ತಾರಕರತ್ನಗಾಗಿ ಬಾಲಕೃಷ್ಣ ಪ್ರಮುಖ ನಿರ್ಣಯ, ತಾರಕರತ್ನಗೆ ಬಂದ ಸ್ಥಿತಿ ಯಾರಿಗೂ ಬರಬಾರದು ಎಂದು ಬಾಲಯ್ಯ ನಿರ್ಣಯ…..!

ನಂದಮೂರಿ ಕುಟುಂಬದ ತಾರಕರತ್ನ ಅಕಾಲಿಕ ಮರಣದ ಬಳಿಕ ನಂದಮೂರಿ ಕುಟುಂಬದ ಜೊತೆಗೆ ಅಭಿಮಾನಿಗಳೂ ಸಹ ತುಂಬಾ ನೋವನ್ನು ಅನುಭವಿಸಿದ್ದಾರೆ. ಅವರ ಸ್ಥಾನವನ್ನು ಯಾರೂ ಸಹ ತುಂಬಲು ಸಾಧ್ಯ ಆಗುತ್ತಿಲ್ಲ. ಇನ್ನೂ ತಾರಕರತ್ನ ರವರಿಂದ ಅವರ ಪತ್ನಿ ಅಲೇಖ್ಯಾ ರೆಡ್ಡಿ ಸಹ ತುಂಬಾನೆ ನೋವನ್ನು ಅನುಭವಿಸುತ್ತಿದ್ದಾರೆ. ತಾರಕರತ್ನರನ್ನು ನೆನೆದು ಎಮೋಷನಲ್ ಆಗುತ್ತಿದ್ದಾರೆ. ಇನ್ನೂ ತಾರಕರತ್ನ ಅನಾರೋಗ್ಯಕ್ಕೆ ಗುರಿಯಾದಾಗಿನಿಂದ ಅವರ ಸಂಪೂರ್ಣ ಆರೋಗ್ಯ ಜವಾಬ್ದಾರಿ ವಹಿಸಿಕೊಂಡಿದ್ದು ನಂದಮೂರಿ ಬಾಲಕೃಷ್ಣರವರೇ. ಇದೀಗ ಆತನ ನೆನಪಿಗಾಗಿ ಮತ್ತೊಂದು ದೊಡ್ಡ ನಿರ್ಣಯ ತೆಗೆದುಕೊಂಡಿದ್ದಾರೆ.

ದಿವಂಗತ ತಾರಕರತ್ನ ಮೃತಪಟ್ಟು ಒಂದು ತಿಂಗಳು ಪೂರ್ಣಗೊಂಡಿದ್ದು, ಅಲೇಖ್ಯಾ ಎಮೋಷನಲ್ ಪೋಸ್ಟ್ ಸಹ ಮಾಡಿದ್ದರು. ಬಾಲಕೃಷ್ಣರವರು ಅವರಿಗೆ ಮಾಡಿದ ಸಹಾಯವನ್ನು ನೆನೆದು ಭಾವುಕರಾಗಿದ್ದರು. ನಾವು ಕುಟುಂಬ ಎಂದು ಕರೆಯುವ ಏಕೈಕ ವ್ಯಕ್ತಿ ಬಾಲಕೃಷ್ಣ ಮಾತ್ರ ಎಂದು, ಕಷ್ಟ ಸುಖಗಳಲ್ಲಿ ಬಾಲಕೃಷ್ಣ ತಮ್ಮೊಂದಿಗೆ ಇದ್ದಿದ್ದನ್ನು ನೆನಪಿಸಿಕೊಂಡರು. ಇದೀಗ ನಂದಮೂರಿ ಬಾಲಕೃಷ್ಣ ದೊಡ್ಡ ನಿರ್ಣಯ ತೆಗೆದುಕೊಂಡಿದ್ದಾರೆ. ತಾರಕರತ್ನ ಅಭಿಮಾನಿಗಳಿಗೆ ಶಾಶ್ವತವಾಗಿ ಗುರುತು ಇರುವಂತೆ ಆತನ ಹೆಸರಿನಲ್ಲಿ ದೊಡ್ಡ ಕೆಲಸ ಮಾಡಿದ್ದಾರೆ. ತಾರಕರತ್ನ ಹೆಸರು ಚರಿತ್ರೆಯಲ್ಲಿ ಉಳಿಯುವಂತೆ ತಾರಕರತ್ನ ಮೇಲಿನ ಪ್ರೀತಿಯನ್ನು ಆ ಮೂಲಕ ಪ್ರದರ್ಶನ ಮಾಡುತ್ತಿದ್ದಾರೆ. ತನ್ನ ಕುಟುಂಬಕ್ಕೆ ಬಂದಂತಹ ಕಷ್ಟ ಬೇರೆ ಯಾರಿಗೂ ಬರಬಾರದೆಂದು ಬಾಲಕೃಷ್ಣ ಒಂದು ನಿರ್ಣಯ ತೆಗೆದುಕೊಂಡಿದ್ದಾರೆ.

ಇನ್ನೂ ತಾರಕರತ್ನ ಹೃದಯ ಸಂಬಂಧಿ ಕಾಯಿಲೆಯಿಂದ ಮೃತಪಟ್ಟಿದ್ದು, ಅಂತಹ ನೋವು ಬೇರೆ ಯಾವುದೇ ಬಡವರಿಗೂ ಬರಬಾರದು ಎಂದು ಬಡವರಿಗೆ ಉಚಿತ ವೈದ್ಯಕೀಯ ಸೌಲಭ್ಯ ನೀಡಲು ಬಾಲಕೃಷ್ಣ ನಿರ್ಧಾರ ತೆಗೆದುಕೊಂಡಿದ್ದಾರೆ. ಜೊತೆಗೆ ಹಿಂದೂಪುರದಲ್ಲಿ ಬಾಲಕೃಷ್ಣ ನಿರ್ಮಾಣ ಮಾಡಿದ ಆಸ್ಪತ್ರೆಯ ಬ್ಲಾಕ್ ಒಂದಕ್ಕೆ ತಾರಕರತ್ನ ಹೆಸರನ್ನು ಸಹ ಇಟ್ಟಿದ್ದಾರೆ. ಅದರ ಜೊತೆಗೆ ಬಡವರ ವೈದ್ಯಕೀಯ ಸೇವೆಗಾಗಿ ಕೋಟ್ಯಂತರ ವೆಚ್ಚದ ಶಸ್ತ್ರ ಚಿಕಿತ್ಸಾ ಪರಿಕರಗಳನ್ನು ಆಸ್ಪತ್ರೆಗೆ ನೀಡಿದ್ದಾರೆ. ಅಷ್ಟೇಅಲ್ಲದೇ ಆಸ್ಪತ್ರೆಗೆ ಬರುವಂತಹ ಚಿಕ್ಕ ಮಕ್ಕಳಿಗೆ ಉಚಿತವಾಗಿ ಊಟ ಹಾಗೂ ಔಷಧಿ ಸಹ ಮೂರು ತಿಂಗಳುಗಳ ಕಾಲ ನೀಡಲಿದ್ದಾರಂತೆ.  ಆ ಮೂಲಕ ತಾರಕರತ್ನ ರವರ ಹೆಸರು ಚರಿತ್ರೆಯಲ್ಲಿ ಸ್ಥಿರವಾಗಿರುವಂತೆ ಬಾಲಕೃಷ್ಣ ದೊಡ್ಡ ನಿರ್ಣಯ ತೆಗೆದುಕೊಂಡಿದ್ದು, ಬಾಲಕೃಷ್ಣ ಅಭಿಮಾನಿಗಳೂ ಸಹ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.