ಅಂತೂ ಇಂತೂ ನಿಜ ಒಪ್ಪಿಕೊಂಡ ತಮನ್ನಾ, ನಾನು ಆತನೊಂದಿಗೆ ಡೇಟಿಂಗ್ ನಲ್ಲಿದ್ದೀನಿ ಎಂದ ಮಿಲ್ಕಿ ಬ್ಯೂಟಿ…..!

ಪ್ರಸಕ್ತ ವರ್ಷದ ಆರಂಭದಲ್ಲಿ ಸೌತ್ ಸಿನಿರಂಗದ ಮಿಲ್ಕಿ ಬ್ಯೂಟಿ ಎಂದೇ ಖ್ಯಾತಿ ಪಡೆದುಕೊಂಡ ತಮನ್ನಾ ಭಾಟಿಯಾ ಹಾಗೂ ಬಾಲಿವುಡ್ ನಟ ವಿಜಯ್ ವರ್ಮಾ ರವರ ಲವ್ ಶುರುವಾಗಿದೆ ಎಂಬ ಸುದ್ದಿಯೊಂದು ಶುರುವಾಯ್ತು. ಅವರಿಬ್ಬರು ಹೊಸವರ್ಷದ ಸಂಭ್ರಮದ ವೇಳೆ ಲಿಪ್ ಲಾಕ್ ಮಾಡಿಕೊಂಡ ಕೆಲವೊಂದು ಪೊಟೊಗಳು ವಿಡಿಯೋಗಳು ಹೊರಬಂದವು. ಬಳಿಕ ಅವರಿಬ್ಬರ ಲವ್ ಬಗ್ಗೆ ಅನೇಕ ರೂಮರ್‍ ಗಳು ಹುಟ್ಟಿಕೊಂಡವು. ಆದರೆ ಈ ಸುದ್ದಿಗಳನ್ನು ತಮನ್ನಾ ಖಂಡಿಸಿ ಎಲ್ಲವೂ ಕೇವಲ ರೂಮರ್‍ ಗಳು ಮಾತ್ರ ಎಂದು ಹೇಳಿದ್ದರು. ಇದೀಗ ತಮನ್ನಾ ನಿಜಾಂಶವನ್ನು ಹೊರಹಾಕಿದ್ದಾರೆ. ಆತನೊಂದಿಗೆ ಡೇಟಿಂಗ್ ನಡೆಸುತ್ತಿರುವುದು ನಿಜ ಎಂದು ಹೇಳಿದ್ದಾರೆ.

ಸುಮಾರು ತಿಂಗಳುಗಳಿಂದ ತಮನ್ನಾ ಹಾಗೂ ವಿಜಯ್ ವರ್ಮಾ ಡೇಟೀಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿಗಳು ಕೇಳಿಬರುತ್ತಲೇ ಇದೆ. ಆದರೆ ತಮನ್ನಾ ಮಾತ್ರ ಎಲ್ಲವೂ ಸುಳ್ಳು ಎಂದು ಹೇಳುತ್ತಿದ್ದರು. ಆದರೆ ಅವರಿಬ್ಬರೂ ಆಗಾಗ ಭೇಟಿಯಾಗುತ್ತಿದ್ದು, ಡಿನ್ನರ್‍ ಗೆ ಹೋಗುತ್ತಿದ್ದಿದ್ದು ಅವರ ಡೇಟಿಂಗ್ ರೂಮರ್‍ ಗೆ ಮತಷ್ಟು ಬಲ ತಂದಿತ್ತು. ಆದರೆ ಈ ಬಗ್ಗೆ ತಮನ್ನಾ ರವರಿಗೆ ಅನೇಕ ಬಾರಿ ಕೇಳಿದರೂ ಆಕೆ ನಾನು ಸಿಂಗಲ್, ಎಲ್ಲವೂ ಸುಳ್ಳು ಎಂದು ಹೇಳುತ್ತಿದ್ದರು. ಆದರೆ ಇದೀಗ ಅಂತೂ ಇಂತೂ ತಮನ್ನಾ ಸತ್ಯಾಂಶವನ್ನು ಒಪ್ಪಿಕೊಂಡಿದ್ದಾರೆ. ಹೌದು ವಿಜಯ್ ವರ್ಮಾ ಜೊತೆಗೆ ನಾನು ರಿಲೇಷನ್ ಶಿಪ್ ನಿಜ ಎಂದು ಹೇಳಿದ್ದಾರೆ. ಆತನೊಂದಿಗೆ ಲಸ್ಟ್ ಸ್ಟೋರಿಸ್ 2 ಶೂಟಿಂಗ್ ವೇಳೆ ನಮ್ಮ ಲವ್ ಸ್ಟೋರಿ ಶುರುವಾಯ್ತು. ಆಕೆ ನೀಡಿದ ಹೇಳಿಕೆಗಳು ಸಖತ್ ವೈರಲ್ ಆಗುತ್ತಿವೆ.

ನಟಿ ತಮನ್ನಾ ವಿಜಯ್ ವರ್ಮಾ ಜೊತೆಗಿನ ರಿಲೇಷನ್ ಶಿಪ್ ಬಗ್ಗೆ ಮಾತನಾಡಿದ್ದಾರೆ. ನಾನು ವಿಜಯ್ ಕೇವಲ ಸಹ ನಟ ಎಂದು ಇಷ್ಟಪಡಲಿಲ್ಲ.  ನಾನು ಅನೇಕ ಹಿರೋಗಳ ಜೊತೆಗೆ ಕೆಲಸ ಮಾಡಿದ್ದೇನೆ. ವಿಜಯ್ ವರ್ಮಾ ತುಂಬಾ ವಿಭಿನ್ನವಾದ ನಟ. ನನಗೆ ರಕ್ಷಣೆಗಾಗಿ ನಿಲ್ಲುತ್ತಾನೆ ಎಂಬ ನಂಬಿಕೆ ಇದೆ. ನಮ್ಮದು ಆರ್ಗಾನಿಕ್ ಬಂಧ. ನನಗಾಗಿ ಒಂದು ಸುಂದರವಾದ ಪ್ರಪಂಚ ಸೃಷ್ಟಿಸಿಕೊಂಡಿದೆ. ಅದರಲ್ಲಿ ವಿಜಯ್ ವರ್ಮಾ ಬಂದ. ಆತನಿರುವ ಪ್ರದೇಶವೇ ನನಗೆ ಇಷ್ಟವಾದ ಪ್ರದೇಶ ಎಂದು ಹೇಳಿದ್ದಾರೆ. ಆ ಮೂಲಕ ತಮ್ಮಿಬ್ಬರ ಡೇಟಿಂಗ್ ಬಗ್ಗೆ ಅಧಿಕೃತವಾಗಿ ತಮ್ಮನ್ನಾ ಹೇಳಿದ್ದಾರೆ. ಸದ್ಯ ತಮನ್ನಾ ನೀಡಿರುವ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ಇನ್ನೂ ತಮನ್ನಾ ಅಭಿನಯದ ಲಸ್ಟ್ ಸ್ಟೋರೀಸ್-2 ಜೂನ್ 29 ರಿಂದ ಸ್ಟ್ರೀಮಿಂಗ್ ಆಗಲಿದೆ. ಈ ಸಿರೀಸ್ ನಲ್ಲಿ ವಿಜಯ್ ಹಾಗೂ ತಮನ್ನಾ ನೆಕ್ಸ್ಟ್ ಲೆವೆಲ್ ಎಂಬಂತೆ ರೊಮ್ಯಾನ್ಸ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ತಮನ್ನಾ ತೆಲುಗಿನಲ್ಲಿ ಬೋಳಾ ಶಂಕರ್‍, ತಮಿಳಿನಲ್ಲಿ ಜೈಲರ್‍ ಸಿನೆಮಾದಲ್ಲಿ ನಟಿಸುತ್ತಿದ್ದಾರೆ.