ಅನುಷ್ಕಾ ಶೆಟ್ಟಿ, ಕನ್ನಡ ಮಣ್ಣಿನ ಮಗಳಾದರೂ, ತೆಲುಗು ನಾಡಿನಲ್ಲಿ ಹೆಚ್ಚು ಜನಪ್ರಿಯತೆ ಹಾಗೂ ಅಭಿಮಾನಿಗಳನ್ನು ಪಡೆದಿರುವ ನಟಿ. ತೆಲುಗು ಮತ್ತು ಚಿತ್ರರಂಗದಲ್ಲಿ ಅನುಷ್ಕಾ ಶೆಟ್ಟಿ ಅವರಿಗೆ ಸಹಸ್ರಾರು ಅಭಿಮಾನಿಗಳಿದ್ದಾರೆ. ಹಾಗಂತ ಅವರಿಗೆ ಕನ್ನಡ ನಾಡಿನಲ್ಲಿ ಅಭಿಮಾನಿಗಳು ಇಲ್ಲ ಎಂದಲ್ಲ, ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿಯವರಿಗೆ ಕರ್ನಾಟಕದಲ್ಲಿ ಸಹ ಸಾಕಷ್ಟು ಅಭಿಮಾನಿಗಳಿದ್ದಾರೆ. ಈಕೆ ಕನ್ನಡದಲ್ಲಿ ನಟಿಸಬೇಕು ಎಂದು ಅವರ ಕನ್ನಡ ನಾಡಿನ ಅಭಿಮಾನಿಗಳು ಕಾಯುತ್ತಿದ್ದಾರೆ. ಇದೀಗ ಆ ಕ್ಷಣ ಹತ್ತಿರ ಬಂದಿದೆ. ಅನುಷ್ಕಾ ಶೆಟ್ಟಿ ನಟನೆ ಮುಂದಿನ ಸಿನಿಮಾ “ನಿಶ್ಶಬ್ದಮ್”, ಈ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ಅವರಿಗೆ ಜೋಡಿಯಾಗಿ ಬಹುಭಾಷಾ ನಟ ಮಾಧವನ್ ನಟಿಸಿದ್ದಾರೆ. ಸ್ಕ್ರಾಲ್ ಡೌನ್ ಮಾಡಿ, ಅನುಷ್ಕಾ ಶೆಟ್ಟಿ ಸಿನಿಮಾದ ಕನ್ನಡ ಹಾಡಿನ ವಿಡಿಯೋ ನೋಡಿ
ಶ್ಶಬ್ದಮ್ ಸಿನಿಮಾ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ತೆರೆಕಾಣಲು ಸಜ್ಜಾಗಿತ್ತು. ಇದೀಗ ಕನ್ನಡದಲ್ಲಿ ಸಹ ನಿಶ್ಶಬ್ದಮ್ ಸಿನಿಮಾ ತೆರೆಕಾಣಲಿದೆ. “ನಿಶ್ಯಬ್ದ” ಹೆಸರಿನಲ್ಲಿ ಅನುಷ್ಕಾ ಶೆಟ್ಟಿ ಅಭಿನಯದ ಸಿನಿಮಾ ಕನ್ನಡದಲ್ಲೂ ಬಿಡುಗಡೆಯಾಗಲಿದೆ. ಈಗಗಲೇ ನಿಶ್ಶಬ್ದ ಸಿನಿಮಾ ನಿನ್ನೆ ನಿನ್ನೆ ಕಣ್ಣಲ್ಲಿ ತುಂಬಿಕೊಂಡಿರುವೆ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದ್ದು, ಈ ಕುರಿತು ಸ್ವತಃ ಅನುಷ್ಕಾ ಶೆಟ್ಟಿ ಅವರೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.ಕನ್ನಡದಲ್ಲೇ ಪೋಸ್ಟ್ ಮಾಡಿರುವ ಅನುಷ್ಕಾ ಮತ್ತೊಮ್ಮೆ ಕನ್ನಡಿಗರ ಮನಗೆದ್ದಿದ್ದರೆ..ಈ ಕೆಳಗಿನ ವಿಡಿಯೋ ಒಮ್ಮೆ ನೋಡಿ
“ನಿನ್ನೇ ನಿನ್ನೇ ಕಣ್ಣಲ್ಲಿ ತುಂಬಿಕೊಂಡಿರುವೇ.. ನನ್ನ ಮೊದಲ ಕನ್ನಡ ಲಿರಿಕಲ್ ವಿಡಿಯೋ.. ನಿಮಗಾಗಿ ಇಲ್ಲಿದೆ.. – ನಿಮ್ಮ ಅನುಷ್ಕಾ ಶೆಟ್ಟಿ..” ಎಂದು ಪೋಸ್ಟ್ ಮಾಡಿದ್ದಾರೆ ಅನುಷ್ಕಾ ಶೆಟ್ಟಿ. ಇದುವರೆಗೂ ಒಂದು ಕನ್ನಡ ಸಿನಿಮಾದಲ್ಲಿ ನಟಿಸದೆ ಇದ್ದರು ಕನ್ನಡಾಭಿಮಾನವನ್ನು ಮರೆತಿಲ್ಲ ಅನುಷ್ಕಾ. ಆಗಾಗ ಕನ್ನಡದಲ್ಲಿ ಪೋಸ್ಟ್ ಮಾಡುತ್ತಾ, ಕನ್ನಡಿಗರ ಮನಗೆಲ್ಲುತ್ತಿದ್ದರು ಅನುಷ್ಕಾ, ಇದೀಗ ಕನ್ನಡದಲ್ಲಿ ಅವರ ಮೊದಲ ಸಿನಿಮಾ ಬಿಡುಗಡೆ ಆಗುತ್ತಿರುವುದು ಅವರ ಅಭಿಮಾನಿಗಳಿಗೆ ಬಹಳ ಸಂತೋಷ ತಂದಿದೆ.