Film News

ಪಲ್ಸರ್ ಬೈಕ್ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ ನಟಿ ಸುರೇಖಾ ವಾಣಿ ಮಗಳು ಸುಪ್ರಿತಾ, ಸಖತ್ ಟ್ರೋಲ್…!

ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ಸಹನಟಿಯರಲ್ಲಿ ಸುರೇಖಾವಾಣಿ ಸಹ ಒಬ್ಬರಾಗಿದ್ದಾರೆ. ಅದರಲ್ಲೂ ಸುರೇಖಾವಾಣಿ ಹಾಗೂ ಆಕೆಯ ಪುತ್ರಿ ಸುಪ್ರಿತಾ ಮಾಡುವ ರೀಲ್ಸ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿರುತ್ತವೆ. ತಾಯಿ ಮಗಳು ಪೈಪೋಟಿಗೆ ಬಿದ್ದಂತೆ ಹಾಟ್ ಟ್ರೀಟ್ ನೀಡುತ್ತಿರುತ್ತಾರೆ. ಇದೀಗ ಆಕೆಯ ವಿಡಿಯೋ ಒಂದು ಸಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಜೊತೆಗೆ ಈ ವಿಡಿಯೋ ಕಾರಣದಿಂದ ಸುಪ್ರಿತಾ ಸಖತ್ ಟ್ರೋಲ್ ಸಹ ಆಗಿದ್ದಾರೆ.

ತೆಲುಗಿನ ಅನೇಕ ಸಿನೆಮಾಗಳಲ್ಲಿ ವಿವಿಧ ಪಾತ್ರಗಳಲ್ಲಿ ನಟಿಸಿ ಫೇಂ ಪಡೆದುಕೊಂಡ ಕ್ಯಾರೆಕ್ಟರ್‍ ಆರ್ಟಿಸ್ಟ್ ಸುರೇಖಾವಾಣಿ ಸೋಷಿಯಲ್ ಮಿಡಿಯಾದಲ್ಲಂತೂ ತುಂಬಾನೆ ಫೇಮಸ್ ಆಗಿದ್ದಾರೆ. ಆಕೆ ಸೋಷಿಯಲ್ ಮಿಡಿಯಾದಲ್ಲಿ ಸದಾ ಸುದ್ದಿಯಾಗುತ್ತಿರುತ್ತಾರೆ. ಸುರೇಖಾವಾಣಿಗೆ ಸುಪ್ರಿತಾ ಎಂಬ ಮಗಳೂ ಸಹ ಇದ್ದಾಳೆ. ಇಬ್ಬರೂ ಶಾಪಿಂಗ್ ಗೆ ಹೋಗುತ್ತಾ, ವೆಕೇಷನ್ ಗೆ ಹೋಗುತ್ತಾ ಸದಾ ಪೊಟೋಶೂಟ್ಸ್ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ. ಅವರು ಹಂಚಿಕೊಳ್ಳುವ ಪೊಟೋಗಳು, ವಿಡಿಯೋಗಳು ಕಡಿಮೆ ಸಮಯದಲ್ಲೇ ವೈರಲ್ ಆಗುತ್ತಿರುತ್ತವೆ. ಅದೇ ರೀತಿಯಲ್ಲಿ ಟ್ರೋಲ್ ಸಹ ಆಗುತ್ತಿರುತ್ತಾರೆ. ತಾಯಿ-ಮಗಳು ಸಹ ಸದಾ ಟ್ರೋಲಿಂಗ್ ಆಗುತ್ತಿರುತ್ತಾರೆ. ಜೊತೆಗೆ ಟ್ರೋಲರ್‍ ಗಳಿಗೆ ಆಗಾಗ ಕೌಂಟರ್‍ ಸಹ ನೀಡುತ್ತಿರುತ್ತಾರೆ.

ಇನ್ನೂ ಸುರೇಖಾವಾಣಿ ಪುತ್ರಿ ಸುಪ್ರೀತಾ ಸೋಷಿಯಲ್ ಮಿಡಿಯಾದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಮಾಸ್ ಮಹಾರಾಜ ರವಿತೇಜ ಅಭಿನಯದ ಧಮಾಕ ಸಿನೆಮಾದಲ್ಲಿ ಸೂಪರ್‍ ಹಿಟ್ ಆದ ಪಲ್ಸರ್‍ ಬೈಕ್ ಹಾಡಿಗೆ ಸುಪ್ರೀತಾ ತನ್ನದೇ ಆದ ಸ್ಟೈಲ್ ನಲ್ಲಿ ನೃತ್ಯ ಮಾಡಿದ್ದಾರೆ. ಇನ್ನೂ ಧಮಾಕಾ ಸಿನೆಮಾದಲ್ಲಿ ರವಿತೇಜ ಹಾಗೂ ಶ್ರೀಲೀಲಾ ಭರ್ಜರಿಯಾಗಿ ನೃತ್ಯ ಮಾಡಿದ್ದರು. ಇದೇ ಹಾಡಿಗೆ ಸುಪ್ರಿತಾ ನೃತ್ಯ ಮಾಡಿದ್ದಾರೆ. ರೆಡ್ ಕಲರ್‍ ಟೈಟ್ ಫಿಟ್ ಡ್ರೆಸ್ ಧರಿಸಿ ಮೈಂಡ್ ಬ್ಲಾಕ್ ಆಗುವಂತೆ ಸ್ಟೆಪ್ಸ್ ಆಗಿದ್ದಾರೆ. ಇನ್ನೂ ಈ ವಿಡಿಯೋದಲ್ಲಿ ಸುಪ್ರಿತಾ ಹೊಟ್ಟೆ ಕೊಂಚ ಮುಂದೆ ಬಂದಿದ್ದು, ಅದರಿಂದ ಆಕೆಯನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ. ಇನ್ನೂ ಆ ಟ್ರೋಲ್ ಗಳಿಗೆ ಸುಪ್ರಿತಾ ಮೈಂಡ್ ಬ್ಲಾಕ್ ಆಗುವಂತಹ ಉತ್ತರ ಸಹ ನೀಡಿದ್ದಾರೆ. ಇನ್ನರ್‍ ವೇರ್‍ ಹಾಕುವುದನ್ನು ಮರೆತಿದ್ದೇನೆ ಆದ ಕಾರಣದಿಂದಲೇ ಹೊಟ್ಟೆ ಕೊಂಚ ದಪ್ಪವಾಗಿ ಕಾಣಿಸು‌ತ್ತಿದೆ ಎಂದು ಹೇಳಿದ್ದಾರೆ. ಇನ್ನೂ ಇನ್ನರ್‍ ವೇರ್‍ ಗೂ ಹೊಟ್ಟ ದಪ್ಪ ಕಾಣಿಸುವುದಕ್ಕೂ ಏನಿದೆ ಸಂಬಂಧ ಎಂದು ನೆಟ್ಟಿಗರೂ ಸಹ ಪ್ರಶ್ನೆಗಳನ್ನು ಮಾಡುತ್ತಿದ್ದಾರೆ.

ಇನ್ನೂ ಸುಪ್ರಿತಾ  ಹೊಟ್ಟೆ ಗಟ್ಟಿಯಾಗಿ ಹಿಡಿದಿಟ್ಟುಕೊಂಡು ಟಮ್ಮಿ ಟಕ್ಕರ್‍ ಹಾಕುವುದನ್ನು ಮರೆತಿದ್ದೇನೆ ಎಂದು ಫನ್ನಿಯಾಗಿ ಬೋಲ್ಡ್ ಕಾಮೆಂಟ್ ಮಾಡಿದ್ದಾರೆ. ಇನ್ನೂ ಆಕೆ ನೀಡಿದ ಉತ್ತರದಿಂದ ನೆಟ್ಟಿಗರೂ ಆಕೆಯನ್ನು ಮತಷ್ಟು ಟ್ರೋಲ್ ಮಾಡುತ್ತಿದ್ದಾರೆ. ಇನ್ನರ್‍ ವೇರ್‍ ಹಾಕುವುದನ್ನು ಮರೆತಿದ್ದೀಯಾ ಸರಿ ಅದನ್ನು ಈ ರೀತಿಯಲ್ಲಿ ವ್ಯಕ್ತಪಡಿಸಿದ್ದೀಯಾ ಎಂದು ಕಾಮೆಂಟ್ ಗಳನ್ನು ಹರಿಬಿಡುತ್ತಾ ಟ್ರೋಲ್ ಸಹ ಮಾಡುತ್ತಿದ್ದಾರೆ.

Most Popular

To Top