ಯಂಗ್ ನಟನೊಂದಿಗೆ ಲವ್ ನಲ್ಲಿದ್ದಾರಂತೆ ಯಂಗ್ ಬ್ಯೂಟಿ ವರ್ಷಾ ಬೊಲ್ಲಮ್ಮ, ನಟಿಯ ಕ್ಲಾರಿಟಿ ಏನು ಗೊತ್ತಾ?

ತಮಿಳಿನ ಶತುರನ್ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ವರ್ಷ ಬೊಲ್ಲಮ್ಮ ಬಹುಭಾಷಾ ನಟಿಯಾಗಿ ಫೇಮ್ ಪಡೆದುಕೊಂಡಿದ್ದಾರೆ. ತಮಿಳಿನ ಬಳಿಕ ಮಲಯಾಳಂ, ತೆಲುಗು ಸಿನೆಮಾಗಳಲ್ಲೂ ಸಹ ಅವಕಾಶಗಳನ್ನು ಗಿಟ್ಟಿಸಿಕೊಂಡರು. ಇತ್ತೀಚಿಗಷ್ಟೆ ಸ್ವಾತಿಮುತ್ಯಂ ಎಂಬ ತೆಲುಗು ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಇತ್ತೀಚಿಗೆ ಆಕೆಯ ವೈಯುಕ್ತಿಕ ವಿಚಾರದ ಬಗ್ಗೆ ಕೆಲವೊಂದು ಸುದ್ದಿಗಳು ಕೇಳಿಬಂದಿತ್ತು. ಇದೀಗ ಆಕೆ ಆ ನಟನೊಂದಿಗೆ ರಿಲೇಷನ್ ಶಿಪ್ ನಲ್ಲಿದ್ದಾರೆ ಎಂಬ ಸುದ್ದಿಯೊಂದು ಕೇಳಿಬರುತ್ತಿದ್ದು, ಅದಕ್ಕೆ ವರ್ಷಾ ಬೊಲ್ಲಮ್ಮ ಸಹ ಕ್ಲಾರಿಟಿ ಕೊಟ್ಟಿದ್ದಾರೆ. ಅಷ್ಟಕ್ಕೂ ಆಕೆ ಹೇಳಿದ್ದು ಏನು ಎಂಬ ವಿಚಾರಕ್ಕೆ ಬಂದರೇ,

ಬೆಂಗಳೂರು ಮೂಲದ ನಟಿ ವರ್ಷಾ ಬೊಲ್ಲಮ್ಮ ಸದ್ಯ ತೆಲುಗಿನಲ್ಲಿ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಬ್ಯುಸಿಯಾಗಿದ್ದಾರೆ. ಸದ್ಯ ಊರು ಪೇರು ಭೈರವಕೋನ ಎಂಬ ಸಿನೆಮಾದ ಮೂಲಕ ಶೀಘ್ರದಲ್ಲೇ ಸಿನಿರಸಿಕರನ್ನು ರಂಜಿಸಲಿದ್ದಾರೆ. ಈ ಸಿನೆಮಾದ ಪ್ರಮೋಷನ್ ಕೆಲಸಗಳೂ ಸಹ ಭರದಿಂದ ಸಾಗುತ್ತಿದ್ದು, ಈ ಸಿನೆಮಾದಲ್ಲಿ ಆಕೆ ಟ್ರೈಬಲ್ ಲೇಡಿ ಪಾತ್ರವನ್ನು ಪೋಷಣೆ ಮಾಡಿದ್ದಾರೆ. ಈ ಸಂಬಂಧ ಆಕೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಕೆಲವೊಂದು ಇಂಟ್ರಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಸಿನೆಮಾದಲ್ಲಿ ನನ್ನ ಪಾತ್ರದ ಹೆಸರು ಭೂಮಿ. ಇಡೀ ಊರಿನಲ್ಲಿ ನಾನೊಬ್ಬಳೇ ವಿದ್ಯಾವಂತೆ. ಸುಂದರವಾಗಿ, ಅಮಾಯಕತೆಯಿಂದ ಕಾಣಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಇನ್ನೂ ಇದೇ ವೇದಿಕೆಯ ಮೇಲೆ ಆಕೆ ತನ್ನ ಬಗ್ಗೆ ಕೇಳಿಬರುತ್ತಿರುವಂತಹ ರೂಮರ್‍ ಗಳ ಬಗ್ಗೆ ಸಹ ರಿಯಾಕ್ಟ್ ಆಗಿದ್ದಾರೆ. ನಟ ಬೆಲ್ಲಂಕೊಂಡ ಗಣೇಶ್ ರನ್ನು ನಾನು ಪ್ರೀತಿಸುತ್ತಿರುವುದಾಗಿ ಸುದ್ದಿಗಳು ಕೇಳಿಬಂತು. ಈ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಬೆಲ್ಲಂಕೊಂಡ ಗಣೇಶ್ ರನ್ನು ನಾನು ಪ್ರೀತಿಸುತ್ತಿಲ್ಲ ಎಂದು ಹೇಳಿದ್ದಾರೆ. ಇನ್ನೂ ಬೆಲ್ಲಂಕೊಂಡ ಗಣೇಶ್ ಹಾಗೂ ವರ್ಷಾ ಬೊಲ್ಲಮ್ಮ ಕಾಂಬಿನೇಷನ್ ನಲ್ಲಿ ಸ್ವಾತಿಮುತ್ಯಂ ಎಂಬ ಸಿನೆಮಾ ಬಂದಿತ್ತು. ಈ ಸಿನೆಮಾದ ಸಮಯದಲ್ಲೇ ಈ ಜೋಡಿ ಪ್ರೀತಿಗೆ ಬಿದ್ದಿದ್ದಾರೆ ಎಂಬ ರೂಮರ್‍ ವೈರಲ್ ಆಗಿತ್ತು. ಸದ್ಯ ವರ್ಷಾ ಬೊಲ್ಲಮ್ಮ ಊರು ಪೇರು ಭೈರವಕೋನ ಎಂಬ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾ ಫೆ.16 ರಂದು ತೆರೆಕಾಣಲಿದೆ. ಈ ಸಿನೆಮಾದಲ್ಲಿ ಸಂದೀಪ್ ಕಿಷನ್ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ.