇನೆ. ಪರಿಶೀಲನೆ ನಡೆಸಿ ತನಿಖೆ ನಡೆಸುತ್ತಿದ್ದಾರೆ ಎಂದು ಸಿಎಂ ಸ್ಪಷ್ಟನೆ ನೀಡಿದ್ದಾರೆ.

Most Popular

To Top