ಬೆಂಗಳೂರಿನಲ್ಲಿ ಇಂದು ರಾತ್ರಿ 12 ರಿಂದ ಹಲವು ಸಾರಿಗೆ ಸೇವೆ ಬಂದ್, ಓಲಾ-ಊಬರ್ ಸಹ ಬಂದ್….!

Follow Us :

ಕಾಂಗ್ರೇಸ್ ಸರ್ಕಾರದ ಶಕ್ತಿ ಯೋಜನೆಯ ಬಳಿಕ ಖಾಸಗಿ ಸಾರಿಗೆ ಸಂಸ್ಥೆಗಳು ಸಂಕಷ್ಟಕ್ಕೆ ಸಿಲುಕಿದ್ದು, ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸೆ.11 ರಂದು ಬೆಂಗಳೂರು ಬಂದ್ ಗೆ ಕರೆ ನೀಡಲಾಗಿದೆ. ಈ ಕಾರಣದಿಂದ ಬೆಂಗಳೂರಿನಲ್ಲಿ ಇಂದು ರಾತ್ರಿಯಿಂದಲೇ ಆಟೋ, ಓಲಾ, ಊಬರ್‍ ಸೇರಿದಂತೆ ಹಲವು ಸಾರಿಗೆ ಸೇವೆ ಬಂದ್ ಆಗಲಿದ್ದು, ಪ್ರಯಾಣಿರಿಗೆ ಸಮಸ್ಯೆಯಾಗಲಿದೆ.

ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ನೀಡಿದ ಗ್ಯಾರಂಟಿಗಳ ಪೈಕಿ ಶಕ್ತಿ ಯೋಜನೆ ಸಹ ಒಂದಾಗಿದ್ದು, ಈ ಯೋಜನೆಯಡಿ ಮಹಿಳೆಯರು ರಾಜ್ಯದ ಒಳಗೆ ಉಚಿತವಾಗಿ ಸರ್ಕಾರಿ ಬಸ್ ಗಳಲ್ಲಿ ಓಡಾಟ ಮಾಡಬಹುದಾಗಿದೆ. ಇದರಿಂದಾಗಿ ಖಾಸಗಿ ಸಾರಿಗೆ ಸಂಕಷ್ಟಕ್ಕೆ ಸಿಲುಕಿದೆ. ಈ ಸಂಬಂಧ ಖಾಸಗಿ ಸಾರಿಗೆ ಒಕ್ಕೂಟದ ವತಿಯಿಂದ ಈಗಾಗಲೇ ರಾಜ್ಯ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರಿಗೆ ಮನವಿ ಪತ್ರ ಸಹ ಸಲ್ಲಿಸಲಾಗಿತ್ತು. ಆದರೆ ರಾಮಲಿಂಗಾರೆಡ್ಡಿ ಅವರ ಮನವಿಗೆ ಸ್ಪಂದಿಸಲಿಲ್ಲ. ಆದ್ದರಿಂದ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸೆ.11 ರಂದು ಬೆಂಗಳೂರು ಬಂದ್ ಗೆ ಕರೆ ನೀಡಲಾಗಿದೆ.

ಇನ್ನೂ ಖಾಸಗಿ ಸಾರಿಗೆ ಒಕ್ಕೂಟಗಳು ನಡೆಸುತ್ತಿರುವ ಬೆಂಗಳೂರು ಬಂದ್ ಕಾರಣದಿಂದ ಬೆಂಗಳೂರಿನಲ್ಲಿ ಭಾನುವಾರ ರಾತ್ರಿಯಿಂದಲೇ ಖಾಸಗಿ ಸಾರಿಗೆ ಸೇವೆ ಬಂದ್ ಆಗಲಿದೆ. ಈ ಬಂದ್ ಗೆ ಆಟೋ, ಟ್ಯಾಕ್ಸಿ, ಓಲಾ, ಊಬರ್‍ ಸಂಸ್ಥೆಗಳು ಸಂಪೂರ್ಣ ಬೆಂಬಲ ನೀಡಿವೆ. ಇನ್ನೂ ಈ ಬಂದ್ ನಲ್ಲಿ ಮತಷ್ಟು ಚಾಲಕರ ಸಂಘಗಳೂ ಸಹ ಭಾಗಿಯಾಗಲಿದೆ ಎಂದು ತಿಳಿದುಬಂದಿದೆ. ಅನಧಿಕೃತ ರಾಪಿಡೋ ಬ್ಯಾನ್ ಮಾಡುವ ಬೇಡಿಕೆ ಸಹ ಇದೇ ವೇಳೆ ಇಡಲಾಗುತ್ತದೆ ಎನ್ನಲಾಗಿದೆ.