ದೊಡ್ಮನೆಯ ಯುವರಾಜ್ ಕುಮಾರ್ ಸಿನೆಮಾದಲ್ಲಿ ನಾಯಕಿಯಾದ ಕಾಂತಾರ ಬ್ಯೂಟಿ ಸಪ್ತಮಿ ಗೌಡ….!

Follow Us :

ಸಾಮಾನ್ಯವಾಗಿ ತೆರೆಕಂಡ ಕಾಂತಾರ ಸಿನೆಮಾ ದೇಶದ ಸಿನಿರಂಗದಲ್ಲಿ ದೊಡ್ಡ ಮಟ್ಟದ ಕ್ರೇಜ್ ಪಡೆದುಕೊಂಡಿದೆ. ಈ ಸಿನಿಮಾದಲ್ಲಿ ಲೀಲಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡ ಸಪ್ತಮಿ ಗೌಡ ಈ ಸಿನೆಮಾದ ಮೂಲಕ ಬಿಗ್ ಬ್ರೇಕ್ ಪಡೆದುಕೊಂಡಿದ್ದಾರೆ. ಸದ್ಯ ಆಕೆಗೆ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಆಫರ್‍ ಗಳು ಹರಿದುಬರುತ್ತಿವೆ. ಇದೀಗ ದೊಡ್ಮನೆಯ ಮತ್ತೊರ್ವ ನಟ ಯುವರಾಜ್ ಕುಮಾರ್‍ ಅಭಿನಯಿಸಲಿರುವ ಯುವ ಎಂಬ ಸಿನೆಮಾದಲ್ಲಿ ಸಪ್ತಮಿ ಗೌಡ ಬಣ್ಣ ಹಚ್ಚಲಿದ್ದಾರೆ.

ಸ್ಯಾಂಡಲ್ ವುಡ್ ರಂಗದ ದೊಡ್ಮನೆ ಕುಟುಂಬದಿಂದ ಮತ್ತೊಂದು ಕುಡಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದೆ. ರಾಘವೇಂದ್ರ ರಾಜ್ ಕುಮಾರ್‍ ರವರ ದ್ವಿತೀಯ ಪುತ್ರ ಯುವರಾಜ್ ಕುಮಾರ್‍ ರವರೊಂದಿಗೆ ಹೊಂಬಾಳೆ ಫಿಲಂಸ್ ಸಿನೆಮಾ ಮಾಡುತ್ತಿದೆ.ಈ ಸಿನೆಮಾದ ಟೈಟಲ್ ಸಹ ಕೆಲವು ದಿನಗಳ ಹಿಂದೆಯಷ್ಟೆ ರಿವೀಲ್ ಮಾಡಲಾಗಿತ್ತು. ಸಿನೆಮಾದ ಟೈಟಲ್ ಟೀಸರ್‍ ಸಿನೆಮಾ ಘೋಷಣೆಯಾದ ಸುಮಾರು ದಿನಗಳ ಬಳಿಕ ರಿಲೀಸ್ ಮಾಡಲಾಗಿದೆ. ಇನ್ನೂ ಸಿನೆಮಾ ಘೋಷಣೆಯಾದಾಗಿನಿಂದ ಸಿನೆಮಾದಲ್ಲಿ ಯಾವ ನಾಯಕಿ ನಟಿಸಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಕಾಡಿತ್ತು. ಅನೇಕ ನಟಿಯರ ಹೆಸರುಗಳೂ ಸಹ ಕೇಳಿಬಂದಿತ್ತು. ಕೆಲವು ತೆಲುಗು ನಟಿಯರ ಹೆಸರುಗಳೂ ಸಹ ಕೇಳಿಬಂದಿತ್ತು. ಇನ್ನೂ ಕೊನೆಯದಾಗಿ ಈ ಸಿನೆಮಾಗೆ ನಟಿಯಾರು ಎಂಬ ಬಗ್ಗೆ ಫೈನಲ್ ಆಗಿದೆ. ಸಪ್ತಮಿ ಗೌಡ ಈ ಸಿನೆಮಾದಲ್ಲಿ ಯುವರಾಜ ನಿಗೆ ಜೋಡಿಯಾಗಿ ನಟಿಸಲಿದ್ದಾರೆ.

ಇನ್ನೂ ಸಪ್ತಮಿ ಗೌಡ ಕಾಂತಾರ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾವನ್ನು ಸಹ ಹೊಂಬಾಳೆ ಫಿಲಂಸ್ ರವರೇ ನಿರ್ಮಾಣ ಮಾಡಿದ್ದರು. ಇದೀಗ ಯುವ ಸಿನೆಮಾವನ್ನು ಸಹ ಹೊಂಬಾಳೆ ಫಿಲಂಸ್ ರವರೇ ನಿರ್ಮಾಣ ಮಾಡಲಿದ್ದು, ಈ ಸಿನೆಮಾಗಾಗಿ ಸಪ್ತಮಿ ಗೌಡ ರವರನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ. ಇನ್ನೂ ಸಪ್ತಮಿ ಗೌಡ ಹಾಗೂ ಯುವ ರಾಜ್ ಜೋಡಿಯನ್ನು ದೊಡ್ಡಪರದೆಯ ಮೇಲೆ ನೋಡಲು ಅಭಿಮಾನಿಗಳೂ ಸಹ ಕಾತುರದಿಂದ ಕಾಯುತ್ತಿದ್ದಾರೆ. ಸದ್ಯ ಯುವ ಸಿನೆಮಾದ ಪೋಸ್ಟರ್‍ ಹಾಗೂ ಟೀಸರ್‍ ಸಖತ್ ಸದ್ದು ಮಾಡುತ್ತಿದ್ದು, ದೊಡ್ಡ ಮಟ್ಟದ ನಿರೀಕ್ಷೆಯನ್ನು ಹುಟ್ಟಿಸಿದೆ ಎಂದು ಹೇಳಬಹುದಾಗಿದೆ.

ಇನ್ನೂ ಇದೀಗ ಬಿಡುಗಡೆಯಾದ ಟೀಸರ್‍ ನೋಡಿದರೇ ಇದೊಂದು ಪಕ್ಕಾ ಮಾಸ್ ಸಿನೆಮಾ ಎಂದು ಹೇಳಬಹುದಾಗಿದೆ. ಈ ಸಿನೆಮಾದಲ್ಲಿ ಭಾರಿ ಆಕ್ಷನ್ ದೃಶ್ಯಗಳೂ ಸಹ ಇರಬಹುದು ಎನ್ನಲಾಗಿದೆ. ಇದೀಗ ಟೀಸರ್‍ ಬಿಡುಗಡೆಯಾಗಿದ್ದು, ಟೀಸರ್‍ ನೋಡಿದ ಬಳಿಕ ಗ್ಯಾಂಗ್ ವಾರ್‍ ಗೆ ಸಂಬಂಧಿಸಿದ ಕಥೆ ಈ ಸಿನೆಮಾ ಹೊಂದಿದೆ ಎಂದೂ ಸಹ ಹೇಳಲಾಗುತ್ತಿದೆ. ಇನ್ನೂ ಈ ಸಿನೆಮಾ ಡಿಸೆಂಬರ್‍ ಮಾಹೆಯಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿದು ಬಂದಿದೆ.