ಬಯಕೆ ತೀರಿಸಿಕೊಳ್ಳಲು ನಾಯಿಯನ್ನು ಸಹ ಬಿಡುವುದಿಲ್ಲವೇ, ನೀನು ಅತ್ಯಂತ ನೀಚ ಎಂದ ಪ್ರಿಯಮಣಿ, ವೈರಲ್ ಆದ ಪೋಸ್ಟ್….!

Follow Us :

ಸೌತ್ ಸಿನಿರಂಗದಲ್ಲಿ ಸುಮಾರು ವರ್ಷಗಳಿಂದ ಸಿನೆಮಾಗಳನ್ನು ಮಾಡುತ್ತಾ ಕೆರಿಯರ್‍ ಸಾಗಿಸುತ್ತಿರುವ ಪ್ರಿಯಮಣಿ ಇದೀಗ ಫೈರ್‍ ಆಗಿದ್ದಾರೆ. ಬಿಹಾರದ ರಾಜಧಾನಿ ಪಾಟ್ನಾದಲ್ಲಿ ನಡೆದ ಒಂದು ಹೀನಕೃತ್ಯದ ಬಗ್ಗೆ ಆಕೆ ಕಿಡಿಕಾರಿದ್ದಾರೆ. ಪಾಟ್ನಾದ ಓರ್ವ ಕಾಮುಕ ವ್ಯಕ್ತಿ ಒಂದು ನಾಯಿಯನ್ನು ರೇಪ್ ಮಾಡಿದ್ದಾನೆ. ಈ ಬಗ್ಗೆ ಪೊಲೀಸರೂ ಸಹ ಆತನ ಮೇಲೆ ಕೇಸು ನಮೂದು ಮಾಡಿದ್ದಾರೆ. ಆತನನ್ನು ಕಠಿಣವಾಗಿ ಶಿಕ್ಷೆ ನೀಡುವಂತೆ ಅನೇಕರು ಆಗ್ರಹಿಸಿದ್ದಾರೆ. ಈ ವಿಚಾರದ ಮೇಲೆ ನಟಿ ಪ್ರಿಯಮಣಿ ಸಹ ತನ್ನ ಇನ್ಸ್ಟಾಗ್ರಾಂ ಸ್ಟೇಟಸ್ ನಲ್ಲಿ ಫೈರ್‍ ಆಗಿದ್ದಾರೆ.

ನಾಯಿಯನ್ನೂ ಸಹ ಬಿಡದ ನೀವು ನೀಚರು ಎಂದು ಪ್ರಿಯಮಣಿ ಪೋಸ್ಟ್ ಮಾಡಿದ್ದಾರೆ. ಸದ್ಯ ಆಕೆಯ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇದೊಂದು ಅತ್ಯಂತ ನೀಚವಾದ ಕೃತ್ಯ ಎಂದು ಕೆಟ್ಟ ಭಾಷೆಯಿಂದ ಆಕ್ರೋಷ ಹೊರಹಾಕಿದ್ದಾರೆ. ಇತ್ತೀಚಿಗೆ ಚಿಕ್ಕಮಕ್ಕಳಿಂದ ವಯಸ್ಸಾದವರನ್ನೂ ಸಹ ಕಾಮುಕರು ಬಿಡದೇ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಾರೆ. ಅನೇಕ ಕಡೆ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಲೇ ಇರುತ್ತಿವೆ. ಈ ದೇಶದಲ್ಲಿ ಕಾಮುಕರಿಂದ ಮಹಿಳೆಯರಿಗೆ ಮಾತ್ರ ರಕ್ಷಣೆ ಇಲ್ಲ ಎಂದು ಕೊಂಡರೇ ಪ್ರಾಣಿಗಳಿಗೂ ಸಹ ರಕ್ಷಣೆ ಇಲ್ಲದಂತಾಗಿದೆ ಎಂದು ನಟಿ ಪ್ರಿಯಮಣಿ ಪರೋಕ್ಷವಾಗಿ ಆಕ್ರೋಷವನ್ನು ಹೊರಹಾಕಿದ್ದಾರೆ.

ಇನ್ನೂ ಪ್ರಿಯಮಣಿ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಜೊತೆಗೆ ಆಕೆಯ ಪೋಸ್ಟ್ ಗೆ ಅನೇಕರು ಬೆಂಬಲ ಸಹ ನೀಡಿದ್ದಾರೆ. ಸದ್ಯ ಪ್ರಿಯಮಣಿ ಹಿರೋಯಿನ್ ಆಗಿ ರಿಟೈರ್‍ ಆಗಿದ್ದು, ಸದ್ಯ ಕ್ಯಾರೆಕ್ಟರ್‍ ರೋಲ್ಸ್ ಪ್ಲೇ ಮಾಡುತ್ತಿದ್ದಾರೆ. ಚೆನೈ ಮೂಲದ ಪ್ರಿಯಮಣಿ ಸ್ಟಾರ್‍ ಸಿನೆಮಾಗಳಲ್ಲಿ ಪ್ರಮುಖ ಪಾತ್ರಗಳನ್ನು ಪೋಷಣೆ ಮಾಡುತ್ತಾ ಬ್ಯುಸಿಯಾಗಿದ್ದಾರೆ. ಸದ್ಯ ಆಕೆಯ ಕೈಯಲ್ಲಿ ಆರಕ್ಕೂ ಹೆಚ್ಚು ಸಿನೆಮಾಗಳಿವೆ. ನಾಗಚೈತನ್ಯ ಹಾಗೂ ಕೃತಿಶೆಟ್ಟಿ ಕಾಂಬಿನೇಷನ್ ನಲ್ಲಿ ಮೂಡಿಬರಲಿರುವ ಕಸ್ಟಡಿ ಸಿನೆಮಾದಲ್ಲೂ ಸಹ ಪ್ರಿಯಮಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಶಾರುಖ್ ಖಾನ್ ಹಾಗೂ ಅಟ್ಲಿ ಕಾಂಬಿನೇಷನ್ ನಲ್ಲಿ ಸೆಟ್ಟೇರಿರುವ ಜವಾನ್ ಸಿನೆಮಾದಲ್ಲೂ ಸಹ ಪ್ರಿಯಮಣಿ ನಟಿಸುತ್ತಿದ್ದಾರೆ.

ಇನ್ನೂ ನಟಿ ಪ್ರಿಯಮಣಿ ಪ್ರೀತಿಸಿ ಅಂತರ್ಜಾತಿಯ ವಿವಾಹವಾದರು. ಆಕೆ ಮುಸ್ತಫಾರಾಜ್ ಎಂಬಾತನೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಆತ ಈವೆಂಟ್ ಆರ್ಗನೈಜರ್‍ ಆಗಿದ್ದು, ಅಮೇರಿಕಾದಲ್ಲಿ ಇರುತ್ತಾರೆ. ಇನ್ನೂ ಮುಸ್ತಫಾ ರಾಜ್ ಪ್ರಿಯಮಣಿಯನ್ನು ಎರಡನೇ ವಿವಾಹವಾದರು. ಇನ್ನೂ ಕೆಲವು ದಿನಗಳ ಹಿಂದೆ ಪ್ರಿಯಮಣಿ ಹಾಗೂ ಮುಸ್ತಫಾರಾಜ್ ನಡುವೆ ವಿಬೇದಗಳು ಹುಟ್ಟಿಕೊಂಡಿದೆ ಎಂದು ರೂಮರ್‍ ಗಳು ಹರಿದಾಡಿತ್ತು. ಬಳಿಕ ಅದಕ್ಕೆ ಪ್ರಿಯಮಣಿ ಕ್ಲಾರಿಟಿ ಸಹ ಕೊಟ್ಟರು.