News

ಮಂದಸ್ಮಿತ ಬಾಲರಾಮನನ್ನು ಕಣ್ತುಂಬಿಕೊಂಡ ರಾಮಭಕ್ತರು. ಟೆಂಟ್ ಅಲ್ಲ, ಭವ್ಯ ಮಂದಿರದಲ್ಲಿ ಶ್ರೀರಾಮ ದರ್ಶನ ಎಂದ ಮೋದಿ…..!

ದೇಶದ ಕೋಟ್ಯಂತರ ಹಿಂದೂಗಳ ಕನಸಾಗಿದ್ದ ಅಯೋಧ್ಯೆ ಶ್ರೀರಾಮ ದೇವಾಲಯ ಜ.22 ರಂದು ಲೋಕಾರ್ಪಣೆ ಗೊಂಡು ಬಾಲ ರಾಮನ ಪ್ರಾಣ ಪ್ರತಿಷ್ಟಾಪನೆಯಾಗಿದೆ. ಅಯೋಧ್ಯೆಯಲ್ಲಿ ಮತ್ತೆ ರಾಮನ ದರ್ಬಾರ್‍ ಶುರುವಾಗಲಿದೆ. ಲೋಕಾರ್ಪಣೆಗೊಂಡ ಬಳಿಕ ಬಾಲರಾಮ ವಿಗ್ರಹವನ್ನು ಕಂಡ ರಾಮಭಕ್ತರು ದೈವಪರವಾಶರಾಗಿದ್ದಾರೆ. ಮುಗ್ದ ನಗು, ಮಂದಹಾಸ ಪ್ರತಿಮೆಯಲ್ಲಿ ತುಂಬಿ ತುಳುಕುತ್ತಿದೆ. ಈ ವೇಳೆ ಪ್ರಧಾನಿ ಮೋದಿ ಟೆಂಟ್ ನಲ್ಲಲ್ಲ, ಭವ್ಯ ಮಂದಿರದಲ್ಲಿ ಶ್ರೀರಾಮ ದರ್ಶನವಾಗಲಿದೆ ಎಂದು ತಿಳಿಸಿದ್ದಾರೆ.

500 ವರ್ಷಗಳ ಬಳಿಕ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಗೊಂಡು, ಬಾಲ ರಾಮನ ಪ್ರಾಣ ಪ್ರತಿಷ್ಟಾಪನೆಯಾಗಿದೆ. ರಾಮಮಂದಿರದಲ್ಲಿ ಬಾಲರಾಮ ವಿರಾಜಮಾನನಾದ. ಬಾಲರಾಮನ ತೇಜಸ್ವಿ ಕಣ್ಣುಗಳು ಪುಣ್ಯಭೂಮಿ ಭಾರತವನ್ನು ನೋಡುತ್ತಿವೆ. ಮುಗ್ದ ನಗುವಿನೊಂದಿಗೆ ತನ್ನ ಭಕ್ತರನ್ನು ಸೆಳೆಯುತ್ತಿದ್ದಾರೆ. ಇದೀಗ ಬಾಲರಾಮನ ಪೊಟೋಗಳು ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಎಲ್ಲಾ ಕಡೆ ವೈರಲ್ ಆಗುತ್ತಿವೆ. ಜೈ ಶ್ರೀರಾಮ್ ಎಂದು ಘೋಷಣೆಯನ್ನು ಹಾಕುತ್ತಾ ತಮ್ಮ ಸೋಷಿಯಲ್ ಮಿಡಿಯಾ ಖಾತೆಗಳಲ್ಲಿ, ವಾಟ್ಸಾಪ್ ಸ್ಟೇಟಸ್ ಗಳಲ್ಲಿ ಬಾಲರಾಮನ ಪೊಟೋಗಳನ್ನು ಇಟ್ಟುಕೊಂಡಿದ್ದಾರೆ. ತಾವೂ ಸಹ ಬಾಲರಾಮನನ್ನು ನೋಡಿದರೇ ಆ ಸಮಯ ಕಳೆದು ಹೋಗುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನಬಹುದು.

