ಓ ಮೈ ಗಾಡ್ 2 ಸಿನೆಮಾ ಅಲ್ಲವಂತೆ, ಅದು ಸೆಕ್ಸ್ ಎಜುಕೇಷನ್ ಗೆ ಸಂಬಂಧಿಸಿದ ಸ್ಟೋರಿಯಂತೆ…..!

Follow Us :

ಬಾಲಿವುಡ್ ಸ್ಟಾರ್‍ ನಟ ಅಕ್ಷಯ್ ಕುಮಾರ್‍ ಅಭಿನಯದ ಓ ಮೈ ಗಾಡ್ 2 ಸಿನೆಮಾಗಾಗಿ ಅಭಿಮಾನಿಗಳು ತುಂಬಾನೆ ಕಾಯುತ್ತಿದ್ದಾರೆ. ಇನ್ನೂ ಈ ಸಿನೆಮಾ ರಿಲೀಸ್ ಗೆ ಸಿದ್ದವಾಗಿದ್ದು, ಸೆನ್ಸಾರ್‍ ಬೋರ್ಡ್ ಈ ಸಿನೆಮಾಗೆ A ಸರ್ಟಿಫಿಕೇಟ್ ನೀಡಿದ್ದು ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದಾರೆ. ಈ ಸಿನೆಮಾದಲ್ಲಿನ ಕೆಲವೊಂದು ದೃಶ್ಯಗಳಲ್ಲಿ ಬದಲಾವಣೆ ಮಾಡುವಂತೆ ಸಹ ಸೆನ್ಸಾರ್‍ ಬೋರ್ಡ್ ಸೂಚನೆ ನೀಡಿದೆ ಎಂದು ಹೇಳಲಾಗುತ್ತಿದೆ.  ಸದ್ಯ ದೇವರ ಸಿನೆಮಾಗೆ A ಸರ್ಟಿಫಿಕೇಟ್ ನೀಡಿದ್ದು, ಸಿನೆಮಾದಲ್ಲಿನ ಕೆಲವೊಂದು ದೃಶ್ಯಗಳನ್ನು ಕಟ್ ಮಾಡಿ ಎಂದು ಹೇಳಿದ್ದು ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದೆ.

OMG2 ಸಿನೆಮಾ ಇನ್ನೇನು ಬಿಡುಗಡೆಗೆ ಸಿದ್ದವಾಗಿದ್ದು, ಈ ಸಿನೆಮಾ ಇತ್ತೀಚಿಗಷ್ಟೆ ಸೆನ್ಸಾರ್‍ ಮುಂದೆ ಇಡಲಾಗಿದೆ. ಈ ಸಿನೆಮಾ ಸೆನ್ಸಾರ್‍ ಮಾಡಿದ ಮಂಡಳಿ ಈ ಸಿನೆಮಾಗೆ A ಸರ್ಟಿಫಿಕೇಟ್ ನೀಡಿದ್ದು, ಸಿನೆಮಾದಲ್ಲಿನ ಕೆಲವೊಂದು ದೃಶ್ಯಗಳನ್ನು ಕಟ್ ಮಾಡಲು ಹಾಗೂ ಕೆಲವೊಂದು ದೃಶ್ಯಗಳನ್ನು ಬದಲಿಸುವಂತೆ ಸಹ ಸೂಚನೆ ನೀಡಿದೆ. ಇನ್ನೂ ಈ ವಿಚಾರ ತಿಳಿದ ಅನೇಕರು ಶಾಕ್ ಆಗಿದ್ದಾರೆ. ದೇವರ ಸಿನೆಮಾಗೆ A ಸರ್ಟಿಫಿಕೇಟ್ ನೀಡಿದ್ದು ಕೆಲವೊಂದು ದೃಶ್ಯಗಳನ್ನು ತೆಗೆಯುವಂತೆ ಹಾಗೂ ಬದಲಿಸುವಂತೆ ಹೇಳಿದ್ದು ಅನೇಕರು ಶಾಕ್ ಆಗುವಂತೆ ಮಾಡಿದೆ. ಸದ್ಯ ಬಾಲಿವುಡ್ ನಲ್ಲಿ ಕೇಳಿಬರುತ್ತಿರುವ ಸುದ್ದಿಯಂತೆ ಈ ಸಿನೆಮಾದ ಸ್ಟೋರಿ ಲೈನ್ ಬಗ್ಗೆ ಸಹ ಕೊಂಚ ಮಾಹಿತಿ ಕೇಳಿಬರುತ್ತಿದೆ.

ಅದರಂತೆ ಈ ಸಿನೆಮಾದಲ್ಲಿ ಓರ್ವ ಯುವಕ ಗೇ (ಸಲಿಂಗಿ) ಆಗಿರುತ್ತಾನೆ. ಆ ವಿಚಾರ ತಿಳಿದ ಆತನ ಕಾಲೇಜಿನ ಸ್ನೇಹಿತರು ಆತನನ್ನು ಹಿಯಾಳಿಸುತ್ತಿರುತ್ತಾರೆ. ಅದರಿಂದ ಆ ಹುಡುಗು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಈ ವಿಚಾರ ಆ ಕಾಲೇಜಿನ ಪ್ರೊಫೇಸರ್‍ ಒಬ್ಬರನ್ನು ತುಂಬಾ ನೋವಿಗೆ ಗುರಿ ಮಾಡುತ್ತದೆ. ಮಕ್ಕಳಿಗೆ ಲೈಂಗಿಕ ಶಿಕ್ಷಣದ ಬಗ್ಗೆ ಅವಗಾಹನೆ ಇಲ್ಲದ ಕಾರಣ ಇದೆಲ್ಲಾ ನಡೆದಿದೆ ಎಂದು ಕಾಲೇಜಿನಲ್ಲಿ ಲೈಂಗಿಕ ಶಿಕ್ಷಣ ಶುರು ಮಾಡುತ್ತಾನೆ. ಇದರಿಂದ ಕೆಲವರಿಂದ ವಿರೋಧ ಸಹ ವ್ಯಕ್ತವಾಗುತ್ತದೆ. ಅದರಲ್ಲೂ ಮುಖ್ಯವಾಗಿ ಆ ಪಾಠಗಳು ಧರ್ಮಕ್ಕೆ ವಿರೋಧ ಎಂದು ಹೇಳಲಾಗುತ್ತದೆ. ಆ ವೇಳೆ ದೇವರು ಕೋರ್ಟ್‌ಗೆ ಬರಬೇಕಾಗುತ್ತದೆ. ಶಿವ ಬಂದು ಸಮಸ್ಯೆಯನ್ನು ಬಗೆಹರಿಸುತ್ತಾನೆ ಎಂಬುದು ಈ ಸಿನೆಮಾದ ಸ್ಟೋರಿ ಲೈನ್ ಆಗಿದೆ ಎಂದು ಬಾಲಿವುಡ್ ಅಂಗಳದಲ್ಲಿ ಸುದ್ದಿ ವೈರಲ್ ಆಗುತ್ತಿದೆ.

ಇನ್ನೂ ಈ ಬಗ್ಗೆ ಯಾವುದೇ ಅಧಿಕೃತ ಸುದ್ದಿ ಮಾತ್ರ ತಿಳಿದುಬಂದಿಲ್ಲ. ಕಳೆದ 2012 ರಲ್ಲಿ ತೆರೆಕಂಡ ಓ ಮೈ ಗಾಡ್ ಸಿನೆಮಾದ ಸೀಕ್ವೆಲ್ ಆಗಿ ಈ ಸಿನೆಮಾ ತೆರೆಗೆ ಬರಲಿದೆ. ಈ ಸಿನೆಮಾವನ್ನು ಸುಮಾರು 150 ಕೋಟಿ ಬಜೆಟ್ ನಲ್ಲಿ ನಿರ್ಮಾಣ ಮಾಡಲಾಗಿದ್ದು, ಆ.11 ರಂದು ಈ ಸಿನೆಮಾ ತೆರೆಗೆ ಬರಲಿದೆ.