ಸೊಸೆಗೆ ಶಾಕ್ ಕೊಟ್ಟ ಅಮಿತಾಬ್, ತನ್ನ ಸೋಷಿಯಲ್ ಮಿಡಿಯಾ ಖಾತೆಯಿಂದ ಐಶ್ವರ್ಯರನ್ನು ಅನ್ ಫಾಲೋ….!

Follow Us :

ಬಾಲಿವುಡ್ ಸಿನಿರಂಗದ ಫೇಮಸ್ ಆದ ಕುಟುಂಬದಲ್ಲಿ ಬಚ್ಚನ್ ಕುಟುಂಬ ಒಂದಾಗಿದೆ. ಕೆಲವು ದಿನಗಳಿಂದ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಬಚ್ಚನ್ ರವರು ವಿಚ್ಚೇದನ ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿ ಭಾರಿ ಸದ್ದು ಮಾಡುತ್ತಿದೆ. ಈ ನಡುವೆ ಅಭಿಷೇಕ್ ತಂದೆ ಅಮಿತಾಬ್ ಬಚ್ಚನ್ ಐಶ್ವರ್ಯ ರೈ ರವರನ್ನು ತಮ್ಮ ಸೋಷಿಯಲ್ ಮಿಡಿಯಾ ಖಾತೆಯಿಂದ ಅನ್ ಫಾಲೋ ಮಾಡಿದ್ದಾರೆ. ಈ ಕಾರಣದಿಂದ ಅವರ ವಿಚ್ಚೇದನಕ್ಕೆ ಸಂಬಂಧಿಸಿದಂತೆ ಮತಷ್ಟು ಚರ್ಚೆ ಶುರುವಾಗಿದೆ.

ಬಾಲಿವುಡ್ ನ ಬೆಸ್ಟ್ ಜೋಡಿ ಎಂದೇ ಕರೆಯಲಾಗುವ ಐಶ್ವರ್ಯ ಹಾಗೂ ಅಭಿಷೇಕ್ ಸುಮಾರು 20 ವರ್ಷಗಳಿಂದ ಸಂತೋಷವಾಗಿ ವೈವಾಹಿಕ ಜೀವನ ಸಾಗಿಸುತ್ತಿದ್ದಾರೆ. ಈ ಜೋಡಿಗೆ ಆರಾಧ್ಯ ಎಂಬ ಮುದ್ದಾದ ಮಗಳೂ ಸಹ ಇದ್ದಾಳೆ. ಇದೀಗ ಈ ಜೋಡಿಯ ಬಗ್ಗೆ ರೂಮರ್‍ ಒಂದು ಕೇಳಿಬರುತ್ತಿದೆ. ಸೋಷಿಯಲ್ ಮಿಡಿಯಾದ ಜೊತೆಗೆ ಬಾಲಿವುಡ್ ಅಂಗಳದಲ್ಲಿ ಜೋರಾಗಿ ಈ ಸುದ್ದಿ ಕೇಳಿಬರುತ್ತಿದೆ. ಶೀಘ್ರದಲ್ಲೇ  ಅವರಿಬ್ಬರೂ ವಿಚ್ಚೇಧನ ಪಡೆದುಕೊಳ್ಳಲಿದ್ದಾರೆ ಎಂಬ ರೂಮರ್‍ ಗಳು ಹರಿದಾಡುತ್ತಲೆ ಇದೆ. ಸದಾ ಜೋಡಿಯಾಗಿ ಹೋಗುತ್ತಿದ್ದಂತಹ ಈ ಜೋಡಿ ಇದೀಗ ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಸಹ ಐಶ್ವರ್ಯ ತನ್ನ ಮಗಳಾದ ಆಧ್ಯಾ ಜೊತೆಗೆ ಮಾತ್ರ ಹೋಗುತ್ತಿದ್ದಾರೆ. ಈ ಬಗ್ಗೆ ಅಭಿಷೇಕ್ ಸ್ಪಷ್ಟನೆ ನೀಡಿದರೂ ಸಹ ನೆಟ್ಟಿಗರು ಮಾತ್ರ ಈ ವಿಚಾರದಲ್ಲಿ ತೃಪ್ತಿಪಟ್ಟಿಕೊಂಡಿಲ್ಲ ಎಂದೇ ಹೇಳಬಹುದು.