ಇನ್ನೂ ಜ.22 ರಂದು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಶಾಸ್ತ್ರೋಕ್ತವಾಗಿ ಬಾಲರಾಮನ ಪ್ರಾಣ ಪ್ರತಿಷ್ಟಾಪನೆ ನೆರವೇರಿದೆ. ಮೈ ತುಂಬಾ ಆಭರಣಗಳೊಂದಿಗೆ ಮಿಂಚುತ್ತಿರುವ ರಾಮ ಮಂದಹಾಸ ಬೀರುತ್ತಿರುವುದನ್ನು ನೋಡಿದ್ರೇ ಕಣ್ಣು ತುಂಬಿ ಬರುತ್ತೆ. ಹಣೆಯಲ್ಲಿ ನಾಮ, ತಲೆಯಲ್ಲಿ ಕೀರಿಟ, ಬಾಣ ಹಾಗೂ ಬಿಲ್ಲು ರಾಮನ ಕೈಯಲ್ಲಿದೆ. ಒಟ್ಟಾರೆಯಾಗಿ ಸರ್ವಾಲಂಕಾರವಾಗಿ ಕಾಣುತ್ತಿರುವ ಶ್ರೀರಾಮನನ್ನು ನೋಡುವುದೇ ರಾಮಭಕ್ತರ ಭಾಗ್ಯ ಎಂದು ಹೇಳಬಹುದಾಗಿದೆ. ಅದರಲ್ಲೂ ರಾಮನ ಎರಡೂ ಕಣ್ಣುಗಳ ಬಗ್ಗೆ ವರ್ಣಿಸಲು ಪದಗಳೇ ಸಾಲದು, ಬಾಲರಾಮನ ಕಣ್ಣುಗಳಲ್ಲಿ ತೇಜಸ್ಸು ಎದ್ದು ಕಾಣುತ್ತಿದೆ. ಸಾಕ್ಷಾತ್ ರಾಮನೇ ಬಂದು ಭಕ್ತರನ್ನು ನೋಡಿ ನಗುತ್ತಿದ್ದಾನೆ ಎಂಬ ಭಾವನೆ ಮೂಡುತ್ತದೆ.

ಇನ್ನೂ ರಾಮಮಂದಿರ ಲೋಕಾರ್ಪಣೆಯಾದ ಬಳಿಕ ಪ್ರಧಾನಿ ಮೋದಿ ಮಾತನಾಡಿ, ಸಿಯಾರಾಂ ರಾಮಚಂದ್ರ ಎಂದು ಭಾಷಣ ಆರಂಭಿಸಿದ ಮೋದಿ ಇಂದು ಕೋಟ್ಯಂತರ ಹಿಂದೂಗಳ ಕನಸು ನನಸಾಗಿದೆ. ಹೋರಾಟ, ತ್ಯಾಗ ಬಲಿದಾನಗಳ ಬಳಿ ನಮ್ಮ ಪ್ರಭು ಶ್ರೀರಾಮಚಂದ್ರ ಅಯೋಧ್ಯೆಗೆ ಆಗಮಿಸಿದ್ದಾನೆ. ನಮ್ಮ ರಾಮ ಲಲ್ಲಾ ಇರುವುದು ಟೆಂಟ್ ನಲ್ಲಲ್ಲ, ನಮ್ಮ ರಾಮಲಲ್ಲಾ ಭವ್ಯ ರಾಮ ಮಂದಿರದಲ್ಲಿ ವಿರಾಜಮಾನನಾಗಿದ್ದಾನೆ. ಪ್ರಾಣ ಪ್ರತಿಷ್ಠೆಯ ಅನುಭೂತಿ ವಿಶ್ವದ ಮೂಲೆ ಮೂಲೆಗೂ ತಲುಪಿದೆ ಎಂದಿದ್ದಾರೆ. ಇನ್ನೂ ರಾಮಮಂದಿರ ಪ್ರಾಣಪ್ರತಿಷ್ಟೆಯ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಕಳೆದ 11 ದಿನಗಳಿಂದ ವ್ರತ ಕೈಗೊಂಡಿದ್ದರು. ಜ.22 ರಂದು ಮದ್ಯಾಹ್ನ 12.30ರ ಸುಮಾರಿಗೆ ಪ್ರಾಣಪ್ರತಿಷ್ಠೆ ನೆರವೇರಿದೆ.

Most Popular

To Top