ಆಟೋದಲ್ಲಿ ಪಯಣಿಸುತ್ತಾ ಎಂಜಾಯ್ ಮಾಡಿ ಅಲ್ಲು ಅರ್ಜುನ್ ಮುದ್ದಿನ ಮಗಳು ಅಲ್ಲು ಅರ್ಹಾ, ವೈರಲ್ ಆದ ಪೊಟೋ…..!

Follow Us :

ತೆಲುಗು ಸಿನಿರಂಗದಲ್ಲಿ ಪಕ್ಕಾ ಫ್ಯಾಮಿಲಿ ಮ್ಯಾನ್ ಎಂದು ಅಲ್ಲು ಅರ್ಜುನ್ ರವರನ್ನು ಕರೆಯುತ್ತಾರೆ. ತಾನು ಸಿನೆಮಾಗಳಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ಸಹ ತನ್ನ ಕುಟುಂಬಕ್ಕೆ ತುಂಬಾನೆ ಪ್ರಾಶಸ್ತ್ಯ ನೀಡುತ್ತಾರೆ. ಅದರಲ್ಲೂ ಬನ್ನಿಗೆ ಮಗಳು ಎಂದರೇ ತುಂಬಾ ಇಷ್ಟ ಎಂದು ಹೇಳಲಾಗುತ್ತಿದೆ. ಈಗಾಗಲೇ ಹೊಸವರ್ಷದ ಸಂಭ್ರಮಾಚರಣೆಗೆ ಟಾಲಿವುಡ್ ನ ಅನೇಕ ಸೆಲೆಬ್ರೆಟಿಗಳು ನ್ಯೂ ಇಯರ್‍ ಸೆಲೆಬ್ರೇಷನ್ ಗಾಗಿ ವಿವಿಧ ಕಡೆ ಹೋಗಿದ್ದು, ಅಲ್ಲು ಫ್ಯಾಮಿಲಿ ಸಹ ವೆಕೇಷನ್ ಗೆ ಹೊರಟಿದೆ. ಇದೀಗ ಅಲ್ಲು ಅರ್ಹಾ ಆಟೋದಲ್ಲಿ ಪ್ರಯಾಣಿಸುತ್ತಿರುವ ಕ್ಯೂಟ್ ಪೊಟೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಐಕಾನ್ ಸ್ಟಾರ್‍ ಅಲ್ಲು ಅರ್ಜುನ್, ಅಲ್ಲು ಸ್ನೇಹಾ ಹಾಗೂ ಮಕ್ಕಳು ನ್ಯೂ ಇಯರ್‍ ಸೆಲೆಬ್ರೇಷನ್ ಗಾಗಿ ವೆಕೇಷನ್ ಗೆ ಹಾರಿದ್ದಾರೆ. ಸದ್ಯ ಅಲ್ಲು ಅರ್ಜುನ್ ಪುಷ್ಪಾ-2 ಸಿನೆಮಾದ ಶೂಟಿಂಗ್ ನಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಶೂಟಿಂಗ್ ನಿಂದ ಬಿಡುವು ಮಾಡಿಕೊಂಡು ತನ್ನ ಕುಟುಂಬದೊಂದಿಗೆ ಹೊಸ ವರ್ಷ ಆಚರಣೆಗೆ ವೆಕೇಷನ್ ಗೆ ಹಾರಿದ್ದಾರೆ. ಇನ್ನೂ ಅಲ್ಲು ಸ್ನೇಹಾ ರೆಡ್ಡಿ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ತಮ್ಮ ಮಕ್ಕಳೊಂದಿಗೆ ಇರುವ ವಿಡಿಯೋ ಪೊಟೋಗಳನ್ನು ಆಕೆ ಶೇರ್‍ ಮಾಡುತ್ತಿರುತ್ತಾರೆ. ಜೊತೆಗೆ ವೆಕೇಷನ್ ನಲ್ಲಿರುವ ಪೊಟೋಗಳನ್ನು ಸಹ ಆಕೆ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ಅಲ್ಲು ಸ್ನೇಹಾ ರೆಡ್ಡಿ ತನ್ನ ಇನ್ಸ್ಟಾ ಖಾತೆಯಲ್ಲಿ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ತನ್ನ ಇಬ್ಬರು ಮಕ್ಕಳೊಂದಿಗೆ ಸಮುದ್ರ ತೀರದಲ್ಲಿ ಎಂಜಾಯ್ ಮಾಡುತ್ತಾ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಜೊತೆಗೆ ತನ್ನ ಮಗ ಹಾಗೂ ಮಗಳೊಂದಿಗೆ ತುಂಬಾ ಸಂತೋಷದಿಂದ ಕಾಣಿಸಿಕೊಂಡಿದ್ದಾರೆ. ಇನ್ಸ್ಟಾ ಸ್ಟೋರಿಯಲ್ಲಿ ಮತಷ್ಟು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೊಟೋಗಳಲ್ಲಿ ಅಲ್ಲು ಅರ್ಹಾ ಹಾಗೂ ಅಲ್ಲು ಅಯಾನ್ ಆಟೋದಲ್ಲಿ ಪ್ರಯಾಣಿಸುತ್ತಿರುವ ಪೊಟೋ ಒಂದು ಮಾತ್ರ ಭಾರಿ ವೈರಲ್ ಆಗುತ್ತಿದೆ. ಆಟೋದಲ್ಲಿ ಪಯಣಿಸುತ್ತಿರುವ ಅರ್ಹಾ ತುಂಬಾನೆ ಎಕ್ಸೈಟ್ ಆಗಿದ್ದಾರೆ ಎಂದು ಹೇಳಬಹುದಾಗಿದೆ.

ಇನ್ನೂ ದೊಡ್ಡ ಸ್ಟಾರ್‍ ಕುಟುಂಬವಾದ ಅಲ್ಲು ಅರ್ಜುನ್ ಕುಟುಂವ ಹೊರಗೆ ಹೋದರೇ ದುಬಾರಿ ಕಾರುಗಳು, ವಿಮಾನಗಳಲ್ಲಿ ಪಯಣಿಸುತ್ತಾರೆ ಆದರೆ ಇದೀಗ ಅವರು ಆಟೋದಲ್ಲಿ ಪಯಣಿಸಿರುವ ಕಾರಣದಿಂದ ಅಲ್ಲು ಅರ್ಹಾ ತುಂಬಾನೆ ಖುಷಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಅಲ್ಲು ಅಭಿಮಾನಿಗಳು ಕಾಮೆಂಟ್ ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.