ನಿಮ್ಮ ಕೈಯಲ್ಲಿ ಬೈಯಿಸಿಕೊಳ್ಳುವುದಕ್ಕೇ ನಾನು ಇರೋದು, ನಾನು ಪವನ್ ಬಗ್ಗೆ ಮಾತಾಡಿದ್ದು ಎಲ್ಲ ನಿಜ ಎಂದ ರೇಣು ದೇಸಾಯಿ……!

Follow Us :

ತೆಲುಗು ಸ್ಟಾರ್‍ ನಟ ಪವರ್‍ ಸ್ಟಾರ್‍ ಪವನ್ ಕಲ್ಯಾಣ್ ರವರ ಮಾಜಿ ಪತ್ನಿ ರೇಣು ದೇಸಾಯಿ ವಿಚ್ಚೇದನ ಪಡೆದುಕೊಂಡು ವರ್ಷಗಳೇ ಕಳೆದಿದೆ. ವಿಚ್ಚೇದನದ ಬಳಿಕ ಅನೇಕ ಬಾರಿ ರೇಣು ಪವನ್ ಕಲ್ಯಾಣ್ ರವರ ಬಗ್ಗೆ ಅನೇಕ ವಿಮರ್ಶೆಗಳನ್ನು ಮಾಡಿದರು. ಪವನ್ ಕಲ್ಯಾಣ್ ರವರಿಂದ ದೂರವಾದ ಬಳಿಕ ರೇಣು ದೇಸಾಯಿ ಸೋಷಿಯಲ್ ಮಿಡಿಯಾದಲ್ಲಿ ಅಭಿಮಾನಿಗಳೊಂದಿಗೆ ಟಚ್ ನಲ್ಲೇ ಇದ್ದರು. ಕೆಲವು ದಿನಗಳ ಹಿಂದೆಯಷ್ಟೆ ಸಾಮಾನ್ಯ ಪ್ರಜೆಯಾಗಿ ಪವನ್ ಕಲ್ಯಾಣ್ ರವರನ್ನು ಚುನಾವಣೆಯಲ್ಲಿ ಬೆಂಬಲಿಸಿ ಎಂದು ಮನವಿ ಮಾಡಿದ್ದರು. ಇದೀಗ ಈ ವಿಡಿಯೋಗೆ ಕೆಲವೊಂದು ವಿಮರ್ಶೆಗಳು ಬಂದಿದ್ದು, ಅದಕ್ಕೆ ರೇಣು ಕೂಲ್ ಆಗಿ ಕೌಂಟರ್‍ ಕೊಟ್ಟಿದ್ದಾರೆ.

ನಟಿ ರೇಣು ದೇಸಾಯಿ ಪವನ್ ಕಲ್ಯಾಣ್ ರವರನ್ನು ಪ್ರೀತಿಸಿ ಮದುವೆಯಾದರು. ಮದುವೆಯಾಗಿ ಇಬ್ಬರು ಮಕ್ಕಳನ್ನು ಪಡೆದುಕೊಂಡ ಬಳಿಕ ಅವರಿಬ್ಬರ ನಡುವೆ ವಿಬೇದಗಳು ಹುಟ್ಟಿಕೊಂಡು ವಿಚ್ಚೇದನ ಪಡೆದುಕೊಂಡರು. ವಿಚ್ಚೇದನ ಪಡೆದುಕೊಂಡ ಬಳಿಕ ರೇಣು ಮಕ್ಕಳೊಂದಿಗೆ ಒಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಅನೇಕ ಬಾರಿ ಪವನ್ ಕಲ್ಯಾಣ್ ಅಭಿಮಾನಿಗಳು ಆಕೆಯನ್ನು ಟ್ರೋಲ್ ಸಹ ಮಾಡುತ್ತಿರುತ್ತಾರೆ. ರೇಣು ಸಹ ಪವನ್ ಅಭಿಮಾನಿಗಳೊಂದಿಗೆ ದೊಡ್ಡ ಯುದ್ದವೇ ಮಾಡುತ್ತಿರುತ್ತಾರೆ. ಈ ಹಿಂದೆ ಪವನ್ ಕಲ್ಯಾಣ್ ಬಗ್ಗೆ ಕೆಲವೊಂದು ಹೇಳಿಕೆಗಳನ್ನು ನೀಡಿದ್ದು, ಆಕೆಯನ್ನು ಭಾರಿ ಟ್ರೋಲ್ ಮಾಡಿದ್ದರು.  ಕಳೆದೆರಡು ದಿನಗಳ ಹಿಂದೆ ರೇಣು ದೇಸಾಯಿ ಪವನ್ ಕಲ್ಯಾಣ್ ರವರಿಗೆ ಈ ಬಾರಿ ಅವಕಾಶ ಕೊಡಿ ಎಂದು ಸಾಮಾನ್ಯ ಪ್ರಜೆಯಾಗಿ ಹೇಳಿದ್ದರು. ಈ ವಿಡಿಯೋ ಕಂಡ ಪವನ್ ಫ್ಯಾನ್ಸ್ ಪುಲ್ ಖುಷಿಯಾಗಿದ್ದರು. ಆದರೆ ಪವನ್ ಕಲ್ಯಾಣ್  ವಿರೋಧಿಗಳು ಆಕೆಯನ್ನು ಟ್ರೋಲ್ ಮಾಡುತ್ತಿದ್ದಾರೆ. ಅದಕ್ಕೆ ರೇಣು ಕೂಲ್ ಆಗಿಯೇ ಕೌಂಟರ್‍ ಕೊಟ್ಟಿದ್ದಾರೆ.

ಇನ್ನೂ ರೇಣು ದೇಸಾಯಿ ಹಂಚಿಕೊಂಡ ವಿಡಿಯೋ ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗಿತ್ತು. ಈ ವಿಡಿಯೋಗೆ ಸೋಷಿಯಲ್ ಮಿಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ವಿಡಿಯೋ ನೋಡಿದ ಪವನ್ ಕಲ್ಯಾಣ್ ವಿರೋಧಿಗಳು ನಿಮ್ಮನ್ನು ಆ ಕಾರಣದಿಂದಲೇ ಪವನ್ ಕಲ್ಯಾಣ್ ನಿಮ್ಮನ್ನು ಹೊರಹಾಕಿದ್ದಾರೆ ಎಂದು ಕಾಮೆಂಟ್ ಮಾಡಿದ್ದರು. ಇದೀಗ ಆ ಕಾಮೆಂಟ್ ಗೆ ರೇಣು ದೇಸಾಯಿ ರಿಯಾಕ್ಟ್ ಆಗಿದ್ದಾರೆ. ಕೂಲ್ ಆಗಿಯೇ ಕೌಂಟರ್‍ ಕೊಟ್ಟಿದ್ದಾರೆ. ಈಗ ನಿಮಗೆ ತೃಪ್ತಿಯಾಗಿದೆಯೇ, ಇಲ್ಲದೇ ಹೋದರೇ ನನ್ನನ್ನು ಬೈಯಿರಿ, ನಿಮ್ಮೊಂದಿಗೆ ಬೈಯಿಸಿಕೊಳ್ಳುವುದೇ ನನ್ನ ಜೀವನ ಇರೋದು ಎಂದು ಕೂಲ್ ಆಗಿ ರಿಯಾಕ್ಟ್ ಆಗಿದ್ದಾರೆ.

ಈ ಹಿಂದೆ ಸಹ ರೇಣು ದೇಸಾಯಿ ವಿಚ್ಚೇದನದ ಬಗ್ಗೆ ಮಾತನಾಡಿದ್ದು, ಇದೀಗ ಪವನ್ ಕಲ್ಯಾಣ್ ರವರಿಗೆ ಬೆಂಬಲ ಹೇಳಿಕೆ ನೀಡಿದ್ದಾರೆ. ಜೊತೆಗೆ ಈ ಹಿಂದೆ ಪವನ್ ಕಲ್ಯಾಣ್ ರವರ ಬಗ್ಗೆ ಹೇಳಿದ ಪ್ರತಿಯೊಂದು ಮಾತು ಸಹ ನಿಜ ಎಂದು ಹೇಳಿದ್ದರು. ಇನ್ನೂ ಸುಮಾರು ದಿನಗಳ ಬಳಿಕ ರೇಣು ದೇಸಾಯಿ ಟೈಗರ್‍ ನಾಗೇಶ್ವರ್‍ ರಾವ್ ಎಂಬ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ.