5 ವರ್ಷಗಳ ಬಳಿಕ ಮತ್ತೆ ಜೋಡಿಯಾಗಿ ನಟಿಸಲಿದ್ದಾರಂತೆ ಪ್ರಭಾಸ್ ಅಂಡ್ ಅನುಷ್ಕಾ, ವೈರಲ್ ಆದ ಕ್ರೇಜಿ ನ್ಯೂಸ್…..!

ಸಿನಿರಂಗದಲ್ಲಿ ಕೆಲವೊಂದು ಜೋಡಿಗಳು ನಟಿಸಿದರೇ ಸಿನೆಮಾ ಒಳ್ಳೆಯ ಹಿಟ್ ಪಡೆದುಕೊಳ್ಳುತ್ತದೆ. ಈ ಸಾಲಿಗೆ ಪ್ರಭಾಸ್ ಹಾಗೂ ಅನುಷ್ಕಾ ಜೋಡಿ ಸಹ ಸೇರುತ್ತದೆ. ಈ ಜೋಡಿ ಸಿನೆಮಾಗಳಲ್ಲಿ ಬೆಸ್ಟ್ ಜೋಡಿಯೆಂದೆ ಖ್ಯಾತಿ ಪಡೆದುಕೊಂಡಿದೆ. ಈ ಜೋಡಿ…

ಸಿನಿರಂಗದಲ್ಲಿ ಕೆಲವೊಂದು ಜೋಡಿಗಳು ನಟಿಸಿದರೇ ಸಿನೆಮಾ ಒಳ್ಳೆಯ ಹಿಟ್ ಪಡೆದುಕೊಳ್ಳುತ್ತದೆ. ಈ ಸಾಲಿಗೆ ಪ್ರಭಾಸ್ ಹಾಗೂ ಅನುಷ್ಕಾ ಜೋಡಿ ಸಹ ಸೇರುತ್ತದೆ. ಈ ಜೋಡಿ ಸಿನೆಮಾಗಳಲ್ಲಿ ಬೆಸ್ಟ್ ಜೋಡಿಯೆಂದೆ ಖ್ಯಾತಿ ಪಡೆದುಕೊಂಡಿದೆ. ಈ ಜೋಡಿ ಸಿನೆಮಾಗಳಲ್ಲಿ ನಟಿಸಿ ಸುಮಾರು 5 ವರ್ಷ ಕಳೆದಿದೆ. ಇದೀಗ ಮತ್ತೊಮ್ಮೆ ಈ ಜೋಡಿ ತೆರೆಯ ಮೇಲೆ ಅಬ್ಬರಿಸಲಿದ್ದಾರಂತೆ. ಸದ್ಯ ಈ ಸುದ್ದಿ ಸಿನಿವಲಯದಲ್ಲಿ ಹರಿದಾಡುತ್ತಿದೆ.

ರೆಬೆಲ್ ಸ್ಟಾರ್‍ ಪ್ರಭಾಸ್ ಹಾಗೂ ಅನುಷ್ಕಾ ಜೋಡಿಗೆ ಒಳ್ಳೆಯ ಕ್ರೇಜ್ ಇದೆ. ಇವರಿಬ್ಬರ ಕಾಂಬಿನೇಷನ್ ನಲ್ಲಿ ತೆರೆಗೆ ಬಂದ ಮಿರ್ಚಿ, ಬಾಹುಬಲಿ-1 ಹಾಗೂ ಬಾಹುಬಲಿ-2 ಸಿನೆಮಾಗಳು ಭಾರಿ ಸಕ್ಸಸ್ ಕಂಡಿವೆ. ಇದೇ ಸಮಯದಲ್ಲಿ ಅವರಿಬ್ಬರ ನಡುವೆ ಅಫೈರ್‍ ನಡೆಯುತ್ತಿದೆ ಎಂಬ ರೂಮರ್‍ ಗಳು ಸಹ ಹುಟ್ಟಿಕೊಂಡವು. ಇಬ್ಬರೂ ಲವ್ ನಲ್ಲಿದ್ದು ಶೀಘ್ರದಲ್ಲೆ ಮದುವೆ ಸಹ ಆಗಲಿದ್ದಾರೆ ಎಂದು ಸುದ್ದಿಗಳು ಕೇಳಿಬಂದವು.  ಇದರ ಜೊತೆಗೆ ಅವರಿಬ್ಬರೂ ಅಮೇರಿಕಾದಲ್ಲಿ ಮನೆಯೊಂದನ್ನು ಸಹ ಖರೀದಿಸಿದ್ದಾರೆ ಎಂಬ ಟಾಕ್ ಸಹ ಕೇಳಿಬಂತು. ಅದೆಲ್ಲವೂ ರೂಮರ್‍ ಗಳು ಎಂದು ತಿಳಿದ ಬಳಿಕವೂ ಸಹ ಈ ಜೋಡಿಯ ಬಗ್ಗೆ ಆಗಾಗ ಕೆಲವೊಂದು ಅಂತಹ ಸುದ್ದಿಗಳು ಕೇಳಿಬರುತ್ತಲೇ ಇದೆ.

ಇನ್ನೂ ಅನುಷ್ಕಾ ಅಂಡ್ ಪ್ರಭಾಸ್ ಇಬ್ಬರ ಕಾಂಬಿನೇಷನ್ ತುಂಬಾ ಚೆನ್ನಾಗಿರುತ್ತದೆ. ಅವರಿಬ್ಬರ ಕೆಮಿಸ್ಟ್ರಿ ಸಹ ಚೆನ್ನಾಗಿ ವರ್ಕೌಟ್ ಆಗುತ್ತದೆ ಎಂದು ಹೇಳಲಾಗುತ್ತದೆ. ಶೀಘ್ರದಲ್ಲೇ ಈ ಜೋಡಿಯ ಸಿನೆಮಾ ಒಂದು ಬರಲಿದೆ. ಸುಮಾರು ಐದು ವರ್ಷಗಳ ಬಳಿಕ ಪ್ರಭಾಸ್ ಹಾಗೂ ಅನುಷ್ಕಾ ಸಿನೆಮಾದಲ್ಲಿ ನಟಿಸುತ್ತಿದ್ದಾರಂತೆ. ಈ ಸಿನೆಮಾ ನಿರ್ದೇಶನ ಮಾಡಲಿರುವುದು ಬ್ಯಾಕ್ ಟು ಬ್ಯಾಕ್ ಫ್ಲಾಪ್ ಗಳನ್ನು ಪಡೆದುಕೊಂಡ ಕ್ರಿಷ್ ಅಂತೆ. ಸದ್ಯ ಕ್ರಿಷ್ ಪವನ್ ಕಲ್ಯಾಣ್ ಜೊತೆಗೆ ಹರಿಹರ ವೀರಮಲ್ಲು ಎಂಬ ಪ್ಯಾನ್ ಇಂಡಿಯಾ ಸಿನೆಮಾ ಮಾಡುತ್ತಿದ್ದಾರೆ. ಈ ನಡುವೆ ಪ್ರಭಾಸ್ ಜೊತೆ ಸಿನೆಮಾ ಮಾಡಲು ಇಚ್ಛೆಯನ್ನು ವ್ಯಕ್ತಪಡಿಸಿದ್ದಾರಂತೆ. ಅದಕ್ಕೆ ಪ್ರಭಾಸ್ ಸಹ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನೂ ಅನುಷ್ಕಾ ಸಹ ಬಾಹುಬಲಿ-2 ಬಳಿಕ ಬಲವಾದ ಪಾತ್ರ ಇರುವಂತಹ ಸಿನೆಮಾಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ಅನುಷ್ಕಾ ಯುವಿ ಕ್ರಿಯೇಷನ್ ನಲ್ಲಿ ಒಂದು ಸಿನೆಮಾ ಮಾಡುತ್ತಿದ್ದಾರೆ. ಇದೀಗ ಕೇಳಿಬರುತ್ತಿರುವ ಸುದ್ದಿಯಂತೆ ಕ್ರಿಷ್ ನಿರ್ದೇಶನದಲ್ಲಿ ಅನುಷ್ಕಾ ಪ್ರಭಾಸ್ ಜೋಡಿ ನಟಿಸಲಿದೆಯಂತೆ. ಬಾಹುಬಲಿ ನಿರ್ಮಾಪಕರಾದ ಶೋಭು ಯಾರ್ಲಗಡ್ಡ ಹಾಗೂ ಪ್ರಸಾದ್ ದೇವಿನೇನಿ ರವರಿಗೆ ಕ್ರಿಷ್ ಕಥೆಯನ್ನು ಹೇಳಿದ್ದು ಅವರೂ ಸಹ ಮುಂದೆ ಬಂದಿದ್ದಾರಂತೆ. ಇನ್ನೂ ಪ್ರಭಾಸ್ ಸಹ ಒಪ್ಪಿಗೆ ನೀಡಿದ್ದಾರಂತೆ. ಸದ್ಯ ಈ ಸುದ್ದಿ ಸೋಷಿಯಲ್ ಮಿಡಿಯಾ ಸೇರಿದಂತೆ ಸಿನಿವಲಯದಲ್ಲಿ ಜೋರಾಗಿಯೇ ಕೇಳಿಬರುತ್ತಿದೆ. ಒಂದು ವೇಳೆ ಇದು ನಿಜವೇ ಆದರೆ ಪ್ರಭಾಸ್ ಅನುಷ್ಕಾ ಜೋಡಿ ಮತ್ತೊಮ್ಮೆ ಮೋಡಿ ಮಾಡಲಿದೆ ಎಂದು ಹೇಳಲಾಗುತ್ತಿದೆ.