Film News

ಬಾಹುಬಲಿ ಅನುಷ್ಕಾ ಯಂಗ್ ರೆಬೆಲ್ ಸ್ಟಾರ್ ರನ್ನು ಆ ರೀತಿ ಕರೆಯುತ್ತಾರಂತೆ, ಅದು ಏನು ಗೊತ್ತಾ?

ಸೌತ್ ಸಿನಿರಂಗದ ಸ್ಟಾರ್‍ ನಟಿಯರಲ್ಲಿ ಅನುಷ್ಕಾ ಶೆಟ್ಟಿ ಸಹ ಟಾಪ್ ಸ್ಥಾನದಲ್ಲೇ ಇರುತ್ತಾರೆ. ತೆಲುಗು ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನದಲ್ಲಿ ಮೂಡಿಬಂದ ರೆಕಾರ್ಡ್ ಬ್ರೇಕ್ ಸಿನೆಮಾ ಬಾಹುಬಲಿ ಸಿನೆಮಾ ಬಳಿಕ ತೆಲುಗು ಸಿನಿರಂಗದಿಂದ ದೂರವೇ ಉಳಿದರು. ಈ ಸಿನೆಮಾದ ಬಳಿಕ ಆಕೆ ಯಾವುದೇ ಸಿನೆಮಾದ ಅಪ್ಡೇಟ್ ಬರಲಿಲ್ಲ. ಪ್ಯಾನ್ ಇಂಡಿಯಾ ಸ್ಟಾರ್‍ ಆದ ಬಳಿಕ ಆಕೆ ಸಿನೆಮಾಗಳಲ್ಲಿ ನಟಿಸುವುದು ಸಹ ಕಡಿಮೆಯಾಯಿತು. ಇದೀಗ ಆಕೆ ಮಿಸ್ ಶೆಟ್ಟಿ, ಮಿಸ್ಟರ್‍ ಪೊಲಿಶೆಟ್ಟಿ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಐದು ವರ್ಷಗಳ ಬಳಿಕ ಆಕೆ ಬೆಳ್ಳಿಪರದೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ಸೌತ್ ಸಿನಿರಂಗದಲ್ಲಿ ಸೂಪರ್‍ ಸ್ಟಾರ್‍ ಆಗಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಈಕೆ ಸಿನಿಮಾಗಳಲ್ಲಿ ಕಾಣಿಸಿಕೊಂಡು ಸುಮಾರು ತಿಂಗಳುಗಳೇ ಕಳೆದಿದೆ. ಬಾಹುಬಲಿ ಸೀರಿಸ್ ಬಳಿಕ ಅನುಷ್ಕಾ ಭಾಗಮತಿ, ನಿಶ್ಯಬ್ದಂ ಸಿನೆಮಾಗಳಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಅನುಷ್ಕಾಶೆಟ್ಟಿ ಯುವಿ ಕ್ರಿಯೇಷನ್ ಬ್ಯಾನರ್‍ ನಟಿ ಯಂಗ್ ಹಿರೋ ನವೀನ್ ಪೊಲಿಶೆಟ್ಟಿ ಜೊತೆ ಸಿನೆಮಾ ಒಂದರಲ್ಲಿ ನಟಿಸುತ್ತಿದ್ದಾರೆ. ಇತ್ತಿಚಿಗಷ್ಟೆ ಈ ಸಿನೆಮಾದ ಪೋಸ್ಟರ್‍ ಸಹ ಬಿಡುಗಡೆಯಾಗಿತ್ತು. ಈ ಸಿನೆಮಾದಲ್ಲಿ ಅನುಷ್ಕಾ ಛೆಫ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಅನುಷ್ಕಾ ಹೆಚ್ಚಾಗಿ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವುದಿಲ್ಲ. ಜೊತೆಗೆ ಹೊರಗಡೆ ಸಹ ಹೆಚ್ಚು ಕಾಣಿಸಿಕೊಳ್ಳುವುದಿಲ್ಲ. ಅಭಿಮಾನಿಗಳ ಮುಂದೆ ಬಂದು ಸುಮಾರು ತಿಂಗಳುಗಳೇ ಕಳೆದಿದೆ.

