ಐಕಾನ್ ಸ್ಟಾರ್ ಅಲ್ಲಿ ಅರ್ಜುನ್ ಸಿನೆಮಾಗೆ ನೋ ಹೇಳಿದ್ರಂತೆ ಶ್ರೀಲೀಲಾ, ಕನ್ನಡದ ಹುಡುಗಿಗೆ ಗಟ್ಸ್ ಕೊಂಚ ಹೆಚ್ಚಾಗಿಯೇ ಇದೆ…!

Follow Us :

ಸದ್ಯ ತೆಲುಗು ಸಿನಿರಂಗದಲ್ಲಿ ಕನ್ನಡ ಮೂಲದ ನಟಿಯರ ಹವಾ ಜೋರಾಗಿಯೇ ನಡೆಯುತ್ತಿದೆ ಎಂದೇ ಹೇಳಬಹುದಾಗಿದೆ. ಮೊದಲನೇ ಸಿನೆಮಾದ ಮೂಲಕ ಕ್ರೇಜ್ ಪಡೆದುಕೊಂಡ ಶ್ರೀಲೀಲಾ ಇದೀಗ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಸದ್ಯ ಆಕೆಯ ಕೈಯಲ್ಲಿ ಹತ್ತಕ್ಕೂ ಹೆಚ್ಚು ಸಿನೆಮಾಗಳಿವೆ. ಸಾಕಷ್ಟು ಸಿನೆಮಾಗಳನ್ನು ಕೈಯಲ್ಲಿಟ್ಟುಕೊಂಡಿರುವ ಶ್ರೀಲೀಲಾ ಅಲ್ಲು ಅರ್ಜುನ್ ರವರ ಸಿನೆಮಾದಲ್ಲಿ ನಟಿಸುವ ಅವಕಾಶ ಬಂದರೇ ಆಕೆ ನೋ ಎಂದು ಹೇಳಿದ್ದಾರಂತೆ. ಸದ್ಯ ಈ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ.

ಸ್ಯಾಂಡಲ್ ವುಡ್ ನಟಿ ಶ್ರೀಲೀಲಾ ಪೆಳ್ಳಿಸಂದD ಎಂಬ ಸಿನೆಮಾದ ಮೂಲಕ ತೆಲುಗು ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಈ ಸಿನೆಮಾ ಅಷ್ಟೊಂದು ಸಕ್ಸಸ್ ಕಾಣದೇ ಇದ್ದರೂ, ಶ್ರೀಲೀಲಾ ಬ್ಯೂಟಿ ಹಾಗೂ ಅಭಿನಯಕ್ಕೆ ನೂರಕ್ಕೆ ನೂರು ಮಾರ್ಕ್ಸ್ ಪಡೆದುಕೊಂಡರು. ಬಳಿಕ ಆಕೆ ಧಮಾಕಾ ಎಂಬ ಸಿನೆಮಾದಲ್ಲಿ ಮಾಸ್ ಮಹಾರಾಜ ರವಿತೇಜ ಜೊತೆಗೆ ನಟಿಸಿದ್ದರು. ಈ ಸಿನೆಮಾ ಬ್ಲಾಕ್ ಬ್ಲಸ್ಟರ್‍ ಹಿಟ್ ಆಯ್ತು. ಈ ಸಿನೆಮಾದ ಬಳಿಕ ಆಕೆ ಕ್ರೇಜ್ ಬದಲಾಯ್ತು ಎಂದೇ ಹೇಳಬಹುದು. ತೆಲುಗು ಸಿನೆಮಾಗಳು ಮಾತ್ರವಲ್ಲೇ ತಮಿಳು, ಕನ್ನಡ ಸಿನೆಮಾಗಳಲ್ಲಿ ಸಾಲು ಸಾಲು ಅವಕಾಶಗಳನ್ನು ಪಡೆದುಕೊಳ್ಳುತ್ತಾ ಸಾಗುತ್ತಿದ್ದಾರೆ. ಜೊತೆಗೆ ಹಾಲಿವುಡ್ ಸಿನೆಮಾ ಸಹ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂದಿನ ವರ್ಷದ ವರೆಗೂ ಶ್ರೀಲೀಲಾ ಪುಲ್ ಬ್ಯುಸಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಕೆಯ ಡೇಟ್ಸ್ ದೊರೆಯುವುದು ಸಹ ಕಷ್ಟ ಎಂದು ತಿಳಿದುಬಂದಿದೆ.

