ವಿವಾದಿತ ಸ್ವಾಮೀಜಿ ನಿತ್ಯಾನಂದನ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ ರಂಜಿತಾ, ವೈರಲ್ ಆದ ಕಾಮೆಂಟ್ಸ್……!

Follow Us :

ಅತ್ಯಾಚಾರ ಪ್ರಕರಣ ಸೇರಿದಂತೆ ವಿವಿಧ ಆರೋಪಗ ಮೇಲೆ ವಿಚಾರಣೆ ಎದುರಿಸುತ್ತಿರುವ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಕೈಲಾಸ ಎಂಬ ಸ್ವಂತ ದೇಶವನ್ನೇ ಖರೀದಿಸಿದ್ದಾನೆ. ಸ್ವಂತ ಕರೆನ್ಸಿ ಸೇರಿದಂತೆ ಒಂದು ದೇಶಕ್ಕೆ ಇರಬೇಕಾದ ಎಲ್ಲವನ್ನೂ ಹಂತಹಂತವಾಗಿ ಏರ್ಪಾಡು ಮಾಡುತ್ತಿದ್ದಾನೆ. ಕೆಲವು ದಿನಗಳ ಹಿಂದೆಯಷ್ಟೆ ಈ ದೇಶಕ್ಕೆ ಹೊಸ ಪ್ರಧಾನಿಯನ್ನಾಗಿ ನಟಿ ರಂಜಿತಾ ರನ್ನು ಘೋಷಣೆ ಮಾಡಿದ್ದಾಗಿ ಸುದ್ದಿ ಹೊರಬಂದಿತ್ತು. ಪ್ರಧಾನಿಯಾದ ಬಳಿಕ ರಂಜಿತಾ ಮೊದಲ ಬಾರಿಗೆ ನಿತ್ಯಾನಂದರ ಬಗ್ಗೆ ಮಾತನಾಡಿದ್ದಾರೆ. ಆಕೆಯ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ನಿತ್ಯಾನಂದನನ್ನು ಹೊಗಳುತ್ತಾ ರಂಜಿತಾ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಆಕೆ ಮಾತನಾಡುತ್ತಾ, ಕೈಲಾಸ ದದೇಶ ಮಹಿಳಾ ಸಬಲೀಕರಣ ಹಾಗೂ ಸಮಾನತೆಯೆ ಅಭಯಾರಣ್ಯವಿದ್ದಂತೆ. ಮಹಿಳೆಯರಿಗೆ ಕೈಲಾಸ ದೇಶ ಸ್ವರ್ಗವಾಗಿದೆ. ಮಹಿಳೆಯರ ಪ್ರಗತಿ ಹಾಗೂ ಸಬಲೀಕರಣ, ಆಡಳಿತದಲ್ಲಿ ಸಮಾನತೆ ಯನ್ನು ನೀಡುವುದು ಕೈಲಾಸ ದೇಶದ ಮುಖ್ಯ ಉದ್ದೇಶವಾಗಿದೆ. ಲಿಂಗ ಸಮಾನತೆಗೆ ಕೈಲಾದ ದೇಶದಲ್ಲಿರುವಂತಹ ಲಿಂಗ ಸಮಾನತೆ ಹಾಗೂ ಬದ್ದತೆಯ ಬಗ್ಗೆ ರಂಜಿತಾ ಹೇಳಿಕೊಂಡಿದ್ದಾರೆ. ಜೊತೆಗೆ ವಿಶ್ವದಾದ್ಯಂತ ಇರುವಂತಹ ಹಿಂದೂಗಳಿಗೆ ಕೈಲಾ ಒಂದು ದೊಡ್ಡ ಭರವಸೆ ಎಂದೇ ಹೇಳಬಹುದಾಗಿದೆ.

ಇನ್ನೂ ಮೊದಲ ಹಿಂದೂ ರಾಷ್ಟ್ರ ಎಂಬ ಪರಿಕಲ್ಪನೆಯೊಂದಿಗೆ ಕೈಲಾಸ ನಿರ್ಮಾಣವಾಗಿದೆ. ಜೀವನವನ್ನು ಗೌರವಿಸುವ, ಶಿಕ್ಷಣವನ್ನು ಗೌರವಿಸುವ, ಆಧ್ಯಾತ್ಮಿಕ ಬೆಳೆವಣಿಗೆಯನ್ನು ಉತ್ತೇಜಿಸುವ ಅನೇಕರು ಈ ದೇಶದ ಕಡೆ ಆಕರ್ಷಿತರಾಗಿ ಕೈಲಾಸಕ್ಕೆ ವಲಸೆ ಹೋಗುತ್ತಿದ್ದಾರೆ. ಪ್ರಕೃತಿಯೊಂದಿಗೆ ಪರಸ್ಪರ ಸಾಮರಸ್ಯದಿಂದ ಬದುಕುವಂತಹ ಯುಟೋಪಿಯನ್ ರಾಷ್ಟ್ರವನ್ನು ಕೈಲಾಸ ರಾಷ್ಟ್ರದ ಸಂಸ್ಥಾಪಕ ನಿತ್ಯಾನಂದ ರೂಪಿಸಿದ್ದಾರೆ. ಅಷ್ಟೇಅಲ್ಲದೇ ಈ ದೇಶದಲ್ಲಿ ಉಚಿತ ಶಿಕ್ಷಣ ಸಹ ನೀಡಲಾಗುತ್ತಿದೆ. ಕೈಲಾಸದದಲ್ಲಿ ಜ್ಞಾನವು ಒಂದು ಹಕ್ಕಾಗಿದೆ ವಿನಃ ಅದು ಸವಲತ್ತು ಅಲ್ಲ. ಎಲ್ಲರನ್ನೂ ಒಳಗೊಂಡಂತೆ ಉಚಿತ ಶಿಕ್ಷಣ ನೀಡಲಾಗುತ್ತದೆ. ಪ್ರಾಣಿ ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಹಿಂಸೆಯನ್ನು ಪ್ರತಿಪಾದಿಸುವಂತಹ ದೇಶವಾಗಿದೆ. ಕೈಲಾಸ ರಾಷ್ಟ್ರದ ಎಲ್ಲಾ ವಿಭಾಗಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿಯನ್ನು ನಿತ್ಯಾನಂದರು ಘೋಷಣೆ ಮಾಡಿದ್ದಾರೆ.

ಕಳೆದ 2009 ರಲ್ಲಿ ಸ್ವಾಮಿ ನಿತ್ಯಾನಂದರನ್ನು ನಾನು ಭೇಟಿಯಾಗಿದ್ದೆ. ನನ್ನನ್ನು ನೋಡಿದ ಅವರು ಮುಗುಳ್ನಗೆ ಬೀರಿದ್ದರು. ಅವರಿಗೆ ಯಾವುದೇ ನಿರೀಕ್ಷೆ ಸಹ ಇರಲಿಲ್ಲ. ಹಣದ ಬಗ್ಗೆ ವ್ಯಾಮೋಹ ಇರಲಿಲ್ಲ. ಕೈಲಾಸ ದೇಶ ಸದಾ ಮಹಿಳೆಯರ ಸರ್ವತೋಮುಖ ಅಭಿವೃದ್ದಿಗೆ ಆದ್ಯತೆ ನೀಡುತ್ತದೆ ಎಂದು ರಂಜಿತಾ ಕೈಲಾಸ ರಾಷ್ಟ್ರದ ಬಗ್ಗೆ ಹಾಡಿ ಹೊಗಳಿದ್ದಾರೆ.