ಸೌತ್ ಸಿನಿರಂಗದಲ್ಲಿ ಸ್ಟಾರ್‍ ಗಳಾದ ಅನುಷ್ಕಾ ಹಾಗೂ ಪ್ರಭಾಸ್ ನಡುವೆ ಲವ್ ಅಫೈರ್‍ ನಡೆಯುತ್ತಿದೆ ಎಂಬ ರೂಮರ್‍ ಹರಿದಾಡುತ್ತಲೇ ಇದೆ. ಅನೇಕ ಇವರ ಮದುವೆ ಸಹ ನಡೆಯಲಿದೆ ಎಂದೂ ಸಹ ಹೇಳಲಾಗುತ್ತಿದೆ. ಆದರೆ ಅವರಿಬ್ಬರೂ ನಾವು ಒಳ್ಳೆಯ ಸ್ನೇಹಿತರು ಎಂದು ಹೇಳಿದ್ದಾರೆ. ಆದರೂ ಸಹ ಅವರ ಬಗ್ಗೆ ರೂಮರ್‍ ಗಳು ಮಾತ್ರ ಕಡಿಮೆಯಾಗಿಲ್ಲ. ಇತ್ತಿಚಿಗೆ ಅನುಷ್ಕಾ ಅಭಿನಯದ ಮಿಸ್ ಶೆಟ್ಟಿ, ಮಿಸ್ಟರ್‍ ಪೊಲಿಶೆಟ್ಟಿ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾದ ಟೀಸರ್‍ ಸಹ ಇತ್ತೀಚಿಗಷ್ಟೆ ಬಿಡುಗಡೆಯಾಗಿದ್ದು, ಈ ಟೀಸರ್‍ ಪ್ರಭಾಸ್ ತನ್ನ ಸೋಷಿಯಲ್ ಮಿಡಿಯಾದಲ್ಲಿ ಶೇರ್‍ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಇನ್ನೂ ಪ್ರಭಾಸ್ ರವರಿಗೆ ಅನುಷ್ಕಾ ಧನ್ಯವಾದಗಳನ್ನು ತಿಳಿಸುತ್ತಾ ಥ್ಯಾಂಕ್ಯೂ ಪಪ್ಸು ಎಂದು ಕಾಮೆಂಟ್ ಮಾಡಿದ್ದಾರೆ. ಸದ್ಯ ಈ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಪ್ರಭಾಸ್ ರನ್ನು ಅನುಷ್ಕಾ ಪ್ರೀತಿಯಿಂದ ಪಪ್ಸು ಎಂದು ಕರೆಯುತ್ತಾರೆ ಎಂದು ಈ ಪೋಸ್ಟ್ ಮೂಲಕ ತಿಳಿದು ಬಂದಿದೆ.

ಇನ್ನೂ ಅನುಷ್ಕಾ ಸುಮಾರು ವರ್ಷಗಳ ಬಳಿಕ ಮಿಸ್ ಶೆಟ್ಟಿ, ಮಿಸ್ಟರ್‍ ಪೊಲಿಶೆಟ್ಟಿ ಎಂಬ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಈ ಸಿನೆಮಾ ತೆಲುಗು ಸೇರಿದಂತೆ ಕನ್ನಡ, ಮಲಯಾಳಂ ಹಾಗೂ ತಮಿಳು ಭಾಷೆಗಳಲ್ಲೂ ಸಹ ಬಿಡುಗಡೆಯಾಗಲಿದೆ. ಈ ಸಿನೆಮಾದಲ್ಲಿ ಅನುಷ್ಕಾ ಚೆಫ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Most Popular

To Top