ಸಂಚಲನಾತ್ಮಕ ಕಾಮೆಂಟ್ಸ್ ಮಾಡಿದ ಅಖಿಲ್, ಅಕ್ಕಿನೇನಿ ಎಂಬ ವಾರಸತ್ವ ನನಗೆ ಬೇಡ ಎಂದ ಅಖಿಲ್…..!

Follow Us :

ತೆಲುಗು ಸಿನಿರಂಗದ ಅಕ್ಕಿನೇನಿ ಕುಟುಂಬದ ಅಕ್ಕಿನೇನಿ ಅಖಿಲ್ ಏ.28 ರಂದು ಏಜೆಂಟ್ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಬಹುನಿರೀಕ್ಷೆಯನ್ನು ಹುಟ್ಟಿಸಿದ ಈ ಸಿನೆಮಾ ಬಿಡುಗಡೆಯಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಜೊತೆಗೆ ಸಿನೆಮಾದ ಪ್ರಮೋಷನ್ ಕಾರ್ಯಕ್ರಮಗಳನ್ನು ಸಹ ಜೋರಾಗಿಯೇ ಆಯೋಜನೆ ಮಾಡಲಾಗುತ್ತಿದೆ. ಜೊತೆಗೆ ಅನೇಕ ಸಂದರ್ಶನಗಳಲ್ಲೂ ಸಹ ಅಖಿಲ್ ಭಾಗಿಯಾಗುತ್ತಿದ್ದಾರೆ. ಈ ಹಾದಿಯಲ್ಲೇ ಲೇಟೆಸ್ಟ್ ಸಂದರ್ಶನದಲ್ಲಿ ಅಖಿಲ್ ಕೆಲವೊಂದು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದು, ಕಾಮೆಂಟ್ ಗಳು ಸಂಚಲನ ಕ್ರಿಯೇಟ್ ಮಾಡುತ್ತಿದೆ.

ಸಿನಿರಂಗದಲ್ಲಿ ಅನೇಕ ನಟ-ನಟಿಯರು ತಮ್ಮ ತಂದೆ ತಾಯಿ ಪರಂಪರೆಯನ್ನು ಬಳಸಿಕೊಂಡು ಸಿನಿರಂಗದಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಇದಕ್ಕೆ ಅನೇಕರು ವಿಮರ್ಶೆಗಳನ್ನು ಸಹ ಮಾಡುತ್ತಿರುತ್ತಾರೆ. ಇದೀಗ ಏಜೆಂಟ್ ಸಿನೆಮಾದ ಪ್ರಮೋಷನ್ ನಿಮಿತ್ತ ನಟ ಅಖಿಲ್ ಕೆಲವೊಂದು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಅಕ್ಕಿನೇನಿ ವಾರಸತ್ವದ ಬಗ್ಗೆ ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ನಾನು ಅಕ್ಕಿನೇನಿ ವಾರಸುದಾರನಾಗಿ ಇರುವ ಬದಲು ಅಖಿಲ್ ಆಗಿಯೇ ಇರುತ್ತೇನೆ. ಅದೇ ನನ್ನ ಇಷ್ಟವಾಗಿದೆ. ಪ್ರೇಕ್ಷಕರು ಸಹ ನನ್ನನ್ನು ಅಕ್ಕಿನೇನಿ ವಾರಸುದಾರನಾಗಿ ನೋಡದೇ ಅಖಿಲ್ ಆಗಿಯೇ ನೋಡಿದರೇ ನನಗೆ ತುಂಬಾ ಸಂತೋಷ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.

