Film News

ಆ ವ್ಯಾಧಿಯಿಂದ ಅನಸೂಯ ನೋವು ಪಡುತ್ತಿದ್ದಾರಂತೆ, ಆಕೆ ಹಂಚಿಕೊಂಡ ವಿಡಿಯೋದಲ್ಲಿ ಹೇಳಿದ್ದೇನು?

ತೆಲುಗು ಸಿನಿರಂಗದ ನಟಿ ಕಂ ಆಂಕರ್‍ ಅನಸೂಯ ಸದಾ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ. ಆಕೆಯ ಪ್ರತಿಯೊಂದು ಪೋಸ್ಟ್ ಸಹ ವೈರಲ್ ಆಗುತ್ತಿರುತ್ತದೆ. ಆಕೆಯ ಪೋಸ್ಟ್ ಗಳು ಎಷ್ಟರ ಮಟ್ಟಿಗೆ ವೈರಲ್ ಆಗುತ್ತಿರುತ್ತದೆಯೋ ಅದೇ ಮಟ್ಟಿಗೆ ಟ್ರೋಲ್ ಸಹ ಆಗುತ್ತಿರುತ್ತವೆ. ಇದೀಗ ಆಕೆ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು ಈ ವಿಡಿಯೋದಲ್ಲಿ ತಾನು ಒಂದು ವ್ಯಾಧಿಯಿಂದ ಸಮಸ್ಯೆ ಪಡುತ್ತಿರುವುದಾಗಿ ಹೇಳಿದ್ದಾರೆ. ಇನ್ನೂ ಈ ವಿಡಿಯೋ ಕಾರಣದಿಂದ ಆಕೆ ಸಖತ್ ಟ್ರೋಲ್ ಸಹ ಆಗುತ್ತಿದ್ದಾರೆ. ಆರೋಗ್ಯ ಸಮಸ್ಯೆಯ ಬಗ್ಗೆ ಹೇಳಿದರೇ ಟ್ರೋಲ್ ಆಗಿದ್ದು ಏಕೆ ಎಂಬ ವಿಚಾರಕ್ಕೆ ಬಂದರೇ…

ನಟಿ ಅನಸೂಯ ಸೋಷಿಯಲ್ ಮಿಡಿಯಾದಲ್ಲಿ ತುಂಬಾ ಆಕ್ಟೀವ್ ಆಗಿರುತ್ತಾರೆ. ಪ್ರತಿನಿತ್ಯ ಒಂದು ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿರುತ್ತಾರೆ. ಆಕೆ ಹಾಟ್ ಪೊಟೋಗಳನ್ನು ಸಹ ಹಂಚಿಕೊಳ್ಳುತ್ತಾ ಮತಷ್ಟು ಅಭಿಮಾನಿಗಳನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಇನ್ನೂ ಇತ್ತೀಚಿಗೆ ಆಕೆ ಸಿನೆಮಾಗಳಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ. ಸಿನೆಮಾಗಳಲ್ಲಿ ಎಂಟ್ರಿ ಕೊಟ್ಟ ಬಳಿಕ ಆಕೆಯನ್ನು ರಂಗಮ್ಮತ್ತ ಎಂದು ಮುದ್ದಾಗಿ ಕರೆಯಲು ಶುರು ಮಾಡಿದ್ದಾರೆ ಆಕೆಯ ಅಭಿಮಾನಿಗಳು. ಇನ್ನೂ ಆಕೆ ಗ್ಲಾಮರ್‍ ಬಗ್ಗೆ ಆಲೋಚನೆ ಮಾಡದೇ ಪಾತ್ರಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡುತ್ತಾ ಸಿನೆಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುತ್ತಾರೆ. ಇನ್ನೂ ಆಕೆಗೆ ಬೆಳ್ಳಿತೆರೆಯಲ್ಲಿ ಬಿಗ್ ಬ್ರೇಕ್ ನೀಡಿದ್ದು ಮಾತ್ರ ಪುಷ್ಪಾ ಎಂದರೇ ತಪ್ಪಾಗಲಾರದು. ಈ ಸಿನೆಮಾದಲ್ಲಿ ಆಕೆ ತುಂಬಾನೆ ಪಾಪ್ಯುಲರ್‍ ಆದರು.

ಇನ್ನೂ ನಟಿ ಅನಸೂಯ ತುಂಬಾ ಫನ್ನಿಯಾಗಿರುತ್ತಾರೆ. ತನ್ನ ಇನ್ಸ್ಟಾ ಖಾತೆಯಲ್ಲಿ ರೀಲ್ ಒಂದನ್ನು ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಆಕೆ ತಾನು ವ್ಯಾಧಿಯಿಂದ ಬಳಲುತ್ತಿರುವುದಾಗಿ ಹೇಳಿದ್ದಾರೆ. ಇನ್ನೂ ಈ ವಿಡಿಯೋ ಹೊರಬರುತ್ತಿದ್ದಂತೆ ಆಕೆ ಅಭಿಮಾನಿಗಳೂ ಸೇರಿದಂತೆ ಅನೇಕರು ಶಾಕ್ ಆಗಿದ್ದರು. ಆಕೆಗೆ ಏನಾಯ್ತು ಎಂದು ಆಲೋಚನೆ ಮಾಡುವ ಹೊತ್ತಿಗೆ ಆ ವಿಡಿಯೋಲದಲ್ಲಿನ ಅಸಲಿಯತ್ತು ಹೊರಬಂತು ಆಕೆಗೆ ತಮಾಷೆ ಮಾಡುವ ವ್ಯಾಧಿ ಮಾತ್ರ ಇದೆ ಎಂದು ಹೇಳಿದ್ದಾರೆ. ನನ್ನ ಬಗ್ಗೆ ನೆಗೆಟೀವ್ ಆಗಿ ಮಾತನಾಡುವವರನ್ನು ನಾನು ಹಿಡಿಸಿಕೊಳ್ಳುವುದೇ ಇಲ್ಲ. ಇದೆ ನನ್ನ ವ್ಯಾಧಿ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ. ಇನ್ನೂ ಈ ವಿಡಿಯೋ ಕುರಿತು ನೆಟ್ಟಿಗರು ಕೋಪಗೊಂಡಿದ್ದಾರೆ. ನಿಮಗೆ ವ್ಯಾಧಿ ಇದೆಯೆಂದು ಈ ರೀತಿಯಲ್ಲಿ ತಮಾಷೆ ಮಾಡುತ್ತೀರಾ, ಇದು ನಿಮಗೆ ಬೇಕಿತ್ತು. ಇದು ತುಂಬಾ ಅತಿಯಾಯಿತು ಎಂದು ಕಾಮೆಂಟ್ ಮೂಲಕ ಆಕ್ರೋಷ ಹೊರಹಾಕುತ್ತಿರುತ್ತಾರೆ.

ಇನ್ನೂ ನಟಿ ಅನಸೂಯ ರವರ ಅನೇಕ ಪೋಸ್ಟ್ ಗಳಿಗೆ ತುಂಬಾನೆ ಟ್ರೋಲ್ ಗಳು ಎದುರಾಗುತ್ತಿರುತ್ತದೆ. ಆಕೆಯನ್ನು ಆಂಟಿ ಎಂದು ಅನೇಕರು ಟ್ರೋಲ್ ಮಾಡಿದ್ದರು. ಆಕೆಯ ಮೇಲೆ ಟ್ರೋಲ್ ಮಾಡುವವರ ವಿರುದ್ದ ಆಗಾಗ ಸ್ಟ್ರಾಂಗ್ ಡೋಸ್ ಕೊಡುತ್ತಲೇ ಇರುತ್ತಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಂತೂ ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನು ಸೆಳೆಯುತ್ತಿರುತ್ತಾರೆ.

Most Popular

To Top