ಇನ್ನೂ ಶ್ರೀಲೀಲಾ ಕೈಯಲ್ಲಿ ತೆಲುಗಿನಲ್ಲಿ ಮಾತ್ರ ಸುಮಾರು ಏಳು ಸಿನೆಮಾಗಳಿವೆ ಎಲ್ಲಾ ಸಿನೆಮಾಗಳೂ ಟಾಲಿವುಡ್ ಸ್ಟಾರ್‍ ನಟರ ಸಿನೆಮಾಗಳು. ಇದೀಗ ಹರಿದಾಡುತ್ತಿರುವ ರೂಮರ್‍ ನಂತೆ ಶ್ರೀಲೀಲಾಗೆ ಐಕಾನ್ ಸ್ಟಾರ್‍ ಅಲ್ಲು ಅರ್ಜುನ್ ಜೊತೆಗೆ ನಟಿಸುವ ಅವಕಾಶ ಬಂದರೇ ಆಕೆ ನೋ ಎಂದು ಹೇಳಿದ್ದರಂತೆ. ಪುಷ್ಪಾ ಸಿನೆಮಾದ ಮೂಲಕ ಪ್ಯಾನ್ ಇಂಡಿಯಾ ಇಮೇಜ್ ಪಡೆದುಕೊಂಡ ಅಲ್ಲು ಅರ್ಜುನ್ ಜೊತೆಗೆ ನಟಿಸಲು ಅನೇಕರ ನಟಿಯರು ತುದಿಗಾಲಿನ ಮೇಲೆ ನಿಂತಿರುತ್ತಾರೆ. ಆದರೆ ಶ್ರೀಲೀಲಾ ಮಾತ್ರ ಅಲ್ಲು ಅರ್ಜುನ್ ಸಿನೆಮಾಗೆ ನೋ ಎಂದು ಹೇಳಿದರಂತೆ. ಪುಷ್ಪಾ-2 ಸಿನೆಮಾದಲ್ಲಿ ಸ್ಪೇಷಲ್ ಹಾಡೊಂದರಲ್ಲಿ ಹೆಜ್ಜೆ ಹಾಕಲು ಶ್ರೀಲೀಲಾ ರವರನ್ನು ಸಂಪರ್ಕ ಮಾಡಿದ್ದರಂತೆ. ಈ ಹಾಡಿಗಾಗಿ ಭಾರಿ ರೆನ್ಯುಮರೇಷನ್ ಸಹ ಆಫರ್‍ ಮಾಡಿದ್ದರಂತೆ. ಆದರೆ ಆಕೆ ನೋ ಎಂದು ಹೇಳಿದ್ದರಂತೆ. ಸದ್ಯ ಈ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಜೋರಾಗಿಯೇ ಹರಿದಾಡುತ್ತಿದ್ದು, ಇದರ ಬಗ್ಗೆ ಅಧಿಕೃತ ಮಾಹಿತಿ ಮಾತ್ರ ಲಭ್ಯವಿಲ್ಲ.

ಇನ್ನೂ ಶ್ರೀಲೀಲಾ ಇದೀಗ ಸಾಲು ಸಾಲು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಉಸ್ತಾದ್ ಭಗತ್ ಸಿಂಗ್, ಭಗವಂತ್ ಕೇಸರಿ, ಗುಂಟೂರು ಖಾರಂ, ಸ್ಕಂದ, ನಿತಿನ್32, ವಿಡಿ12, ಆದಿಕೇಶವ ಸೇರಿದಂತೆ ಹಲವು ತೆಲುಗು ಸಿನೆಮಾಗಳಲ್ಲಿ ಹಾಗೂ ಕನ್ನಡದಲ್ಲಿ ಜೂನಿಯರ್‍ ಎಂಬ ಸಿನೆಮಾದಲ್ಲೂ ಸಹ ಶ್ರೀಲೀಲಾ ಬ್ಯುಸಿಯಾಗಿದ್ದಾರೆ. ಮತಷ್ಟು ಸಿನೆಮಾಗಳು ಚರ್ಚೆಯ ಹಂತದಲ್ಲಿವೆ ಎಂದೂ ಸಹ ಹೇಳಲಾಗುತ್ತಿದೆ.