ಕೆಲವು ದಿನಗಳ ಹಿಂದೆ ಸಹ ಅಭಿಷೇಕ್ ಕಾರ್ಯಕ್ರಮವೊಂದರಲ್ಲಿ ತಮ್ಮ ಎಂಗೇಜ್ ಮೆಂಟ್ ರಿಂಗ್ ಇಲ್ಲದೇ ಕಾಣಿಸಿಕೊಂಡಿದ್ದರು. ಈ ಕಾರಣದಿಂದ ಮತ್ತೆ ವಿಚ್ಚೇದನದ ಸುದ್ದಿ ವೈರಲ್ ಆಯ್ತು. ಈ ನಡುವೆ ಮತ್ತೊಮ್ಮೆ ಅಮಿತಾಬ್ ಕುಟುಂಬದಲ್ಲಿ ಏನೋ ನಡೆಯುತ್ತಿದೆ ಎಂಬ ಚರ್ಚೆ ಶುರುವಾಗಿದೆ. ಅದಕ್ಕೆ ಕಾರಣ ಸಹ ಬಲವಾಗಿದೆ ಎನ್ನಲಾಗಿದೆ. ಬಿಗ್ ಬಿ ಅಮಿತಾಬ್ ರವರು ತಮ್ಮ ಇನ್ಸ್ಟಾ ಖಾತೆಯಿಂದ ಐಶ್ವರ್ಯ ರೈ ರವರನ್ನು ತಮ್ಮ ಇನ್ಸ್ಟಾ ಖಾತೆಯಲ್ಲಿ ಅನ್ ಫಾಲೋ ಮಾಡಿದ್ದಾರೆ. ಬಿಗ್ ಬಿ ತನ್ನ ಇನ್ಸ್ಟಾ ಖಾತೆಯಲ್ಲಿ 74 ಮಂದಿ ಸೆಲೆಬ್ರೆಟಿಗಳನ್ನು ಫಾಲೋ ಆಗುತ್ತಿದ್ದಾರೆ. ಅದರಲ್ಲಿ ಕತ್ರಿನಾ ಕೈಫ್, ಅಭಿಷೇಕ್ ಬಚ್ಚನ್, ಸಲ್ಮಾನ್ ಖಾನ್ ರವರಂತಹ ಸ್ಟಾರ್‍ ಗಳು ಈ ಪಟ್ಟಿಯಲ್ಲಿದ್ದಾರೆ. ಆದರೆ ಈ ಲೀಸ್ಟ್ ನಲ್ಲಿ ಐಶ್ವರ್ಯ ಕಾಣಿಸದೇ ಇರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಈ ಕಾರಣದಿಂದ ಐಶ್ವರ್ಯ ಬಚ್ಚನ್ ಕುಟುಂಬದಿಂದ ಹೊರಬರುತ್ತಾರಾ ಎಂಬ ಅನುಮಾನಗಳು ಮೂಡುವಂತೆ ಮಾಡಿದೆ.

ಇನ್ನೂ ಅಮಿತಾಬ್ ಐಶ್ವರ್ಯರವನ್ನು ಅನ್ ಫಾಲೋ ಮಾಡಿದಂತಹ ಸುದ್ದಿ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.  ಆದರೆ ಅಮಿತಾಬ್ ಫ್ಯಾನ್ಸ್ ಮಾತ್ರ ಅಮಿತಾಬ್ ರವರ ಅಕೌಂಟ್ಸ್ ಸೆಟ್ಟಿಂಗ್ ನಲ್ಲಿ ಏನಾದರೂ ಸಮಸ್ಯೆ ಬಂದಿರಬಹುದು. ಆದ್ದರಿಂದ ಈ ರೀತಿ ಯಾಗಿರುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ ಅಭಿಷೇಕ್ ಐಶ್ವರ್ಯ ವಿ‌ಚ್ಚೇದನ ಸುದ್ದಿ ಮಾತ್ರ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.