Film News

ಡ್ರಗ್ಸ್ ಕೇಸ್ ನಲ್ಲಿ ಸಿಕ್ಕಿಬಿದ್ದ ಕೆಪಿ ಚೌದರಿ ಜೊತೆಗೆ ಸುರೇಖಾವಾಣಿ ಪುತ್ರಿ ಸುಪ್ರೀತಾ ರೊಮ್ಯಾನ್ಸ್, ವೈರಲ್ ಆದ ಪೊಟೋಸ್….!

ಕೆಲವು ದಿನಗಳ ಹಿಂದೆಯಷ್ಟೆ ಕಬಾಲಿ ಸಿನೆಮಾದ ನಿರ್ಮಾಪಕ ಆರ್‍ಪಿ.ಚೌದರಿಯವರನ್ನು ಡ್ರಗ್ಸ್ ಕೇಸ್ ನಲ್ಲಿ ಸೈಬರಾಬಾದ್ ಪೊಲೀಸರು ಬಂಧಿಸಿದ್ದಾರೆ. ಕೆಪಿ ಚೌದರಿಯ ಬಳಿ ಕೊಕೈನ್ ದೊರೆತಿದ್ದು ಆತನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೂ ಚೌದರಿಯನ್ನು ವಿಚಾರಣೆ ನಡೆಸಿದಾಗ ಅನೇಕ ಸೆಲಬ್ರೆಟಿಗಳ ಹೆಸರುಗಳೂ ಸಹ ಕೇಳಿಬರುತ್ತಿವೆ. ಇದೀಗ ಟಾಲಿವುಡ್ ನ ಕ್ಯಾರೆಕ್ಟರ್‍ ಆರ್ಟಿಸ್ಟ್ ಸುರೇಖಾವಾಣಿರವರ ಪುತ್ರಿ ಸುಪ್ರೀತಾ ಜೊತೆಗೆ ಚೌದರಿ ರೊಮ್ಯಾನ್ಸ್ ಮಾಡಿರುವ ಪೊಟೋ ವೈರಲ್ ಆಗುತ್ತಿದೆ.

ಕೆಲವು ವರ್ಷಗಳ ಹಿಂದೆ ಸಿನಿರಂಗದಲ್ಲಿ ಡ್ರಗ್ಸ್ ಕೇಸ್ ಜೋರಾಗಿಯೇ ಸದ್ದು ಮಾಡಿತ್ತು. ಈ ಪ್ರಕರಣದಲ್ಲಿ ಕೆಲವು ಟಾಪ್ ಸೆಲೆಬ್ರೆಟಿಗಳ ಹೆಸರುಗಳೂ ಸಹ ಕೇಳಿಬಂದವು. ಕೆಲ ಸೆಲಬ್ರೆಟಿಗಳು ಸಹ ಪೊಲೀಸ್ ವಿಚಾರಣೆಯನ್ನು ಎದುರಿಸಿದರು. ಇದೀಗ ಮತ್ತೊಮ್ಮೆ ಡ್ರಗ್ಸ್ ಸದ್ದು ಕೇಳಿಬರುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೆ ಸೈಬರಾಬಾದ್ ಪೊಲೀಸರು ನಿರ್ಮಾಪಕ ಕೆ.ಪಿ.ಚೌದರಿ ಬಳಿ ಕೊಕೈನ್ ಸಿಕ್ಕಿದ್ದು, ಅವರನ್ನು ಪೊಲೀಸರು ಆತನನ್ನು ಬಂಧಿಸಿದ್ದಾರೆ. ಈ ವೇಳೆ ಅವರ ಪೋನ್ ಕಾಲ್ ಲೀಸ್ಟ್, ಗೂಗಲ್ ಡ್ರೈವ್ ಆಧಾರವಾಗಿ ಅನೇಕ ವಿಚಾರಗಳು ಹೊರಬಂದಿದೆ. ಇನ್ನೂ ಈ ಲೀಸ್ಟ್ ನಲ್ಲಿ ಅಷುರೆಡ್ಡಿ, ಜ್ಯೋತಿ, ಸುರೇಖಾ ವಾಣಿ ಸೇರಿದಂತೆ ಅನೇಕರ ಹೆಸರುಗಳು ಕೇಳಿಬಂದಿದೆ. ಈ ವಿವಾದ ದೊಡ್ಡ ಮಟ್ಟದಲ್ಲೇ ಸದ್ದು ಮಾಡುತ್ತಿವೆ. ಅದರಲ್ಲೂ ಅಷುರೆಡ್ಡಿ ಹೆಸರು ದೊಡ್ಡ ಮಟ್ಟದಲ್ಲೇ ಕೇಳಿಬರುತ್ತಿದೆ. ಇದರ ಜೊತೆಗೆ ಸುರೇಖವಾಣಿ, ಆಕೆಯ ಪುತ್ರಿ ಸುಪ್ರಿತಾ, ನಟಿ ಜ್ಯೋತಿ ರವರೊಂದಿಗೆ ಇರುವ ಕೆಪಿ ಚೌದರಿ ಜೊತೆಗೆ ಇರುವಂತಹ ಪೊಟೋಗಳೂ ಸಹ ವೈರಲ್ ಆಗುತ್ತಿವೆ.

ಇನ್ನೂ ವಿಚಾರಣೆಯ ಹಂತದಲ್ಲಿ ಅನೇಕ ಸೆಲೆಬ್ರೆಟಿಗಳ ಹೆಸರುಗಳು ಬಲವಾಗಿ ಕೇಳಿಬರುತ್ತಿದೆ. ಜೊತೆಗೆ ಚೌದರಿ ಕಾಲ್ ಲೀಸ್ಟ್ ನಲ್ಲಿ ಅನೇಕರೊಂದಿಗೆ ಸಂಭಾಷಣೆ ನಡೆಸಿದ್ದಾರೆ. ಜೊತೆಗೆ ಬ್ಯಾಂಕ್ ಖಾತೆಯನ್ನು ಸಹ ಪರಿಶೀಲನೆ ನಡೆಸಲಾಗುತ್ತಿದೆಯಂತೆ. ಇದೀಗ ತೆಲುಗು ಸೀನಿಯರ್‍ ನಟಿ ಸುರೇಖವಾಣಿ ಪುತ್ರಿ ಸುಪ್ರೀತಾ ಕೆಪಿ ಚೌದರಿ ಜೊತೆಗೆ ತುಂಭಾ ಕ್ಲೋಜ್ ಆಗಿರುವ ಪೊಟೋಸ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅದರಲ್ಲಿ ಒಂದು ಪೊಟೋದಲ್ಲಿ ಸುಪ್ರೀತಾ ಚೌದರಿಗೆ ಕಿಸ್ ಮಾಡುತ್ತಿದ್ದಾರೆ. ಇದರಿಂದಾಗಿ ಸುರೇಖಾವಾಣಿ ಹಾಗೂ ಸುಪ್ರೀತಾಗೂ ಈ ಡ್ರಗ್ಸ್ ಜಾಲದಲ್ಲಿ ಲಿಂಕ್ ಇದೆ ಎಂಬ ಪ್ರಚಾರಗಳು ಶುರುವಾಗಿದೆ. ಇನ್ನೂ ಈ ಬಗ್ಗೆ ಸುರೇಖಾವಾಣಿ ಅಥವಾ ಸುಪ್ರೀತಾ ಯಾವ ರೀತಿಯಲ್ಲಿ ರಿಯಾಕ್ಟ್ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನೂ ಈ ಜಾಲದಲ್ಲಿ ಬಿಗ್ ಬಾಸ್‌ ಬ್ಯೂಟಿ ಅಷುರೆಡ್ಡಿ ಹೆಸರು ಸಹ ಕೇಳಿಬಂದಿತ್ತು. ಆಕೆ ಸಹ ತನ್ನ ಸೊಷಿಯಲ್ ಮಿಡಿಯಾ ಖಾತೆಯ ಮೂಲಕ ತನಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ನನ್ನ ನಂಬರ್‍ ರಿವೀಲ್ ಮಾಡಿದ್ರೆ ಸರಿಯಿರೊಲ್ಲ ಎಂದು ಸ್ಟ್ರಾಂಗ್ ಆಗಿಯೇ ವಾರ್ನ್ ಕೊಟ್ಟಿದ್ದರು. ಇನ್ನೂ ಇದೀಗ ಸುರೇಖಾವಾಣಿ ಹಾಗೂ ಆಕೆಯ ಪುತ್ರಿ ಸುಪ್ರೀತಾ ಹೆಸರುಗಳೂ ಸಹ ಕೇಳಿಬರುತ್ತಿದೆ. ಇನ್ನೂ ಅನೇಕರು ಪೊಟೋಗಳಲ್ಲಿ ಕಾಣಿಸಿಕೊಂಡ ಮಾತ್ರಕ್ಕೆ ಡ್ರಗ್ಸ್ ಜೊತೆಗೆ ಸಂಬಂಧವಿದ್ದಂತೆ ಅಲ್ಲ ಎಂದೂ ಸಹ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Most Popular

To Top