ಇನ್ನೂ ಅಖಿಲ್ ತನ್ನ ಸ್ವಂತ ಪ್ರತಿಭೆಯಿಂದ ಸ್ಟಾರ್‍ ಆಗಲು ಆಲೋಚನೆಯಲ್ಲಿದ್ದಾರೆ ಎಂದು ಆತ ನೀಡಿದ ಕಾಮೆಂಟ್ ಗಳ ಮೂಲಕ ತಿಳಿಯಬಹುದಾಗಿದೆ. ಒಬ್ಬ ಮಗನಾಗಿ ತಂದೆಯ ಬಳಿ ಹೋಗಬಹುದು, ಅದು ಇದು ಕೇಳಬಹುದು ಆದರೆ ಒರ್ವ ನಟನಾಗಿ ನಾನೇ ಬೆಳೆಯಬೇಕು, ನಾನೇ ಕಲಿಯಬೇಕು, ನಾನೂ ಸಹ ನಿರ್ಣಯಗಳನ್ನು ತೆಗೆದುಕೊಂಡು ಜವಾಬ್ದಾರಿಗಳನ್ನು ತೆಗೆದುಕೊಳ್ಳಬೇಕು ಎಂದುಕೊಳ್ಳುತ್ತಿದ್ದೇನೆ ಎಂದು ಅಖಿಲ್ ಹೇಳಿದ್ದಾರೆ. ಇನ್ನೂ ಏಜೆಂಟ್ ಸಿನೆಮಾ ಸಹ ನನ್ನ ಸ್ವಂತ ನಿರ್ಣಯವಾಗಿದೆ. ಅದರಲ್ಲಿ ತನ್ನ ತಂದೆ ನಾಗರ್ಜುನ ರವರ ಪ್ರಭಾವ ಕೊಂಚ ಸಹ ಇಲ್ಲ. ಈ ಸಿನೆಮಾ ಸಕ್ಸಸ್ ಆದರೂ, ಫೈಲ್ಯೂರ್‍ ಆದರೂ ಸಹ ನನ್ನದೇ ಸಂಪೂರ್ಣ ಜವಾಬ್ದಾರಿ ಎಂದು ಹೇಳಿದ್ದಾರೆ. ಇನ್ನೂ ಈ ಸಿನೆಮಾ ಸಕ್ಸಸ್ ಆಗುತ್ತಾ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ ಎಂದು ಕಾಮೆಂಟ್ಸ್ ಮಾಡಿದ್ದಾರೆ.

ಇನ್ನೂ ಅಖಿಲ್ ನೀಡಿರುವಂತಹ ಈ ಕಾಮೆಂಟ್ ಗಳು ಟಾಲಿವುಡ್ ಸಿನಿರಂಗದಲ್ಲಿ ಸಂಚಲನವನ್ನು ಸೃಷ್ಟಿ ಮಾಡಿದೆ. ಅಖಿಲ್ ಇಂತಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಅಭಿಮಾನಿಗಳು ಸಹ ಶಾಕ್ ಆಗುತ್ತಿದ್ದಾರೆ. ಇನ್ನೂ ಅಖಿಲ್ ಹೇಳಿಕೆಗಳು ಸಕರಾತ್ಮಕವಾಗಿ ಹೋಗುತ್ತಾ ಅಥವಾ ನಕರಾತ್ಮಕವಾಗಿ ಹೋಗುತ್ತಾ ಎಂಬುದೇ ಇದೀಗ ಯಕ್ಷ ಪ್ರಶ್ನೆಯಾಗಿದೆ. ಇನ್ನೂ ಈ ಸಿನೆಮಾವನ್ನು ಮೊದಲಿಗೆ ಪ್ಯಾನ್ ಇಂಡಿಯಾ ಸಿನೆಮಾಗಾಗಿ ತೆರೆಗೆ ತರಲು ಪ್ಲಾನ್ ಮಾಡಿತ್ತು ಎನ್ನಲಾಗಿದೆ. ಆದರೆ ಇದೀಗ ಕೆಲವೊಂದು ತಾಂತ್ರಿಕ ಕಾರಣಗಳಿಂದ ಕೇವಲ ತೆಲುಗಿನಲ್ಲಿ ಮಾತ್ರ ಈ ಸಿನೆಮಾ ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿದೆ.