Film News

ನನ್ನ ವಿಡಿಯೋ ತೆಗೆದು ವೈರಲ್ ಮಾಡಿದ್ದ, ಯಾಮಿ ಗೌತಮ್ ಹಂಚಿಕೊಂಡ್ರು ಕಹಿ ಘಟನೆ…!

ಬಾಲಿವುಡ್ ನಲ್ಲಿ ಸಾಲು ಸಾಲು ಸಿನೆಮಾಗಳ ಮೂಲಕ ಕ್ರೇಜ್ ಪಡೆದುಕೊಳ್ಳುತ್ತಿರುವ ನಟಿ ಯಾಮಿ ಗುಪ್ತ ಕಡಿಮೆ ಸಮಯದಲ್ಲೇ ಅಪಾರ ಪ್ರಮಾಣದ ಅಭಿಮಾನಿ ಬಳಗವನ್ನು ಗಿಟ್ಟಿಸಿಕೊಂಡಿದ್ದಾರೆ. ಫೇರ್‌ ಅಂಡ್ ಲವ್ಲಿ ಜಾಹಿರಾತಿನ ಮೂಲಕ ಫೇಮಸ್ ಆದ ಈಕೆ ನಟಿಯಾಗಿ ಕ್ರೇಜ್ ಪಡೆದುಕೊಳ್ಳುತ್ತಿದ್ದಾರೆ. ಇದೀಗ ಆಕೆಯ ಜೀವನದಲ್ಲಿ ನಡೆದಂತಹ ಕಹಿ ಘಟನೆಯೊಂದರ ಬಗ್ಗೆ ಹೇಳಿದ್ದಾರೆ. ಅಭಿಮಾನಿಯೊಬ್ಬ ಆಕೆಯೊಂದಿಗೆ ಅಸಭ್ಯಕರವಾಗಿ ನಡೆದುಕೊಂಡಿದ್ದಾಗಿ ಸಂದರ್ಶನವೊಂದರಲ್ಲಿ ವಿಚಾರ ಹಂಚಿಕೊಂಡಿದ್ದಾರೆ.

ನಟಿ ಯಾಮಿ ಗೌತಮ್ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇತ್ತೀಚಿಗೆ ನಡೆದಂತಹ ಒಂದು ಕಹಿ ಘಟನೆಯ ಬಗ್ಗೆ ವಿವರಣೆ ನೀಡಿದ್ದಾರೆ. ಆಕೆ ಮಾತನಾಡುತ್ತಾ ನಾನು ಒಮ್ಮೆ ಹಿಮಾಚಲ್ ಪ್ರದೇಶದಲ್ಲಿರುವ ನಮ್ಮ ಊರಿಗೆ ಹೋಗಿದ್ದೆ. ಅಲ್ಲಿ ಒಬ್ಬ ಹುಡುಗ ಬಂದು ನನ್ನ ಸ್ಟಾಫ್ ಬಳಿ ಅನುಮತಿ ಪಡೆದುಕೊಂಡು ಪೊಟೋ ತೆಗೆದುಕೋಳ್ಳಲು ಬಂದಿದ್ದ.  ಆ ಸಮಯದಲ್ಲಿ ನಾನು ಸಹ ಆತನೊಂದಿಗೆ ಮಾತನಾಡುತ್ತಾ ಪೊಟೋಗೆ ಪೋಸ್ ಕೊಟ್ಟೆ. ಅದೊಂದು ಚಿಕ್ಕ ಪಟ್ಟಣವಾದ್ದರಿಂದ ಜನರು ಆ ರೀತಿ ಬರುವುದು, ಮಾತನಾಡುವುದು ಸಾಮಾನ್ಯ. ಅದೂ ನನಗೆ ಸಂತೋಷವಾಗಿತ್ತು. ಆದರೆ ಆತ ಮಾಡಿದ ಕೆಲಸವನ್ನು ನಾನು ಗಮನಿಸಿಲ್ಲ. ಪೊಟೋಗಾಗಿ ಬಂದ ಆತ ನನ್ನ ವಿಡಿಯೋ ತೆಗೆದುಕೊಂಡಿದ್ದಾನೆ. ಅದು ಕೆಟ್ಟ ವಿಡಿಯೋ. ಅದು ಸಾಲದು ಎಂಬಂತೆ ಆ ವಿಡಿಯೋವನ್ನು ತನ್ನ ಸೋಷಿಯಲ್ ಮಿಡಿಯಾದ ಖಾತೆಯಲ್ಲಿ ಶೇರ್‍ ಮಾಡಿದ್ದಾನೆ. ವಿಡಿಯೋ ಹಂಚಿಕೊಂಡ ಕಡಿಮೆ ಸಮಯದಲ್ಲೇ ಸಖತ್ ವೈರಲ್ ಸಹ ಆಗಿತ್ತು.

ಆ ವಿಡಿಯೋ ವೈರಲ್ ಆಗಿ ಹೆಚ್ಚು ವ್ಯೂವ್ಸ್ ಬಂದ ಕಾರಣದಿಂದ ಆತ ಅದನ್ನು ಸೆಲೆಬ್ರೆಷನ್ ಸಹ ಮಾಡಿಕೊಂಡಿದ್ದಾನೆ. ಆ ವಿಡಿಯೋ ನೋಡಿದ ಬಳಿಕ ಅನೇಕರು ಮೊಬೈಲ್, ಕ್ಯಾಮೆರಾ ಹಿಡಿದುಕೊಂಡು ನಮ್ಮ ಮನೆಯ ಬಳಿ ಬಂದರು. ನಾನು ಇದೆಲ್ಲವನ್ನೂ ನೋಡಿ ಶಾಕ್ ಆಗಿದ್ದೆ ಎಂದು ಕಹಿ ಘಟನೆಯನ್ನು ಹಂಚಿಕೊಂಡಿದ್ದಾರೆ. ಇನ್ನೂ ಪ್ರತಿಯೊಬ್ಬರಿಗೂ ಖಾಸಗಿ ಜೀವನ ಎಂಬುದು ಇದ್ದೆ ಇರುತ್ತದೆ. ನಮ್ಮ ವೈಯುಕ್ತಿಕ ಜೀವನದಲ್ಲಿ ಪ್ರವೈಸಿ ಕಡ್ಡಾಯವಾಗಿ ಇರಬೇಕು. ಆ ವಿಡಿಯೋ ಕಾರಣದಿಂದ ನಾನು ತುಂಬಾ ಮುಜುಗರಕ್ಕೆ ಗುರಿಯಾಗಿದ್ದೆ ಎಂದು ಯಾಮಿ ಗೌತಮ್ ಆ ಕಹಿ ಘಟನೆಯ ಬಗ್ಗೆ ವಿವರಿಸಿದ್ದಾರೆ.

ಇನ್ನೂ ನಟಿ ಯಾಮ ಗೌತಮ್ ನುವ್ವಿಲಾ ಎಂಬ ಸಿನೆಮಾದ ಮೂಲಕ ತೆಲುಗು ಪ್ರೇಕ್ಷಕರನ್ನು ರಂಜಿಸಿದ್ದರು. ಬಳಿಕ ಗೌರವಂ, ಯುದ್ದಂ, ಕೊರಿಯರ್‍ ಬಾಯ್ ಕಲ್ಯಾಣ್ ಸಿನೆಮಾಗಳಲ್ಲಿ ನಟಿಸಿದ್ದರು. ಈ ಸಿನೆಮಾಗಳು ಅಂದುಕೊಂಡಷ್ಟು ಸಕ್ಸಸ್ ಆಗದ ಕಾರಣ ಆಕೆ ಟಾಲಿವುಡ್ ಬಿಟ್ಟು ಬಾಲಿವುಡ್ ನತ್ತ ಹಾರಿದರು. ಬಾಲಿವುಡ್ ನಲ್ಲಿ ಬ್ಯುಸಿಯಾಗಿ ಕೆರಿಯರ್‍ ಸಾಗಿಸುತ್ತಿದ್ದಾರೆ.  ಇನ್ನೂ ಕಳೆದ 2021 ರಲ್ಲಿ ನಿರ್ದೇಶಕ ಆದಿತ್ಯಧರ್‍ ಎಂಬಾತನನ್ನು ಯಾಮಿ ಗೌತಮ್ ಮದುವೆಯಾದರು.

Most Popular

To Top